ಭಾರತ ಟಿ20 ತಂಡದ ನಾಯಕತ್ವದಿಂದ ಸೂರ್ಯಕುಮಾರ್ ಯಾದವ್‌ರನ್ನು ತೆಗೆಯಬೇಡಿ: ಎಂಎಸ್‌ಕೆ ಪ್ರಸಾದ್!
ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಡದ ನಾಯಕನನ್ನಾಗಿ ನೇಮಿಸಬಹುದು ಎಂಬ ವರದಿಗಳು ನಿರಂತರವಾಗಿ ಕೇಳಿಬರುತ್ತಿವೆ. ಇದರ ನಡುವೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್‌ಗೆ ಎಂಎಸ್‌ಕೆ ಪ್ರಸಾದ್ ಬೆಂಬಲ. -
ನವದೆಹಲಿ: ಭಾರತದ ಮಾಜಿ ವಿಕೆಟ್ ಕೀಪರ್ ಮತ್ತು ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್(MSK Prasad) ಗುರುವಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕುವುದರ ವಿರುದ್ಧ ಎಚ್ಚರಿಕೆ ನೀಡಿದ್ದು, ಈ ಹಂತದಲ್ಲಿ ಅಂತಹ ಕ್ರಮ ಸೂಕ್ತವಲ್ಲ ಎಂದು ಸಲಹೆ ನೀಡಿದ್ದಾರೆ. ಆಯ್ಕೆದಾರರು ಭವಿಷ್ಯಕ್ಕಾಗಿ ಯುವ ನಾಯಕರನ್ನು ರೂಪಿಸುವತ್ತ ಗಮನಹರಿಸಬೇಕು ಎಂದು ಅವರು ಸೂಚಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಕೆಲವು ಅರ್ಧಶತಕಗಳನ್ನು ಗಳಿಸಿದರೂ ಮತ್ತು ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಪಂದ್ಯ ಗೆಲ್ಲುವ ಇನಿಂಗ್ಸ್ ಆಡಿದರೂ, ಸೂರ್ಯಕುಮಾರ್ ಸ್ಥಿರತೆಯನ್ನು ಕಾಯ್ದುಕೊಳ್ಳಲು ವಿಫಲರಾದ್ದಾರೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿದ್ದರೂ, 2026 ರ ಐಪಿಎಲ್ ಟೂರ್ನಿಯಲ್ಲಿ ಅವರ ಪ್ರದರ್ಶನ ನೀರಸವಾಗಿತ್ತು; ಅವರು 13 ಪಂದ್ಯಗಳಲ್ಲಿ 147.54 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 270 ರನ್ ಗಳಿಸಿದರು, ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಹಾಗಾಗಿ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.
ಸೂರ್ಯಕುಮಾರ್ ಯಾದವ್ ಔಟ್; ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ?
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು (ಜೂನ್ 26 ಮತ್ತು 28 ರಂದು ನಿಗದಿಯಾಗಿದೆ) ಮತ್ತು ಇಂಗ್ಲೆಂಡ್‌ನಲ್ಲಿ ಐದು ಟಿ20 ಪಂದ್ಯ ಸರಣಿಗಳಿಗೆ (ಜುಲೈ 1 ರಿಂದ 11 ರವರೆಗೆ) ತಂಡಗಳನ್ನು ಆಯ್ಕೆ ಮಾಡಲು ಭಾರತೀಯ ಆಯ್ಕೆದಾರರು ಶನಿವಾರ ಮುಂಬೈನಲ್ಲಿ ಸಭೆ ಸೇರಲಿದ್ದಾರೆ. ಹೆಚ್ಚುವರಿಯಾಗಿ, ಶ್ರೀಲಂಕಾ ಎ ವಿರುದ್ಧದ ಎರಡು ರೆಡ್-ಬಾಲ್ ಪಂದ್ಯಗಳಿಗೆ ಭಾರತ ಎ ತಂಡವನ್ನು ಆಯ್ಕೆ ಮಾಡಬೇಕಾಗಿದೆ. ಇದರ ನಡುವೆ, ಟಿ20 ನಾಯಕನಾಗಿ ಸೂರ್ಯಕುಮಾರ್ ಅವರ ಭವಿಷ್ಯವು ಚರ್ಚೆಯ ಪ್ರಮುಖ ವಿಷಯವಾಗಿದೆ.
ಐಎಎನ್‌ಎಸ್‌ಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರಸಾದ್, "ನೋಡಿ, ನೀವು ನಿಮ್ಮ ಮೊದಲ ಆಯ್ಕೆಯ ತಂಡವನ್ನು ಕಳುಹಿಸುತ್ತಿದ್ದೀರಾ ಅಥವಾ ಎರಡನೇ ಸ್ಟ್ರಿಂಗ್ ತಂಡವನ್ನು ಕಳುಹಿಸುತ್ತಿದ್ದೀರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊದಲ ಆಯ್ಕೆಯ ತಂಡವನ್ನು ಕಳುಹಿಸುತ್ತಿದ್ದರೆ, ಸೂರ್ಯಕುಮಾರ್ ಯಾದವ್ ಅವರನ್ನು ಕಡೆಗಣಿಸುವುದು ಸರಿಯಲ್ಲ, ಏಕೆಂದರೆ ಅವರು ಇತ್ತೀಚೆಗೆ ಮತ್ತೊಂದು ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮ್ಮನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ," ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
IPL 2026: ʻನಾನು ಈ ರೀತಿಯ ನೋಡಿರಲಿಲ್ಲʼ-ವೈಭವ್ ಸೂರ್ಯವಂಶಿ ಬಗ್ಗೆ ಲಿವಿಂಗ್‌ಸ್ಟೋನ್ ದೊಡ್ಡ ಹೇಳಿಕೆ!
"ಆದರ್ಶಪ್ರಾಯವಾಗಿ, ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ನಿಮ್ಮ ಮುಂದಿನ ನಾಯಕರನ್ನು ನೀವು ಸಿದ್ಧಪಡಿಸಿಕೊಳ್ಳಬೇಕು. ಅಕ್ಷರ್ ಪಟೇಲ್ ಟಿ20 ವಿಶ್ವಕಪ್ ಗೆಲುವಿನವರೆಗೂ ಉಪನಾಯಕರಾಗಿದ್ದರು. ನೀವು ಭವಿಷ್ಯದತ್ತ ನೋಡುತ್ತಿದ್ದರೆ, ನೀವು ಯುವ ನಾಯಕರನ್ನು ಸಿದ್ಧಪಡಿಸಬೇಕು. ಒಬ್ಬ ಆಟಗಾರನನ್ನು ಗುರುತಿಸಿ ಅವರನ್ನು ಸೂರ್ಯಕುಮಾರ್ ಅವರ ಉಪನಾಯಕನನ್ನಾಗಿ ನೇಮಿಸುವುದು ಪ್ರಯೋಜನಕಾರಿಯಾಗಿದೆ. ಸೂರ್ಯಕುಮಾರ್ ಒಬ್ಬ ಅದ್ಭುತ ಆಟಗಾರ," ಎಂದು ಶ್ಲಾಘಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಕಳೆದ ಒಂದೂವರೆ ವರ್ಷದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಪ್ರಸಾದ್ ಒಪ್ಪಿಕೊಂಡರು ಆದರೆ ತಾಳ್ಮೆಯಿಂದಿರಿ ಎಂದು ಸಲಹೆ ನೀಡಿದರು.
ಕೆಟ್ಟ ಸಂದೇಶ ನೀಡದಂತಾಗುತ್ತದೆ: ಎಂಎಸ್‌ಕೆ ಪ್ರಸಾದ್
"ಕಳೆದ ಒಂದೂವರೆ ವರ್ಷದಿಂದ ಅವರು ಕಠಿಣ ಹಂತವನ್ನು ದಾಟಿದ್ದಾರೆಂದು ನನಗೆ ತಿಳಿದಿದೆ. ಖಂಡಿತವಾಗಿಯೂ, ನಮ್ಮಲ್ಲಿ ರಜತ್ ಪಾಟಿದಾರ್ ಅವರಂತಹ ಉದಯೋನ್ಮುಖ ಆಟಗಾರರು ಸ್ಥಾನ ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ, ಈ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ತೆಗೆದುಹಾಕುವುದರಿಂದ ಸರಿಯಾದ ಸಂದೇಶ ಬರುವುದಿಲ್ಲ ಎಂದು ನಾನು ನಂಬುತ್ತೇನೆ. ಅವರಿಗೆ ಇನ್ನೂ ಕೆಲವು ಸರಣಿಗಳನ್ನು ನೀಡಿ, ಮತ್ತು ಅವರ ಕಳಪೆ ಫಾರ್ಮ್ ಮುಂದುವರಿದರೆ, ನಾಯಕತ್ವವನ್ನು ಹಸ್ತಾಂತರಿಸಬಹುದಾದ ಉಪನಾಯಕ ಸಿದ್ಧರಿರುತ್ತಾರೆ," ಎಂದು ಹೇಳಿದ್ದಾರೆ.
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್!
ನಾಯಕತ್ವದ ಸ್ಪರ್ಧಿ ಯಾರು?
ಸೂರ್ಯಕುಮಾರ್ ಅವರ ಸಂಭಾವ್ಯ ಉತ್ತರಾಧಿಕಾರಿಗಳ ಬಗ್ಗೆ ಕೇಳಿದಾಗ ಅವರು, "ಹಾರ್ದಿಕ್ ಒಬ್ಬ ಪ್ರಬಲ ಸ್ಪರ್ಧಿ. ಶ್ರೇಯಸ್ ಕೂಡ ಸಂಭಾವ್ಯ ಅಭ್ಯರ್ಥಿ. ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಕೂಡ ಸ್ಪರ್ಧೆಯಲ್ಲಿದ್ದಾರೆ" ಎಂದು ಹೇಳಿದರು.
"ಸಂಜು ದೀರ್ಘಕಾಲದವರೆಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇಶಾನ್ ಇತ್ತೀಚೆಗೆ ನಾಯಕತ್ವ ವಹಿಸಿದ್ದಾರೆ ಮತ್ತು ಅವರ ನಾಯಕತ್ವದ ಪ್ರತಿಭೆಯ ನೋಟವನ್ನು ತೋರಿಸಿದ್ದಾರೆ. ತಿಲಕ್ ವರ್ಮಾ ಕೂಡ ಭರವಸೆಯ ಆಟಗಾರ. ಮುಂಬರುವ ವರ್ಷಗಳಲ್ಲಿ ಭಾರತೀಯ ಟಿ20 ಕ್ರಿಕೆಟ್‌ಗೆ ತಿಲಕ್ ಉತ್ತರವಾಗಬಹುದು ಎಂದು ನಾವು ಭಾವಿಸುತ್ತೇವೆ" ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.