IND vs NZ: ಸಂಜು-ನಮನ್ ಸ್ಪೋಟಕ ಬ್ಯಾಟಿಂಗ್, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ!
ಸಂಜು ಸ್ಯಾಮ್ಸನ್ ಹಾಗೂ ನಮನ್ ದೀರ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆಯುವ ಮೂಲಕ ಶುಭಾರಂಭ ಕಂಡಿದೆ.
ನ್ಯೂಜಿಲೆಂಡ್ ಎದುರು ಭಾರತ ತಂಡಕ್ಕೆ 4 ವಿಕೆಟ್ ರೋಚಕ ಜಯ. -
ಕೈಸ್ಟ್ ಚರ್ಚ್: ಸಂಜು ಸ್ಯಾಮ್ಸನ್ (Sanju samson) ಹಾಗೂ ನಮನ್ ಧೀರ್ (Naman Dhir) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಹೈಸ್ಕೋರಿಂಗ್ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್ ಎದುರು 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆಯುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಕಂಡಿದೆ. ಇನ್ನು ದೊಡ್ಡ ಮೊತ್ತದ ಗುರಿ ನೀಡಿದ್ದರ ಹೊರತಾಗಿಯೂ ಬೌಲಿಂಗ್ ವೈಫಲ್ಯದಿಂದಾಗಿ ತವರು ಅಭಿಮಾನಿಗಳ ಎದುರು ಕಿವೀಸ್ ಸೋಲು ಒಪ್ಪಿಕೊಂಡಿತು.
ಗುರುವಾರ ಹೇಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಕಿವೀಸ್ ನೀಡಿದ್ದ 226 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ ಹಾಗೂ ನಮನ್ ಧೀರ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 19.4 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 230 ರನ್ಗಳನ್ನು ಕಲೆ ಹಾಕಿ ಗೆದ್ದು ಬೀಗಿತು. 33 ಎಸೆತಗಳಲ್ಲಿ 67 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
40 ಪ್ಲಸ್ ರನ್ ಹೊಡೆಸಿಕೊಂಡು ಅನಪೇಕ್ಷಿತ ದಾಖಲೆ ಬರೆದ ಭಾರತೀಯ ಬೌಲರ್ಗಳು
ಅಬ್ಬರಿಸಿದ ಸಂಜು ಸ್ಯಾಮ್ಸನ್
ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಭಾರತದ ಪರ ಇನಿಂಗ್ಸ್ ಆರಂಭಿಸಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ ಈ ಜೋಡಿ 5.5 ಓವರ್ಗಳಿಗೆ 93 ರನ್ಗಳನ್ನು ಕಲೆ ಹಾಕಿ ಭಾರತಕ್ಕೆ ಭದ್ರ ಅಡಿಪಾಯವನ್ನು ಹಾಕಿತು. 12 ಎಸೆತಗಳಲ್ಲಿ 29 ರನ್ ಗಳಿಸಿದ ಬಳಿಕ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಸಂಜು, 33 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 67 ರನ್ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 115ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.
A flying start that made the chase possible 🫡 Scorecard ▶️ https://t.co/ADfFnxXGzz #TeamIndia | #NZvIND | @IamSanjuSamson https://t.co/qBU50RVhrY
— BCCI (@BCCI) October 22, 2026
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ 28 ಎಸೆತಗಳಲ್ಲಿ 42 ರನ್ ಗಳಿಸಿ 200ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್, ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ ಅವರ ಜೊತೆಗೆ ನಿರ್ಣಾಯಕ 40ಕ್ಕೂ ಅಧಿಕ ಜೊತೆಯಾಟಗಳನ್ನು ಆಡಿದರು. ಕೊನೆಯಲ್ಲಿ ನಮನ್ ಧೀರ್ ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
225 ರನ್ ಕಲೆ ಹಾಕಿದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡ, ಗ್ಲೆನ್ ಫಿಲಿಪ್ಸ್ (82 ರನ್) ಅವರ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 225 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 226 ರನ್ಗಳ ಗುರಿಯನ್ನು ನೀಡಿತ್ತು.
4️⃣2️⃣* Runs 1️⃣5️⃣ Balls 2️⃣8️⃣0️⃣ Strike Rate 5️⃣ Fours & 2️⃣ Sixes How good was that match-winning finish from Naman Dhir? 👇 Scorecard ▶️ https://t.co/ADfFnxXGzz #TeamIndia | #NZvIND https://t.co/4PgLm8Rbim
— BCCI (@BCCI) October 22, 2026
ಕಿವೀಸ್ ಪರ ಇನಿಂಗ್ಸ್ ಆರಂಭಿಸಿದ ಟಿಮ್ ಸೈಫರ್ಟ್ ಹಾಗೂ ಫಿನ್ ಆಲೆನ್ ಅವರು ಮುರಿಯದ ಮೊದಲನೇ ವಿಕೆಟ್ಗೆ 49 ರನ್ಗಳನ್ನು ಕಲೆ ಹಾಕಿದರು. 17 ಎಸೆತಗಳಲ್ಲಿ 24 ರನ್ ಗಳಿಸಿದ ಬಳಿಕ ಟಿಮ್ ಸೈಫರ್ಟ್ ವಿಕೆಟ್ ಒಪ್ಪಿಸಿದರು. ಆದರೆ, ಫಿನ್ ಆಲೆನ್ ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ಮಿಂಚಿದರು. ಅವರು ಆಡಿದ 24 ಎಸೆತಗಳಲ್ಲಿ 45 ರನ್ ಬಾರಿಸಿ ಔಟ್ ಆದರು. ಡ್ಯಾರಿಲ್ ಮಿಚೆಲ್ 19 ಎಸೆತಗಳಲ್ಲಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಗ್ಲೆನ್ ಫಿಲಿಪ್ಸ್ ಸ್ಪೋಟಕ ಅರ್ಧಶತಕ
ಮಧ್ಯಮ ಕ್ರಮಂಕದಲ್ಲಿ ಕ್ರೀಸ್ಗೆ ಬಂದು ಸ್ಪೋಟಕ ಬ್ಯಾಟ್ ಮಾಡಿದ ಗ್ಲೆನ್ ಫಿಲಿಪ್ಸ್ ಭಾರತೀಯ ಬೌಲರ್ಗಳನ್ನು ಬಲವಾಗಿ ದಂಡಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಚೆಂಡನ್ನು ಮೂಲೆ ಮೂಲೆಗೆ ಕಳುಹಿಸಿದರು. ಅವರು ಆಡಿದ 40 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 82 ರನ್ಗಳನ್ನು ಬಾರಿಸಿದರು. ಅಲ್ಲದೆ 16 ಎಸೆತಗಳಲ್ಲಿ 31 ರನ್ ಬಾರಿಸಿದ ಬೆವನ್ ಅವರೊಂದಿಗೆ 73 ರನ್ಗಳನ್ನು ಬಾರಿಸಿದರು.
ಭಾರತದ ಪರ ಎಲ್ಲಾ ಬೌಲರ್ಗಳು 10ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ಗಳನ್ನು ನೀಡಿದರು. ಹಿರಿಯ ವೇಗಿ ಭುವನೇಶ್ವರ್ ಕುಮಾರ್ ನಾಲ್ಕು ಓವರ್ಗಳಿಗೆ ಒಂದೂ ವಿಕೆಟ್ ಪಡೆಯದೆ 49 ರನ್ಗಳನ್ನು ಬಿಟ್ಟುಕೊಟ್ಟರು. ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.