ಅಫ್ಘಾನಿಸ್ತಾನ ಏಕದಿನ, ಟೆಸ್ಟ್ ಕ್ರಿಕೆಟ್ ತಂಡಕ್ಕೆ ರಹ್ಮತ್ ಶಾ ನೂತನ ನಾಯಕ!
ಅಫ್ಘಾನಿಸ್ತಾನ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಹಷ್ಮತ್‌ವುಲ್ಲಾ ಶಾಹಿದಿ ಕೆಳಗೆ ಇಳಿದ ಬಳಿಕ ಇದೀಗ ನೂತನ ನಾಯಕನನ್ನು ಆಫ್ಘನ್ ಕ್ರಿಕೆಟ್ ಮಂಡಳಿ ನೇಮಿಸಿದೆ. ಅಫ್ಘಾನಿಸ್ತಾನ ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ರಹ್ಮತ್ ಶಾ ಅವರನ್ನು ನೂತನ ನಾಯಕನನ್ನಾಗಿ ಎಸಿಬಿ ನೇಮಿಸಿದೆ.
ರಹ್ಮತ್ ಶಾ ಅಫ್ಘಾನಿಸ್ತಾನ ತಂಡದ ನೂತನ ನಾಯಕ. -
ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ (Afghanistan) ಮಹತ್ವದ ಬದಲಾವಣೆಯಾಗಿದೆ. ನಾಲ್ಕು ವರ್ಷಗಳ ಕಾಲ ಆಫ್ಘನ್ ಏಕದಿನ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಬಳಿಕ ಜುಲೈ 22 ರಂದು ಹಷ್ಮತ್‌ವುಲ್ಲಾ ಶಾಹಿದಿ (Hashmatullah Shahidi) ಅವರು ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿದು ಕೇವಲ ಆಟಗಾರನಾಗಿ ಮುಂದುವರಿಸಲು ಬಯಸಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಅಫ್ಘಾನಿಸ್ತಾನ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ನೂತನ ನಾಯಕನನ್ನಾಗಿ ರಹ್ಮತ್ ಶಾ (Rahmat Shah) ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನೇಮಿಸಿದೆ.
ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಹಷ್ಮತ್‌ವುಲ್ಲಾ ಶಾಹಿದಿ ಅವರನ್ನು 2021ರ ಮೇ 31ರಂದು ನೇಮಕ ಮಾಡಲಾಗಿತ್ತು. 2022ರ ಜನವರಿಯಲ್ಲಿ ನೆದರ್ಲೆಂಡ್ಸ್ ವಿರುದ್ಧದ ಸರಣಿಯ ಗೆಲುವಿನೊಂದಿಗೆ ಅವರು ತಮ್ಮ ನಾಯಕತ್ವದ ಪಯಣವನ್ನು ಆರಂಭಿಸಿದ್ದರು. ಶಾಹಿದಿ ಅವರ ಯಶಸ್ವಿ ನಾಯಕತ್ವದ ಅವಧಿಯಲ್ಲಿ ಅಫ್ಘಾನಿಸ್ತಾನ ತಂಡ ಹಲವು ಸ್ಮರಣೀಯ ಗೆಲುವುಗಳನ್ನು ದಾಖಲಿಸಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಶ್ರೇಯಾಂಕದಲ್ಲಿಯೂ ತಂಡ ಗಮನಾರ್ಹ ಪ್ರಗತಿ ಸಾಧಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅಫ್ಘಾನಿಸ್ತಾನ ಒಡಿಐ ನಾಯಕತ್ವದಿಂದ ಕೆಳಗಿಳಿದು ಭಾವುಕ ಸಂದೇಶ ಹಂಚಿಕೊಂಡ ಹಷ್ಮತ್‌ವುಲ್ಲಾ ಶಾಹಿದಿ!
ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ 55 ಏಕದಿನ ಪಂದ್ಯಗಳಲ್ಲಿ 27 ಗೆಲುವುಗಳನ್ನು ದಾಖಲಿಸಿತು. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ತಂಡವನ್ನು ಮುನ್ನಡೆಸಿ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಐತಿಹಾಸಿಕ ಗೆಲುವುಗಳನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಈ ಅಮೋಘ ಪ್ರದರ್ಶನದ ಫಲವಾಗಿ ಅಫ್ಘಾನಿಸ್ತಾನ ತಂಡ ಆ ಟೂರ್ನಿಯಲ್ಲಿ ಆರನೇ ಸ್ಥಾನ ಪಡೆದು ಗಮನ ಸೆಳೆದಿತ್ತು.
ಈ ಅವಧಿಯಲ್ಲಿ ರಹ್ಮತ್ ಶಾ ಅವರು ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಹಷ್ಮತ್‌ವುಲ್ಲಾ ಶಾಹಿದಿ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಅಫ್ಘಾನಿಸ್ತಾನದ ಈ ಅನುಭವಿ ಟಾಪ್ ಆರ್ಡರ್ ಬ್ಯಾಟರ್ ಇದುವರೆಗೆ 128 ಏಕದಿನ ಪಂದ್ಯಗಳು ಹಾಗೂ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
𝐂𝐀𝐏𝐓𝐀𝐈𝐍𝐂𝐘 𝐒𝐇𝐈𝐅𝐓 𝐀𝐋𝐄𝐑𝐓! 🚨@RahmatShah_08 has been appointed Afghanistan’s new Test and ODI captain, with @RGurbaz_21 named as his deputy. The leadership change follows @Hashmat_50’s resignation from the role last evening. 👍
— Afghanistan Cricket Board (@ACBofficials) July 22, 2026
🔗: https://t.co/rWDxUG15Sj… pic.twitter.com/X8GKHETq9q
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ತನ್ನ ಪ್ರಕಟಣೆಯಲ್ಲಿ, "ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಅಪಾರ ಅನುಭವ, ನಾಯಕತ್ವದ ಗುಣಗಳು ಹಾಗೂ ತಂಡದ ಒಟ್ಟಾರೆ ರಚನೆಯ ಬಗ್ಗೆ ಇರುವ ಅರಿವಿನಿಂದ ರಹ್ಮತ್ ಶಾ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರ ಅನುಭವ, ನಾಯಕತ್ವ ಸಾಮರ್ಥ್ಯ ಮತ್ತು ತಂಡದ ಬಗ್ಗೆ ಇರುವ ತಿಳುವಳಿಕೆ ಅಫ್ಘಾನಿಸ್ತಾನವು ಮತ್ತಷ್ಟು ಮಹತ್ವದ ಯಶಸ್ಸು ಸಾಧಿಸಲು ನೆರವಾಗಲಿದೆ ಎಂಬ ವಿಶ್ವಾಸ ನಮಗಿದೆ" ಎಂದು ತಿಳಿಸಿದೆ.
33 ವರ್ಷದ ರಹಮತ್ ಶಾ ಅವರ ನಾಯಕತ್ವದ ಸಾಮರ್ಥ್ಯದ ಮೇಲೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.
ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ!
ರಹಮಾನುಲ್ಲಾ ಗುರ್ಬಾಝ್ ಉಪ ನಾಯಕ
ಆಕ್ರಮಣಕಾರಿ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ರಹಮಾನ್‌ವುಲ್ಲಾ ಗುರ್ಬಾಝ್ ಅವರನ್ನು ಭವಿಷ್ಯದ ಎಲ್ಲಾ ಸ್ವರೂಪದ ನಾಯಕತ್ವಕ್ಕೆ ನೇಮಿಸುವ ಹಿನ್ನೆಲೆಯಲ್ಲಿ ಅವರನ್ನು ಇದೀಗ ಉಪ ನಾಯಕನನ್ನಾಗಿ ಆರಿಸಲಾಗಿದೆ. 24ರ ಪ್ರಾಯದ ರಹಮಾನ್‌ವುಲ್ಲಾ ಗುರ್ಬಾಝ್ ಅವರು 55 ಒಡಿಐ ಪಂದ್ಯಗಳು ಹಾಗೂ 87 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಇವರ ಏಕದಿನ ಕ್ರಿಕೆಟ್ ದಾಖಲೆಗಳು ಗಮನ ಸೆಳೆದಿವೆ. ಅವರು 50 ಓವರ್‌ಗಳ ಸ್ವರೂಪದಲ್ಲಿ 37.70 ರ ಸರಾಸರಿ ಹಾಗೂ 90.29ರ ಸ್ಟ್ರೈಕ್ ರೇಟ್‌ನಲ್ಲಿ 2036 ರನ್‌ಗಳನ್ನು ಕಲೆ ಹಾಕಿದ್ದಾರೆ.