ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs SRH: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಹೈದರಾಬಾದ್‌ ಎದುರು ಆಡಲಿರುವ ರಜತ್‌ ಪಾಟಿದಾರ್‌!

IPL 2026: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯಕ್ಕೆ ಸಂಪೂರ್ಣ ಫಿಟ್‌ ಆಗಿದ್ದಾರೆ ಹಾಗೂ ಅಭ್ಯಾಸ ನಡೆಸುತ್ತಿದ್ದಾರೆಂದು ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಾಟ್‌ ತಿಳಿಸಿದ್ದಾರೆ. ಇದರ ಜೊತೆಗೆ ಭುವನೇಶ್ವರ್‌ ಮೌಲ್ಯದ ಬಗ್ಗೆಯೂ ಬೊಬಾಟ್‌ ಮಾತನಾಡಿದ್ದಾರೆ.

RCB vs SRH ಪಂದ್ಯದಲ್ಲಿ ಆಡಲಿರುವ ರಜತ್‌ ಪಾಟಿದಾರ್‌!

ರಜತ್‌ ಪಾಟಿದಾರ್‌ ಲಭ್ಯತೆ ಬಗ್ಗೆ ಮೊ ಬೊಬಾಟ್‌ ಮಾಹಿತಿ. -

Profile
Ramesh Kote May 21, 2026 10:17 PM

ಹೈದರಾಬಾದ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಕುತ್ತಿಗೆ ಗಾಯಕ್ಕೆ ತುತ್ತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌ (Rajat Patidar) ಸಂಪೂರ್ಣ ಫಿಟ್‌ ಆಗಿದ್ದು, ತಂಡದ ಜೊತೆಗೆ ಅಭ್ಯಾಸ ನಡೆಸುತ್ತಿದ್ದಾರೆಂದು ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಾಟ್‌ (Mo Bobat) ಮಾಹಿತಿ ನೀಡಿದ್ದಾರೆ. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಿದ್ದಾರೆಂದು ಖಚಿತಪಡಿಸಿದ್ದಾರೆ. ಈ ಪಂದ್ಯ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈಗಾಗಲೇ ಟೂರ್ನಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿರುವ ಆರ್‌ಸಿಬಿ ತಂಡಕ್ಕೆ ರಜತ್‌ ಪಾಟಿದಾರ್‌ ಲಭ್ಯತೆ ಬ್ಯಾಟಿಂಗ್‌ ವಿಭಾಗಕ್ಕೆ ಇನ್ನಷ್ಟು ಬಲವನ್ನು ತಂದುಕೊಟ್ಟಿದೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯವನ್ನು ಗೆದ್ದ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಅಗ್ರ ಎರಡು ಸ್ಥಾನಗಳಿಗಾಗಿ ಎಸ್‌ಆರ್‌ಎಚ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಪೈಪೋಟಿ ನಡೆಸುತ್ತಿವೆ.

“ರಜತ್‌ ಪಾಟಿದಾರ್‌ ಸಂಪೂರ್ಣವಾಗಿ ಆಡಲು ಸಿದ್ಧರಾಗಿದ್ದಾರೆ,” ಎಂದು ಮೊ ಬೊಬಾಟ್‌ ಮೇ 22ರಂದು ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

IPL 2026: ʻಮುಂಬೈ ಇಂಡಿಯನ್ಸ್‌ ತೊರೆಯಿರಿʼ-ಹಾರ್ದಿಕ್‌ ಪಾಂಡ್ಯಗೆ ಮೈಕಲ್‌ ವಾನ್‌ ಸಲಹೆ!

“ಅವರ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ನಡೆದುಕೊಂಡಿದ್ದೇವೆ ಮತ್ತು ಯಾವುದೇ ಅಪಾಯ ತೆಗೆದುಕೊಳ್ಳಲಿಲ್ಲ. ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡಿ ಚೇತರಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಕು ಎಂದು ಭಾವಿಸಿದ್ದೆವು. ಆದರೆ ಈಗ ಅವರು ಇಲ್ಲಿ ಇದ್ದಾರೆ, ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಪಂದ್ಯಕ್ಕೆ ಸಂಪೂರ್ಣ ಸಿದ್ಧರಾಗಿದ್ದಾರೆ,” ಎಂದು ಬೊಬಾಟ್ ಹೇಳಿದರು.



ಕೋಲ್ಕತಾ ನೈಟ್‌ ರೈಡರ್ಸ್‌ ಎದುರಿನ ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಅವರ ಹೆಲ್ಮೆಟ್‌ಗೆ ಚೆಂಡು ತಗುಲಿತ್ತು ಹಾಗೂ ಅವರು ಕನ್ಕಷನ್‌ಗೆ ಒಳಗಾಗಿದ್ದರು. ಇದರ ಪರಿಣಾಮವಾಗಿ ಅವರು ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌-ಬ್ಯಾಟರ್‌ ಜಿತೇಶ್‌ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ವೆಂಕಟೇಶ್‌ ಅಯ್ಯರ್‌ ಮ್ಯಾಚ್‌ ವಿನ್ನಿಂಗ್‌ ಅರ್ಧಶತಕ ಸಿಡಿಸಿ ಆರ್‌ಸಿಬಿಯನ್ನು ಗೆಲ್ಲಿಸಿದ್ದರು.

IPL 2026: ಎಸ್‌ಆರ್‌ಎಸ್‌ ಎದುರು ಸೋತರೆ ಅಗ್ರ ಸ್ಥಾನವನ್ನು ಕಳೆದುಕೊಳ್ಳುತ್ತಾ ಆರ್‌ಸಿಬಿ?

ಭುವನೇಶ್ವರ್‌ ಕುಮಾರ್‌ಗೆ ಬೊಬಾಟ್‌ ಮೆಚ್ಚುಗೆ

ಮೊ ಬೊಬಾಟ್‌ ಅವರು ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಅವರ ಪ್ರದರ್ಶನ ಮತ್ತು ನಾಯಕತ್ವ ಗುಣಗಳನ್ನು ವಿಶೇಷವಾಗಿ ಶ್ಲಾಘಿಸಿದರು.

“ಭುವಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಫಲಿತಾಂಶಗಳು ಅತ್ಯುತ್ತಮವಾಗಿವೆ, ಅವರು ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಅದಲ್ಲದೆ, ಅವರು ಅತ್ಯುತ್ತಮ ಲಯದಲ್ಲಿ ಬೌಲ್ ಮಾಡುತ್ತಿದ್ದಾರೆ. ಇನಿಂಗ್ಸ್‌ನ ಆರಂಭದಲ್ಲೂ ಹಾಗೂ ಅಂತಿಮ ಹಂತದಲ್ಲೂ ಅವರು ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದಾರೆ. ಆದ್ದರಿಂದ ಅವರ ಪ್ರದರ್ಶನದಿಂದ ನಾವು ತುಂಬಾ ಸಂತೋಷವಾಗಿದ್ದೇವೆ,” ಎಂದು ಅವರು ಗುಣಗಾನ ಮಾಡಿದರು.