ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರತಿ ತಿಂಗಳು 40 ಲಕ್ಷ ರೂ. ಜೀವನಾಂಶ ಕೇಳಿದ್ದ ಪತ್ನಿ ಆರತಿ; ನಟ 'ಜಯಂ' ರವಿಗೆ ಕೌಟುಂಬಿಕ ನ್ಯಾಯಾಲಯ ಹೇಳಿದ್ದೇನು?

ತಮಿಳು ನಟ 'ಜಯಂ' ರವಿ ಮತ್ತು ಅವರ ಪತ್ನಿ ಆರತಿ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ನಟನಿಗೆ ಬಿಗ್ ರಿಲೀಫ್ ನೀಡಿದೆ. ತಿಂಗಳಿಗೆ 40 ಲಕ್ಷ ರೂಪಾಯಿ (ವರ್ಷಕ್ಕೆ 4.80 ಕೋಟಿ ರೂ.) ಜೀವನಾಂಶ ಕೇಳಿದ್ದ ಪತ್ನಿ ಆರತಿ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಪತ್ನಿ ಆರತಿಗೆ ತಿಂಗಳಿಗೆ 40 ಲಕ್ಷ ಕೊಡ್ಬೇಕಿಲ್ಲ; ನಟ 'ಜಯಂ' ರವಿಗೆ ರಿಲೀಫ್

-

Avinash GR
Avinash GR Jul 28, 2026 5:50 PM

ತಮಿಳು ನಟ 'ಜಯಂ' ರವಿ (ರವಿ ಮೋಹನ್) ಹಾಗೂ ಅವರ ಪತ್ನಿ ಆರತಿ ಅವರ ವಿಚ್ಛೇದನ ಪ್ರಕರಣವು ಕಳೆದ ಕೆಲವು ಸಮಯದಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಗೊತ್ತೇ ಇದೆ. ಪರಸ್ಪರ ಆರೋಪಗಳು ಹಾಗೂ ಲೀಗಲ್ ನೋಟಿಸ್‌ಗಳಿಂದ ಸುದ್ದಿಯಾಗುತ್ತಿದ್ದ ಈ ಪ್ರಕರಣದಲ್ಲಿ ಈಗೊಂದು ಮಹತ್ವದ ಬೆಳವಣಿಗೆಯಾಗಿದೆ. ಹೌದು, ನಟ ಜಯಂ ರವಿ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ದೊಡ್ಡ ರಿಲೀಫ್ ಸಿಕ್ಕಿದ್ದು, ಪತ್ನಿ ಆರತಿ ಅವರ ಭಾರಿ ಜೀವನಾಂಶದ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

40 ಲಕ್ಷ ರೂ. ಜೀವನಾಂಶದ ಅರ್ಜಿ ತಿರಸ್ಕಾರ

ಈ ವಿಚ್ಛೇದನ ಪ್ರಕರಣದಲ್ಲಿ ಅಚ್ಚರಿ ಮೂಡಿಸಿದ ವಿಚಾರವೆಂದರೆ, ಪತ್ನಿ ಆರತಿ ಅವರು ತಮ್ಮ ದಿನನಿತ್ಯದ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ತಿಂಗಳು 40 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಅಂದರೆ ವರ್ಷಕ್ಕೆ ಬರೋಬ್ಬರಿ 4.80 ಕೋಟಿ ರೂ. ಹಣವನ್ನು ಕೇವಲ ಜೀವನಾಂಶದ ರೂಪದಲ್ಲೇ ಪಾವತಿಸಬೇಕಿತ್ತು. ಆದರೆ, ಈ ಭಾರಿ ಮೊತ್ತವನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಾಲಯವು ಆರತಿ ಅವರ ಬೇಡಿಕೆಯನ್ನು ತಳ್ಳಿಹಾಕಿದೆ. ಪ್ರಕರಣದ ಅಂತಿಮ ವಿಚಾರಣೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಪ್ರತಿ ತಿಂಗಳು 3 ಲಕ್ಷ ರೂಪಾಯಿಗಳನ್ನು ಮಾತ್ರ ಜೀವನಾಂಶವಾಗಿ ಪಾವತಿಸಬೇಕು ಎಂದು ಆದೇಶಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಕ್ಕಳನ್ನು ಭೇಟಿಯಾಗಲು ಗ್ರೀನ್ ಸಿಗ್ನಲ್

ಜೀವನಾಂಶದ ವಿಷಯ ಮಾತ್ರವಲ್ಲದೆ, ಮಕ್ಕಳ ಪಾಲನೆಗೆ ಸಂಬಂಧಿಸಿದಂತೆಯೂ ಕೋರ್ಟ್ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಪತ್ನಿ ಆರತಿ ಅವರು ತಮ್ಮ ಮಕ್ಕಳನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ರವಿ ಮೋಹನ್‌ ಈ ಹಿಂದೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ನಿರ್ದಿಷ್ಟ ನಿಯಮಗಳಿಗೆ ಒಳಪಟ್ಟು ತಂದೆ ರವಿ ಅವರು ತಮ್ಮ ಮಕ್ಕಳನ್ನು ಭೇಟಿಯಾಗಲು ನ್ಯಾಯಾಲಯವು ಅನುಮತಿ ನೀಡಿದೆ ಎನ್ನಲಾಗಿದೆ.

Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

ಸಾಮಾನ್ಯವಾಗಿ ಒಂದು ಸಿನಿಮಾ ಪೂರ್ಣಗೊಳಿಸಲು ರವಿಗೆ ಈಗ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಪ್ರಸ್ತುತ ಅವರಿಗೆ ಸಿಗುತ್ತಿರುವ ಸಂಭಾವನೆಯ ಮಿತಿಯನ್ನು ನೋಡಿದರೆ ತಿಂಗಳಿಗೆ 40 ಲಕ್ಷ ರೂ. ನೀಡುವುದು ಅತ್ಯಂತ ಭಾರಿ ಹೊರೆಯಾಗುತ್ತಿತ್ತು. "ಒಂದು ವೇಳೆ ವರ್ಷದ ಇಡೀ ಗಳಿಕೆಯನ್ನು ಜೀವನಾಂಶಕ್ಕೇ ನೀಡಿದರೆ ಅವರ ಆರ್ಥಿಕ ಪರಿಸ್ಥಿತಿ ಏನಾಗಬೇಡ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದರು. ಇದೀಗ ಕೋರ್ಟ್ ನೀಡಿರುವ ತೀರ್ಪಿನಿಂದ ನಟ ಜಯಂ ರವಿಗೆ ದೊಡ್ಡ ಆರ್ಥಿಕ ಹೊರೆ ತಪ್ಪಿದಂತಾಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.