ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಐಸಿಸಿ ಹಾಲ್‌ ಆಫ್‌ ಫೇಮ್‌ʼ ಗೌರವಕ್ಕೆ ಭಾಜನರಾದ ಸೌರವ್‌ ಗಂಗೂಲಿಗೆ ಸಚಿನ್‌ ವಿಶೇಷ ಸಂದೇಶ!

ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಭಾಜನರಾದ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯ್ಷ ಸೌರವ್‌ ಗಂಗೂಲಿ ಅವರಿಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಈ ಗೌರವಕ್ಕೆ ಭಾಜನರಾದ 12 ಕ್ರಿಕೆಟಿಗ ಗಂಗೂಲಿ. ಅಂದಹಾಗೆ ಸಚಿನ್‌ ಅವರ ಸಂದೇಶ ವೈರಲ್‌ ಆಗಿದೆ.

ಸೌರವ್‌ ಗಂಗೂಲಿಗೆ ವಿಶೇಷ ಸಂದೇಶ ರವಾನಿಸಿದ ಸಚಿನ್‌ ತೆಂಡೂಲ್ಕರ್‌!

ಸೌರವ್‌ ಗಂಗೂಲಿಗೆ ಅಭಿನಂದನೆ ಸಲ್ಲಿಸಿದ ಸಚಿನ್‌ ತೆಂಡೂಲ್ಕರ್‌. -

Profile
Ramesh Kote Jul 9, 2026 5:48 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ನೀಡುವ ʻಐಸಿಸಿ ಹಾಲ್‌ ಆಫ್‌ ಫೇಮ್‌ʼ ಗೌರವಕ್ಕೆ ಭಾಜನರಾದ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿಗೆ (Sourav Ganguly) ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin tendulkar) ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಜುಲೈ 8 ರಂದು ಹುಟ್ಟು ಹಬ್ಬದ ದಿನದಂದೇ ಗಂಗೂಲಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಐಸಿಸಿ ಜುಲೈ 11 ರಂದು ಅಧಿಕೃತವಾಗಿ ಪ್ರಕಟಿಸಲಿದೆ.

ಈ ಗೌರವಕ್ಕೆ ಭಾಜನರಾದ 11ನೇ ಭಾರತೀಯ ಕ್ರಿಕೆಟಿಗ ಸೌರವ್‌ ಗಂಗೂಲಿ. ಇದಕ್ಕೂ ಮುನ್ನ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದ ಸುನೀಲ್‌ ಗವಾಸ್ಕರ್‌, ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿನೋ ಮಾಂಕಡ್‌, ಡಯಾನ ಎಡುಲ್ಜಿ, ವೀರೇಂದ್ರ ಸೆಹ್ವಾಗ್‌, ನೀತು ಡೇವಿಡ್‌ ಹಾಗೂ ಎಂಎಸ್‌ ಧೋನಿ ಅವರು ಕೂಡ ಈ ಗೌರವವನ್ನು ಸ್ವೀಕರಿಸಿದ್ದರು.

ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಸೌರವ್ ಗಂಗೂಲಿ

ಗಂಗೂಲಿಗೆ ಅಭಿನಂದನೆ ಸಲ್ಲಿಸಿದ ಸಚಿನ್‌

2025ರ ವರೆಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಅವರನ್ನು ಒಟ್ಟು 122 ಆಟಗಾರರಿಗೆ ನೀಡಲಾಗಿತ್ತು. ಇದರಲ್ಲಿ 107 ಪುರುಷ ಆಟಗಾರರಿಗೆ ಹಾಗೂ 14 ಮಹಿಳಾ ಆಟಗಾರ್ತಿಯರಿಗೆ ನೀಡಲಾಗಿದೆ. ಸೌರವ್‌ ಗಂಗೂಲಿ ಇದೀಗ ಹಾಲ್‌ ಅಫ್‌ ಫೇಮ್‌ಗೆ ಭಾಜನರಾದ ಬೆನ್ನಲ್ಲೆ ಕ್ರಿಕೆಟ್‌ ದೇವರು ದಾದಾಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ

"ನಾವು 14ನೇ ವಯಸ್ಸಿನಿಂದಲೇ ಒಬ್ಬರನ್ನೊಬ್ಬರು ತಿಳಿದಿರುವುದರಿಂದ ಈಗ ಅಚ್ಚರಿಪಡುವಂತಹ ವಿಷಯಗಳು ತುಂಬಾ ಕಡಿಮೆ ಉಳಿದಿವೆ. ಇದು ಕೂಡ ಅಂತಹದ್ದೇ ಒಂದು ಕ್ಷಣ. ಅಭಿನಂದನೆಗಳು ಸೌರವ್‌ ಗಂಗೂಲಿ. ಐಸಿಸಿ ಹಾಲ್ ಆಫ್ ಫೇಮ್‌ಗೆ ನೀವು ಸೇರ್ಪಡೆಯಾಗಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ," ಎಂದು ಸಚಿನ್‌ ತೆಂಡೂಲ್ಕರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



ಸಚಿನ್‌ ಸಂದೇಶಕ್ಕೆ ದಾದಾ ಪ್ರತಿಕ್ರಿಯೆ

"ಧನ್ಯವಾದಗಳು ಚಾಂಪಿಯನ್. ನಿಮ್ಮಂತಹ ದಿಗ್ಗಜರಿರುವ ಅದೇ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿರುವುದು ನನ್ನ ಕ್ರಿಕೆಟ್ ಜೀವನದ ಅತ್ಯಂತ ದೊಡ್ಡ ಗೌರವ ಮತ್ತು ತೃಪ್ತಿಯ ಕ್ಷಣವಾಗಿದೆ," ಎಂದು ಸೌರವ್‌ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.



ಗಂಗೂಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ

ಭಾರತ ತಂಡದ ಶ್ರೇಷ್ಠ ನಾಯಕರಲ್ಲಿ ಸೌರವ್‌ ಗಂಗೂಲಿ ಕೂಡ ಒಬ್ಬರು. ಅವರು 113 ಟೆಸ್ಟ್‌ ಪಂದ್ಯಗಳು, 311 ಒಡಿಐ ಪಂದ್ಯಗಳಿಂದ ಕ್ರಮವಾಗಿ 7212 ರನ್‌ಗಳು ಹಾಗೂ 11363 ರನ್‌ಗಳನ್ನು ಕಲೆ ಹಾಕಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38 ಶತಕಗಳನ್ನು ಸಿಡಿಸಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ 49 ಟೆಸ್ಟ್‌ ಪಂದ್ಯಗಳಲ್ಲಿ 21ರಲ್ಲಿ ಗೆಲುವು ಪಡೆದಿದೆ. ಇನ್ನು 146 ಒಡಿಐ ಪಂದ್ಯಗಳಲ್ಲಿ 76 ಗೆಲುವುಗಳನ್ನು ಪಡೆದಿದೆ. ಇವರ ನಾಯಕತ್ವದಲ್ಲಿ ಭಾರತ 2002ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಶ್ರೀಲಂಕಾ ಜೊತೆ ಜಂಟಿ ಚಾಂಪಿಯನ್‌ ಆಗಿತ್ತು. 2003ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಆಸ್ಟ್ರೇಲಿಯಾ ಎದುರು ಸೋಲುವ ಮೂಲಕ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು.