RCB vs GT: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ!
RCB vs GT: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಆರ್‌ಸಿಬಿ vs ಜಿಟಿ ನಡುವಣ ಐಪಿಎಲ್ ಪಂದ್ಯ. -
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು (RCB vs GT) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಗುಜರಾತ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಟಾಸ್ ವೇಳೆ ಮಾತನಾಡಿದ ಆರ್‌ಸಿಬಿ ಕಪ್ತಾನ ರಜತ್ ಪಾಟಿದಾರ್, ನಾವು ಮೊದಲು ಬೌಲ್ ಮಾಡುತ್ತೇವೆಂದು ಹೇಳಿದರು. ನಂತರ ತನ್ನ ಪ್ಲೇಯಿಂಗ್ XI ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ತರಲಾಗಿದ್ದು, ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾದ ಕಾರಣ, ಅವರ ಬದಲು ಜೇಕಬ್ ಬೆಥೆಲ್ ಕಣಕ್ಕೆ ಇಳಿಯಲಿದ್ದಾರೆಂದು ರಜತ್ ಮಾಹಿತಿ ನೀಡಿದರು.
RCB vs GT: ಗುಜರಾತ್ ಟೈಟನ್ಸ್ ಎದುರು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ! ಇದಕ್ಕೆ ಕಾರಣ ಇಲ್ಲಿದೆ
ಇನ್ನು ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್, ಮಾತನಾಡಿ ನಮ್ಮ ತಂಡದಲ್ಲಿ ಎರಡು ಬದಲಾವಣೆ ತರಲಾಗಿದೆ ಎಂದರು. ಜೇಸನ್ ಹೋಲ್ಡರ್ ಪ್ಲೇಯಿಂಗ್ Xiಗೆ ಮರಳಿದ್ದು, ಮಾನವ್ ಸುತಾರ್‌ಗೆ ಅವಕಾಶವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಜೇಸನ್ ಹೋಲ್ಡರ್ ಅವರು ಗುಜರಾತ್ ಟೈಟನ್ಸ್ ಪರ ಮೊದಲ ಐಪಿಎಲ್ ಪಂದ್ಯ ಇದಾಗಿದೆ.
ಆರ್‌ಸಿಬಿ ಇಲ್ಲಿಯವರೆಗೂ ಆಡಿದ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋತಿದೆ. ಒಟ್ಟು 8 ಅಂಕಗಳನ್ನು ಕಲೆ ಹಾಕಿರುವ ರಜತ್ ಪಾಟಟಿದಾರ್ ಬಳಗ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಗುಜರಾತ್ ಟೈಟನ್ಸ್ ತಂಡ ಆಡಿದ ಆರು ಪಂದ್ಯಗಳಲ್ಲಿ ಮೂರಲ್ಲಿ ಗೆಲುವು ಪಡೆದಿದ್ದರೆ, ಇನ್ನುಳಿದ ಮೂರರಲ್ಲಿ ಸೋತು ನಿರಾಶೆ ಅನುಭವಿಸಿದೆ.
🚨 Toss 🚨@RCBTweets have won the toss and elected to bowl first against @gujarat_titans in Bengaluru
— IndianPremierLeague (@IPL) April 24, 2026
Updates ▶️ https://t.co/5ZJjfv5Nr6#TATAIPL | #KhelBindaas | #RCBvGT pic.twitter.com/Rbn3cx4DRm
ಈ ಎರಡೂ ತಂಡಗಳು ತಮ್ಮ-ತಮ್ಮ ಕೊನೆಯ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದವು. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತಿದ್ದರೆ, ಗುಜರಾತ್ ಟೈಟನ್ಸ್, ಐದು ಬಾರಿ ಮುಂಬೈ ಇಂಡಿಯನ್ಸ್ ಎದುರು ಹೀನಾಯವಾಗಿ ಸೋತಿತ್ತು. ಇದೀಗ ಆರ್‌ಸಿಬಿ ಹಾಗೂ ಜಿಟಿ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿವೆ.
𝚃𝙾𝚂𝚂 & 𝙻𝙸𝙽𝙴 𝚄𝙿 📰
— Royal Challengers Bengaluru (@RCBTweets) April 24, 2026
Captain Patidar wins the flip and we'll be chasing tonight. 💥
Phil Salt misses out due to an injury, and in comes Starboy Jacob Bethell for his first game of #IPL2026. 🤩❤️#PlayBold #ನಮ್ಮRCB #RCBvGT @nothingindia pic.twitter.com/xfbv9OtMiC
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಮ್ ದಾರ್
ಇಂಪ್ಯಾಕ್ಟ್ ಪ್ಲೇಯರ್: ಜೇಕಬ್ ಬೆಥೆಲ್
Jason's debut. Manav's comeback in Chinnaswamy. We're locked in for RCB vs GT 🔒 pic.twitter.com/MRiyDebWsJ
— Gujarat Titans (@gujarat_titans) April 24, 2026
ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೇವಾಟಿಯಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡಾ, ಮಾನವ್ ಸುತಾರ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್