ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಎಸ್‌ಸಿಎ ಅಂಡರ್‌-14 ಟೂರ್ನಿಯ ಪಂದ್ಯದಲ್ಲಿ ರಾಜ್ವೀರ್‌ ಪದಂ ಮೆಹ್ತಾ ದ್ವಿಶತಕ, ಕರಣ್‌ ಗೌಡ ಶತಕ!

ರಾಜ್ವೀರ್‌ ಪದಮ್‌ ಮೆಹ್ತಾ ಅವರ ದ್ವಿಶತಕ ಹಾಗೂ ಕರಣ್‌ ಗೌಡ್‌ ಅವರ ಶತಕದ ಬಲದಿಂದ ರಾಜಾಜಿನಗರ ಕ್ರಿಕೆಟರ್ಸ್‌ ತಂಡ, ಸಿಟಿ ಜಿಮ್ಖಾನ ವಿರುದ್ಧದ ಕೆಎಸ್‌ಸಿಎ ಅಂಡರ್‌-19 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 187 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ರಾಜಾಜಿನಗರ ತಂಡ ಶುಭಾರಂಭ ಕಂಡಿದೆ.

ಕೆಎಸ್‌ಸಿಎ ಅಂಡರ್‌-14 ಟೂರ್ನಿಯಲ್ಲಿ ರಾಜ್ವೀರ್‌ ದ್ವಿಶತಕ, ಕರಣ್‌ ಶತಕ!

ರಾಜಾಜಿನಗರ ಕ್ರಿಕೆಟರ್ಸ್‌ ತಂಡದ ರಾಜ್ವೀರ್‌ ಮೆಹ್ತಾ, ಕರಣ್‌ ಗೌಡ. -

Profile
Ramesh Kote Oct 28, 2026 8:13 PM

ಬೆಂಗಳೂರು: ರಾಜ್ವೀರ್‌ ಪದಮ್‌ ಮೆಹ್ತಾ ಅವರ ದ್ವಿಶತಕ ಹಾಗೂ ಕರುಣ್‌ ಗೌಡ ಅವರ ಶತಕದ ಬಲದಿಂದ ರಾಜಾಜಿನಗರ ಕ್ರಿಕೆಟರ್ಸ್‌ ತಂಡ, ಕೆಎಸ್‌ಸಿಎ ಅಂಡರ್‌-19 ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಸಿಟಿ ಜಿಮ್ಖಾನ ತಂಡದ ಎದುರು 187 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ಭರ್ಜರಿ ಶುಭಾರಂಭವನ್ನು ಕಂಡಿದೆ. ಇನ್ನು ಜಿಮ್ಖಾನ ತಂಡ 50 ಓವರ್‌ಗಳನ್ನು ಮುಗಿಸಿದರೂ ಕನಿಷ್ಠ 150 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗದೆ ಸೋಲು ಒಪ್ಪಿಕೊಂಡಿತು.

ನಗರದ ಕೆಆರ್‌ ಪುರಂನ ಎಸ್‌ಡಬ್ಲ್ಯುಆರ್‌ ಮೈದಾನದಲ್ಲಿ ಅಕ್ಟೋಬರ್‌ 28 ರಂದು ಬುಧವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ರಾಜಾಜಿ ನಗರದ ತಂಡ ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿತ್ತು. ಅದರಂತೆ ರಾಜ್ವೀರ್‌ ಪದಮ್‌ ದ್ವಿಶತಕ ಹಾಗೂ ಕರಣ್‌ ಅವರ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 329 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಜಿಮ್ಖಾನ ತಂಡಕ್ಕೆ 330 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ʻನ್ಯೂಜಿಲೆಂಡ್‌ನಲ್ಲಿ ಕೊನೆಯ ಬಾರಿ ರೋಹಿತ್‌, ಕೊಹ್ಲಿಯನ್ನು ಎದುರಿಸುತ್ತೇನೆʼ:ಕೈಲ್‌ ಜೇಮಿಸನ್‌!

ಬಳಿಕ ಗುರಿಯನ್ನು ಹಿಂಬಾಲಿಸಿದ ಸಿಟಿ ಜಿಮ್ಖಾನ ತಂಡಕ್ಕೆ ಓಪನರ್‌ ಗಗನ್‌ ಪಿ ಮೈಯಾ ಅವರು 42 ರನ್‌ಗಳನ್ನು ಕಲೆ ಹಾಕುವ ಮೂಲಕ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಅಲ್ಲದೆ ಬೈರವ್‌ ಗೌಡ (30 ರನ್‌) ಕೂಡ ಗಗನ್‌ಗೆ ಉತ್ತಮ ಸಾಥ್‌ ನೀಡಿದ್ದರು. ಆದರೆ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ ಬಳಿಕ ಸಿಟಿ ಜಿಮ್ಖಾನ ತಂಡದ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಹೋರಾಟದ ಮನೋಭಾವವನ್ನು ಕಳೆದುಕೊಂಡರು ಅಂತಿಮವಾಗಿ ಜಿಮ್ಖಾನ ತಂಡ 9 ವಿಕೆಟ್‌ಗಳಿಂದ 142 ರನ್‌ಗಳಿಗೆ ಸೀಮಿತಾಯಿತು.

ರಾಜಾಜಿನಗರ ಕ್ರಿಕೆಟರ್ಸ್‌ ಪರ ಉತ್ತಮವಾಗಿ ಬೌಲ್‌ ಮಾಡಿದ ಸಂಕಲ್ಪ್‌ ಯಾದವ್‌, ಮೋಹಿತ್‌ ವಿ ಹಾಗೂ ಕರಣ್‌ ಬಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.

IND vs NZ: ಟಿ20ಐ ಸರಣಿಯ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಲು ಸಿದ್ದ ಎಂದ ಭುವನೇಶ್ವರ್‌ ಕುಮಾರ್‌!

ರಾಜ್ವೀರ್‌ ಪದಮ್‌ ಮೆಹ್ತಾ ಭರ್ಜರಿ ದ್ವಿಶತಕ

ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮೊದಲು ಬ್ಯಾಟ್‌ ಮಾಡಿದ ರಾಜಾಜಿನಗರ ತಂಡದ ರಾಜ್ವೀರ್‌ ಪದಮ್‌ ಮೆಹ್ತಾ ಬ್ಯಾಟಿಂಗ್‌. ಇನಿಂಗ್ಸ್‌ ಆರಂಭಿಸಿ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ರಾಜ್ವೀರ್‌, ಜಿಮ್ಖಾನ ತಂಡದ ಬೌಲರ್‌ಗಳಿಗೆ ಬೆವರಿಳಿಸಿದರು. ಸೊಗಸಾಗಿ ಬ್ಯಾಟ್‌ ಮಾಡಿದ ಇವರು, ಆಡಿದ 168 ಎಸೆತಗಳಲ್ಲಿ 14 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 201 ರನ್‌ಗಳನ್ನು ದಾಖಲಿಸಿದರು. ಅಲ್ಲದೆ ಶತಕ ಬಾರಿಸಿದ ಕರಣ್‌ ಗೌಡ ಅವರ ಜೊತೆ 263 ರನ್‌ಗಳ ಜೊತೆಯಾಟವನ್ನು ಆಡಿದರು.

ಕರಣ್‌ ಗೌಡ ಸೆಂಚುರಿ

ರಾಜ್ವೀರ್‌ ಪದಮ್‌ ಜೊತೆಗೆ ಕ್ರೀಸ್‌ನಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಕರಣ್‌ ಗೌಡ್‌ ಕೂಡ ತಮ್ಮ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು ಆಡಿದ 120 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 105 ರನ್‌ಗಳನ್ನು ಗಳಿಸಿ ಶತಕವನ್ನು ಬಾರಿಸಿದರು. ಆ ಮೂಲಕ ತಮ್ಮ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.