ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರವಿ ಶಾಸ್ತ್ರಿ-ಇಯಾನ್‌ ಮಾರ್ಗನ್‌ ಆಯ್ಕೆಯ ಭಾರತ-ಇಂಗ್ಲೆಂಡ್‌ ಸಂಯೋಜನೆಯ ಒಡಿಐ ಪ್ಲೇಯಿಂಗ್‌ XI

ಮಾಜಿ ಕ್ರಿಕೆಟಿಗರಾದ ರವಿ ಶಾಸ್ತ್ರಿ ಹಾಗೂ ಇಯಾನ್‌ ಮಾರ್ಗನ್‌ ಅವರು, ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ Xi ಅನ್ನು ಆರಿಸಿದ್ದಾರೆ. ಈ ತಂಡದ ನಾಯಕತ್ವವನ್ನು ಎಂಎಸ್‌ ಧೋನಿಗೆ ನೀಡಲಾಗಿದೆ. ಇದರಲ್ಲಿ 9 ಮಂದಿ ಭಾರತದ ಆಟಗಾರರು ಹಾಗೂ ಮೂವರು ಆಂಗ್ಲರನ್ನು ಆರಿಸಲಾಗಿದೆ.

ಶಾಸ್ತ್ರಿ, ಮಾರ್ಗನ್‌ ಆಯ್ಕೆಯ ಭಾರತ-ಇಂಗ್ಲೆಂಡ್‌ ಸಂಯೋಜನೆಯ ಪ್ಲೇಯಿಂಗ್‌ XI

ಭಾರತ-ಇಂಗ್ಲೆಂಡ್‌ ಸಂಯೋಜನೆಯ ತಂಡವನ್ನು ಕಟ್ಟಿದ ಶಾಸ್ತ್ರಿ-ಮಾರ್ಗನ್‌. -

Profile
Ramesh Kote Jul 23, 2026 3:23 PM

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾದ ಕೆಲವೇ ದಿನಗಳಲ್ಲಿ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಹಾಗೂ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ (Eoin Morgan) ಉಭಯ ದೇಶಗಳ ಸಾರ್ವಕಾಲಿಕ ಸಂಯೋಜಿತ ಏಕದಿನ (ODI) ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಭಾರತೀಯ ಆಟಗಾರರೇ ಮೇಲುಗೈ ಸಾಧಿಸಿದ್ದು, ಇಂಗ್ಲೆಂಡ್‌ನಿಂದ ಕೇವಲ ಮೂರು ಆಟಗಾರರಿಗೆ ಮಾತ್ರ ಸ್ಥಾನ ನೀಡಲಾಗಿದೆ.

ಸ್ಕೈ ಸ್ಪೋರ್ಟ್ಸ್ ಪ್ರಕಟಿಸಿದ ವಿಡಿಯೊದಲ್ಲಿ ಇಂಗ್ಲೆಂಡ್‌ಗೆ ಏಕೈಕ ವಿಶ್ವಕಪ್ ಗೆಲುವು ತಂದುಕೊಟ್ಟ ನಾಯಕನಾಗಿದ್ದರೂ ಇಯಾನ್ ಮಾರ್ಗನ್ ತಮ್ಮ ತಂಡದಲ್ಲಿ ತಮಗೆ ಸ್ಥಾನವನ್ನು ನೀಡಿಲ್ಲ. ಆದರೆ ಭಾರತಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟ ಇಬ್ಬರು ನಾಯಕರಾದ ಕಪಿಲ್ ದೇವ್ ಹಾಗೂ ಎಂ.ಎಸ್ ಧೋನಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲೂ 2011ರ ವಿಶ್ವಕಪ್ ವಿಜೇತ ನಾಯಕ ಧೋನಿ ಅವರನ್ನು ಈ ಸಂಯೋಜಿತ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರವಿ ಶಾಸ್ತ್ರಿ ತಮ್ಮನ್ನು ಆಯ್ಕೆ ಮಾಡದೇ, ಆ ತಂಡದಿಂದ ಕಪಿಲ್ ದೇವ್ ಅವರಿಗೆ ಮಾತ್ರ ಸ್ಥಾನ ನೀಡಿದ್ದಾರೆ.

ರವಿ ಶಾಸ್ತ್ರಿ ಮತ್ತು ಇಯಾನ್ ಮಾರ್ಗನ್ ಆಯ್ಕೆ ಮಾಡಿದ ಸಾರ್ವಕಾಲಿಕ ಭಾರತ-ಇಂಗ್ಲೆಂಡ್ ಸಂಯೋಜಿತ ಏಕದಿನ ತಂಡದಲ್ಲಿ ಅಗ್ರ ಆರು ಮಂದಿ ಬ್ಯಾಟರ್‌ಗಳಲ್ಲಿ ಇಂಗ್ಲೆಂಡ್‌ನಿಂದ ಸ್ಥಾನ ಪಡೆದ ಏಕೈಕ ಆಟಗಾರ ಜೋಸ್ ಬಟ್ಲರ್. ಇವರಿಬ್ಬರು ಆರಂಭಿಕ ಬ್ಯಾಟರ್‌ಗಳಾಗಿ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಿದ್ದಾರೆ.

ಭಾರತ vs ಜಿಂಬಾಬ್ವೆ ಟಿ20 ಸರಣಿಯ ದಾಖಲೆಯ ಅಂಕಿಅಂಶಗಳು ಹೀಗಿದೆ

2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 'ಟೂರ್ನಿ ಶ್ರೇಷ್ಠ ಪ್ರಶಸ್ತಿ' ಗೆದ್ದ ಯುವರಾಜ್ ಸಿಂಗ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಇಬ್ಬರು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಲಾಗಿದೆ. ಕಪಿಲ್ ದೇವ್ ಅವರ ಜೊತೆಗೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಬೆನ್ ಸ್ಟೋಕ್ಸ್ ಕೂಡ ತಂಡದಲ್ಲಿದ್ದಾರೆ.

2019ರ ಏಕದಿನ ವಿಶ್ವಕಪ್ ಫೈನಲ್‌ ಹಣಾಹಣಿಯಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿ ಇಂಗ್ಲೆಂಡ್‌ಗೆ ಐತಿಹಾಸಿಕ ವಿಶ್ವಕಪ್ ಗೆಲುವು ತಂದುಕೊಟ್ಟ ಸ್ಟೋಕ್ಸ್ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಬೌಲಿಂಗ್‌ ವಿಭಾಗ

ರವಿ ಶಾಸ್ತ್ರಿ ಮತ್ತು ಇಯಾನ್ ಮಾರ್ಗನ್ ತಮ್ಮ ಸಾರ್ವಕಾಲಿಕ ಭಾರತ-ಇಂಗ್ಲೆಂಡ್ ಸಂಯೋಜಿತ ಏಕದಿನ ತಂಡದಲ್ಲಿ ಆಡುವ XI ಜೊತೆಗೆ 12ನೇ ಆಟಗಾರನನ್ನೂ ಸೇರಿಸಿ ಒಟ್ಟು 12 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನಾಲ್ವರು ಪ್ರಮುಖ ಬೌಲರ್‌ಗಳಿಗೆ ಸ್ಥಾನ ನೀಡಿದ್ದಾರೆ. ಇಂಗ್ಲೆಂಡ್ ಪರ ವಿಶೇಷ ಸ್ಪಿನ್ನರ್ ಆದಿಲ್ ರಶೀದ್ ಮಾತ್ರ ಬೌಲರ್ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಭಾರತದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

IND vs ZIM: ʻಹೊರಗಡೆ ಟೀಕೆಗಳನ್ನು ಮರೆತು ಭಯಮುಕ್ತವಾಗಿ ಆಡಿʼ: ಸಹ ಆಟಗಾರರಿಗೆ ಶ್ರೇಯಸ್‌ ಅಯ್ಯರ್‌ ಸಲಹೆ!

ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಜಸ್‌ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ 2011ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಬೌಲರ್‌ಗಳಾದ ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರಿಗೂ ಈ ಸಂಯೋಜಿತ ತಂಡದಲ್ಲಿ ಸ್ಥಾನ ನೀಡಲಾಗಿದೆ.

ರವಿ ಶಾಸ್ತ್ರಿ, ಇಯಾನ್‌ ಮಾರ್ಗನ್‌ ಆಯ್ಕೆಯ ಭಾರತ-ಇಂಗ್ಲೆಂಡ್‌ ಸಂಯೋಜಿತ ಪ್ಲೇಯಿಂಗ್‌ XI: ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ಜೋಸ್‌ ಬಟ್ಲರ್‌, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಕಪಿಲ್‌ ದೇವ್‌, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ಬೆನ್‌ ಸ್ಟೋಕ್ಸ್‌, ಆದಿಲ್‌ ರಶೀದ್‌, ಹರ್ಭಜನ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಜಹೀರ್‌ ಖಾನ್‌