ಮೇಗನ್ ಶಟ್ಗೆ ಎರಡು ಪಂದ್ಯಗಳ ಅಮಾನತು ವಿಧಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
Megan Schutt suspension: "ಇದು ಕ್ರೀಡಾ ಸ್ಪರ್ಧೆಯ ಹೊರಗೆ ನಡೆದ ಘಟನೆಯಾಗಿದ್ದು, ಕ್ರೀಡಾ ಪ್ರದರ್ಶನಕ್ಕೆ ಸಂಬಂಧಿಸಿದ್ದಲ್ಲದಿದ್ದರೂ, 'ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ಮಾರ್ಗಸೂಚಿ'ಗಳನ್ನು ಪಾಲಿಸುವ ಜವಾಬ್ದಾರಿ ನನ್ನ ಮೇಲಿದೆ ಎಂಬುದು ನನಗೆ ಅರಿವಿದೆ. ಈ ಮಾರ್ಗಸೂಚಿಗಳ ಬಗ್ಗೆ ಆಟಗಾರರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತದೆ. ನಾನು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು" ಎಂದು ಮೇಗನ್ ಶುಟ್ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.
Megan Schutt -
ಸಿಡ್ನಿ, ಅ.22: ವೈದ್ಯರ ಸಲಹೆಯ ಮೇರೆಗೆ ಬಳಸುವ ಔಷಧಿಗಳಿಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಆಸ್ಟ್ರೇಲಿಯಾ ಮಹಿಳಾ ತಂಡದ ವೇಗಿ ಮೇಗನ್ ಶುಟ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಎರಡು ಪಂದ್ಯಗಳ ನಿಷೇಧ ವಿಧಿಸಿದೆ.
"ಸೂಚಿಸಲ್ಪಟ್ಟ ಔಷಧಿಗಳ ಬಳಕೆಗೆ ಸಂಬಂಧಿಸಿದಂತೆ, 'ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ಮಾರ್ಗಸೂಚಿಗಳಲ್ಲಿನ ಅವಶ್ಯಕತೆಗಳನ್ನು ಪಾಲಿಸುವಲ್ಲಿ ಆದ ಲೋಪ ಇದಾಗಿದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಇದು ಸ್ಪರ್ಧೆಯ ಹೊರಗಿನ ಅವಧಿಯಲ್ಲಿ ನಡೆದ ಒಂದು ಪ್ರತ್ಯೇಕ ಘಟನೆಯಾಗಿದ್ದು, ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಇದು ಹೊಂದಿರಲಿಲ್ಲ. ನಾವು ಮೇಗನ್ಗೆ ಸೂಕ್ತ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಕ್ರೀಡೆಯನ್ನು ಪ್ರತಿನಿಧಿಸುವ ಪ್ರತಿಯೊಬ್ಬರಿಂದಲೂ ನಿರೀಕ್ಷಿಸಲಾಗುವ ಮಾನದಂಡಗಳು ಹಾಗೂ ಜವಾಬ್ದಾರಿಗಳನ್ನು ಮತ್ತಷ್ಟು ಬಲಪಡಿಸುತ್ತೇವೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ನಿಷೇಧವು ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಇವೆರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಆ ಪಂದ್ಯಗಳಿಗೆ ಅನ್ವಯಿಸುತ್ತದೆ. ಇದರ ಪರಿಣಾಮವಾಗಿ, ಆಸ್ಟ್ರೇಲಿಯಾದ ವೇಗದ ಬೌಲರ್ ಈಗ ಗುರುವಾರ (ಅಕ್ಟೋಬರ್ 22) ನಾರ್ತ್ ಸಿಡ್ನಿ ಓವಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಹಾಗೂ ಅಂತಿಮ ಟಿ20 ಅಂತರರಾಷ್ಟ್ರೀಯ (T20I) ಪಂದ್ಯವನ್ನು ಮತ್ತು ಅಕ್ಟೋಬರ್ 31 ರಂದು ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 'ಅಡಿಲೇಡ್ ಸ್ಟ್ರೈಕರ್ಸ್' ತಂಡಕ್ಕಾಗಿ ನಡೆಯಲಿರುವ ಡಬ್ಲ್ಯುಬಿಬಿಎಲ್ (WBBL) 2026 ಋತುವಿನ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಭಾರತದ ಪದಕಗಳ ಸಂಖ್ಯೆ ಏರಿಕೆ; ಅವಳಿ ಚಿನ್ನ ಗೆದ್ದ ಶೀತಲ್ ದೇವಿ
"ನನಗೆ ವಿಧಿಸಲಾದ ದಂಡವನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಮತ್ತು ನನ್ನಿಂದ ನಿರೀಕ್ಷಿಸಲಾದ ಮಾನದಂಡಗಳನ್ನು ಪೂರೈಸಲು ವಿಫಲವಾದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ," ಎಂದು ಮೇಗನ್ ಶುಟ್ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ತಪ್ಪಿಗಾಗಿ ನಾನು ವಿಷಾದಿಸುತ್ತೇನೆ ಮತ್ತು ನನಗೆ ದೊರೆತ ಬೆಂಬಲವನ್ನು ಗೌರವಿಸುತ್ತೇನೆ" ಎಂದು 33 ವರ್ಷದ ಆಟಗಾರ್ತಿ ಮೇಗನ್ ಶುಟ್ ಹೇಳಿದರು.
"ಇದು ಕ್ರೀಡಾ ಸ್ಪರ್ಧೆಯ ಹೊರಗೆ ನಡೆದ ಘಟನೆಯಾಗಿದ್ದು, ಕ್ರೀಡಾ ಪ್ರದರ್ಶನಕ್ಕೆ ಸಂಬಂಧಿಸಿದ್ದಲ್ಲದಿದ್ದರೂ, 'ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ಮಾರ್ಗಸೂಚಿ'ಗಳನ್ನು ಪಾಲಿಸುವ ಜವಾಬ್ದಾರಿ ನನ್ನ ಮೇಲಿದೆ ಎಂಬುದು ನನಗೆ ಅರಿವಿದೆ. ಈ ಮಾರ್ಗಸೂಚಿಗಳ ಬಗ್ಗೆ ಆಟಗಾರರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತದೆ. ನಾನು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು" ಎಂದರು.