ಅದೃಷ್ಟ ಅಂದ್ರೆ ಹೀಗಿರಬೇಕು; 33 ವರ್ಷಗಳ ನಂತರ ಯುಎಇಯಲ್ಲಿ 12.9 ಕೋಟಿ ರೂಪಾಯಿ ಲಾಟರಿ ಗೆದ್ದ ಭಾರತೀಯ
Viral News: ಯುಎಇನಲ್ಲಿ ಸುಮಾರು 33 ವರ್ಷದಿಂದ ನೆಲೆಸಿರುವ ಭಾರತ ಮೂಲಕ ಕಿಶೋರ್ ಪಾಂಡುರಂಗ ರಾವ್ ಎಂಬವರಿಗೆ ಅದೃಷ್ಟ ಖುಲಾಯಿಸಿದೆ. ಯುಎಇಯಲ್ಲಿ 33 ವರ್ಷ ನೆಲೆಸಿದ ನಂತರ ಲಾಟರಿಯಲ್ಲಿ ಅವರಿಗೆ 12.9 ಕೋಟಿ ರೂಪಾಯಿ ಸಿಕ್ಕಿದೆ.
12.9 ಕೋಟಿ ಲಾಟರಿ ಗೆದ್ದ ಭಾರತೀಯ ಕಿಶೋರ್ ಪಾಂಡುರಂಗ ರಾವ್ -
ಶಾರ್ಜಾ, ಅ. 28: ಲಕ್ ಅನ್ನೋದು ಯಾವಾಗ ಬೇಕಾದರೂ ಯಾರ ಬದುಕನ್ನು ಬೇಕಾದರೂ ಬದಲಾಯಿಸಬಹುದು. ಅದೃಷ್ಟದಿಂದಲೇ ಕೆಲವರ ಬದುಕು ಬದಲಾಗಿದ್ದೂ ಇದೆ. ಇದಕ್ಕೆ ಸಾಕ್ಷಿಯಾಗಿ ಯುಎಇಯಲ್ಲಿ ಸುಮಾರು 33 ವರ್ಷದಿಂದ ನೆಲೆಸಿರುವ ಭಾರತ ಮೂಲಕ ಕಿಶೋರ್ ಪಾಂಡುರಂಗ ರಾವ್ ಎಂಬವರಿಗೆ ಬಂಪರ್ ಲಾಟರಿವೊಂದು ಅದೃಷ್ಟ ತಂದಿದೆ. ಭಾರತೀಯ ವಲಸಿಗ ಕಿಶೋರ್ ಅವರಿಗೆ ಲಾಟರಿ ಮೂಲಕ 12.9 ಕೋಟಿ ರೂಪಾಯಿ ಒಲಿದು ಬಂದಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಲಕ್ ಅಂದ್ರೆ ಹೀಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಯುಎಇಯಲ್ಲಿ ಸುಮಾರು 33 ವರ್ಷಗಳಿಂದ ನೆಲೆಸಿರುವ ಭಾರತ ಮೂಲದ ಕಿಶೋರ್ ಪಾಂಡುರಂಗ ರಾವ್ ಸುಮಾರು 12.9 ಕೋಟಿ ರೂಪಾಯಿ ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ಅಕ್ಟೋಬರ್ ಮೂರರಂದು ನಡೆದ ಯುಎಇ ಲಾಟರಿಯ ‘ಲಕ್ಕಿ ಡೇ’ ಡ್ರಾದಲ್ಲಿ ಈ ಗೆಲುವನ್ನು ಪಡೆದುಕೊಂಡಿದ್ದಾರೆ. ವಿಶೇಷ ವೆಂದರೆ ರಾವ್ ಅವರ 60ನೇ ಜನ್ಮದಿನಕ್ಕೆ ಕೇವಲ 5 ದಿನ ಇರುವಾಗ ಈ ಅದೃಷ್ಟ ಅವರ ಪಾಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ:
Say hello to Kishore, our latest AED 5 MILLION Second Prize winner! 🏆 Kishore has a lot to celebrate, especially with his 60th birthday making this winning moment even more memorable!🎉 A big congratulations to Kishore! #TheUAELottery #WinnerSpotlight #DareToImagine https://t.co/PI2kHiN4wn
— The UAE Lottery (@theuaelottery) October 26, 2026
1993ರಲ್ಲಿ ಯುಎಇಗೆ ತೆರಳಿದ್ದ ಅವರು ದುಬೈ, ಅಜ್ಮಾನ್, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನೆಲೆಸಿದ್ದರು. ಪ್ರಸ್ತುತ ಶಾರ್ಜಾದಲ್ಲಿ ವಾಸವಾಗಿದ್ದಾರೆ. ಇವರು ಕೇವಲ 1,300 ರೂಪಾಯಿ ನೀಡಿ 'ಈಸಿ ಪಿಕ್' ಆಯ್ಕೆಯ ಮೂಲಕ ತಾವೇ ಲಾಟರಿ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದರು.
ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್ ಮಾಡಬಹುದು
ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಈ ಹಣವನ್ನು ಬಳಸಲು ಬಯಸಿದ್ದಾರೆ. ಗೆದ್ದ ಹಣದಿಂದ ಹಲವು ವರ್ಷಗಳಿಂದ ಹೊಂದಿದ್ದ ಯುಎಇಯ 'ಗೋಲ್ಡನ್ ವೀಸಾ' ಪಡೆಯುವ ಕನಸನ್ನು ಹೊಂದಿದ್ದಾರೆ. ಅದರ ಜತೆ ಪತ್ನಿಯೊಂದಿಗೆ ಪ್ರಪಂಚವನ್ನು ಸುತ್ತಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ.