IPL 2026: ನುವಾನ್ ತುಷಾರ ಸ್ಥಾನಕ್ಕೆ ಆರ್‌ಸಿಬಿಗೆ ಸೇರ್ಪಡೆಯಾದ ರಿಚರ್ಡ್ ಗ್ಲೀಸನ್ ಯಾರು?
Richard Gleeson joins RCB: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದ ನಿಮಿತ್ತ ಶ್ರೀಲಂಕಾ ವೇಗಿ ನುವಾನ್ ತುಷಾರ ಅವರ ಸ್ಥಾನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಆರ್‌ಸಿಬಿಗೆ ಸೇರ್ಪಡೆಯಾದ ರಿಚರ್ಡ್ ಗ್ಲೀಸನ್. -
ನವದೆಹಲಿ: ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ತೆಗೆದುಕೊಂಡು ಬರುವಲ್ಲಿ ವಿಫಲರಾದ ನುವಾನ್ ತುಷಾರ (Nuwan Tushara) ಅವರ ಸ್ಥಾನಕ್ಕೆ ಇಂಗ್ಲೆಂಡ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ (Richard Gleeson) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ (RCB) ಸೇರ್ಪಡೆಯಾಗಿದ್ದಾರೆ. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗಕ್ಕೆ ಅವರು ಆರ್‌ಸಿಬಿ ಪರ ಆಡಲಿದ್ದಾರೆ. ಅಂದ ಹಾಗೆ ನುವಾನ್ ಆರಂಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕಾನೂನು ಸಮರ ಸಾರಿದ್ದರು. ನಂತರ ಅವರು ನ್ಯಾಯಾಲದಲ್ಲಿ ತಮ್ಮ ದೂರನ್ನು ವಾಪಸ್ ಪಡೆದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಳಿ ಕ್ಷಮೆ ಕೇಳಿದ್ದರು.
ಐಪಿಎಲ್ ಟೂರ್ನಿಯು ಸದ್ಯ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ತಂಡಕ್ಕೆ ಮುಂದಿನ ಎರಡು ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ. ಹಾಗಾಗಿ ಆರ್‌ಸಿಬಿ ಇಂಗ್ಲೆಂಡ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು ಸೇರಿಸಿಕೊಂಡಿದೆ. 38ರ ಪ್ರಾಯದ ವೇಗಿಯನ್ನು 1.6 ಕೋಟಿ ರು ಗಳಿಗೆ ಆರ್‌ಸಿಬಿ ಕರೆಸಿಕೊಂಡಿದೆ. ಇಂಗ್ಲೆಂಡ್ ತಂಡದ ಪರ ಗ್ಲೀಸನ್ ಆರು ಟಿ20ಐ ಪಂದ್ಯಗಳನ್ನು ಆಡಿದ್ದು, 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IPL 2026: ಮುಂಬೈ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಈ ಆಟಗಾರನೇ ಕಾರಣ ಎಂದ ಶ್ರೇಯಸ್ ಅಯ್ಯರ್!
ರಿಚರ್ಡ್ ಗ್ಲೀಸನ್ ಪಾಲಿಗೆ ಆರ್‌ಸಿಬಿ ಮೂರನೇ ಫ್ರಾಂಚೈಸಿಯಾಗಿದೆ. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಇವರು, 2025ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಇದ್ದರು. ಈ ಅವಧಿಯಲ್ಲಿ ಅವರಿಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. ಅಂದ ಹಾಗೆ ನಾಕ್‌ಔಟ್ ಹಂತದಲ್ಲಿ ಆರ್‌ಸಿಬಿ ಪರ ಆಡಲು ಇಂಗ್ಲೆಂಡ್ ವೇಗಿಗೆ ಅವಕಾಶ ಸಿಗಬಹುದು.
🚨 𝗥𝗶𝗰𝗵𝗮𝗿𝗱 𝗚𝗹𝗲𝗲𝘀𝗼𝗻 𝗶𝗻 𝗥𝗲𝗱, 𝗕𝗹𝘂𝗲, 𝗮𝗻𝗱 𝗚𝗼𝗹𝗱 🚨
— Royal Challengers Bengaluru (@RCBTweets) May 15, 2026
The English Speedster joins the Royal Challengers Bengaluru for the remainder of the #TATAIPL 2️⃣0️⃣2️⃣6️⃣ season, replacing Nuwan Thushara. ⚡❤️
Welcome, Richard! Time to wear the badge and #PlayBold. ❤️🔥 pic.twitter.com/VMmrNOm8mL
ಚೆನ್ನೈ ಸೂಪರ್ ಕಿಂಗ್ಸ್‌ಗೆ ಕುಲ್ದಿಪ್ ಯಾದವ್
ಇದರ ನಡುವೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಂದು ಬದಲಾವಣೆಯನ್ನು ಘೋಷಿಸಿದೆ. ಗಾಯಾಳು ಖಲೀಲ್ ಅಹ್ಮದ್ ಅವರ ಬದಲಿಗೆ ಭಾರತೀಯ ವೇಗಿ ಕುಲ್ದಿಪ್ ಯಾದವ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಅವರನ್ನು 30 ಲಕ್ಷ ರು. ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವೇಗದ ಬೌಲರ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದು, ಮೂರು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದಿದ್ದರು. ಅವರ ಇಕಾನಮಿ ರೇಟ್ 9.33 ಆಗಿತ್ತು. ಸೀಸನ್‌ನ ಇನ್ನುಳಿದ ಅವಧಿಗೆ ಹೆಚ್ಚುವರಿ ವೇಗದ ಬೌಲಿಂಗ್ ಆಯ್ಕೆಯಾಗಿ ಕುಲ್ದಿಪ್ ಯಾದವ್ ಅವರನ್ನು ಬಳಸಿಕೊಳ್ಳುವ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದೆ.
Official Announcement
— Chennai Super Kings (@ChennaiIPL) May 15, 2026
Kuldip Yadav is Yellove!
A new warrior joins the pride! 💛🦁
Note: Kuldip Yadav replaces Khaleel Ahmed, who was ruled out due to injury.#WhistlePodu pic.twitter.com/XCe6esUKKe
ಆರ್‌ಸಿಬಿಗೆ ಪ್ಲೇಆಫ್ಸ್ ಖಚಿತ, ಸಿಎಸ್‌ಕೆಗೆ ಎರಡು ಗೆಲುವು ಅಗತ್ಯ
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಟೂರ್ನಿಯ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತಡೆ ಪಡೆದಿದೆ. ಆರ್‌ಸಿಬಿ ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 16 ಅಂಕಗಳನ್ನು ಕಲೆ ಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನುಳಿದ ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದರೂ ಬೆಂಗಳೂರು ತಂಡ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಖಚಿತಪಡಿಸಿಕೊಳ್ಳಲಿದೆ.
ಇನ್ನು ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇಲ್ಲಿಯ ತನಕ ಆಡಿದ 11 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 12 ಅಂಕಗಳನ್ನು ಕಲೆ ಹಾಕಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ಚೆನ್ನೈ ತಂಡ ಪ್ಲೇಆಫ್ಸ್‌ಗೆ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲಿದೆ.