ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI 2nd T20I: ವೆಸ್ಟ್‌ ಇಂಡೀಸ್‌ ಎದುರು ಅಬ್ಬರಿಸಿ ನಾಲ್ಕನೇ ಟಿ20ಐ ಶತಕದ ಸನಿಹದಲ್ಲಿ ಔಟಾದ ಸಂಜು ಸ್ಯಾಮ್ಸನ್‌!

Sanju Samson 4th T20I Century: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌, ಎರಡನೇ ಪಂದ್ಯದಲ್ಲಿ ಅಬ್ಬರಿಸಿದರು. ಆದರೆ, ಅವರು 82 ರನ್‌ ಗಳಿಗೆ ವಿಕೆಟ್‌ ಒಪ್ಪಿಸಿ ತಮ್ಮ ನಾಲ್ಕನೇ ಟಿ20ಐ ಶತಕದ ಸನಿಹ ಬಂದು ವಿಕೆಟ್‌ ಒಪ್ಪಿಸಿದರು.

ನಾಲ್ಕನೇ ಟಿ20ಐ ಶತಕ ಸನಿಹದಲ್ಲಿ ಔಟಾದ ಸಂಜು ಸ್ಯಾಮ್ಸನ್‌!

ನಾಲ್ಕನೇ ಟಿ20ಐ ಶತಕವನ್ನು ಬಾರಿಸಿದ ಸಂಜು ಸ್ಯಾಮ್ಸನ್‌. -

Profile
Ramesh Kote Oct 9, 2026 8:26 PM

ರಾಂಚಿ: ಇಲ್ಲಿನ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ದದ ಎರಡನೇ ಟಿ20ಐ ಪಂದ್ಯದಲ್ಲಿ(IND vs WI) ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು.ಮೊದಲನೇ ಟಿ20ಐ ಪಂದ್ಯದಲ್ಲಿ ವಿಫಲರಾಗಿ ಟೀಕೆಗಳಿಗೆ ಗುರಿಯಾಗಿ ಸಂಜು, ಎರಡನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರೂ ತಮ್ಮ ಟಿ20ಐ ವೃತ್ತಿ ಜೀವನದಲ್ಲಿ ನಾಲ್ಕನೇ ಶತಕದ ಸನಿಹ ಬಂದು ವಿಕೆಟ್‌ ಒಪ್ಪಿಸಿದರು. ಸಂಜು ಅಬ್ಬರದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು.

ಅಕ್ಟೋಬರ್‌ 6 ರಂದು ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ ಇಳಿದಿದ್ದ ಸಂಜು ಸ್ಯಾಮ್ಸನ್‌, 9 ಎಸೆತಗಳಲ್ಲಿ 11 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ನಿರಾಶೆ ಮೂಡಿಸಿದ್ದರು. ಆದರೂ ಎರಡನೇ ಪಂದ್ಯದಲ್ಲಿ ಸಂಜುಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಬಲ ನೀಡಿತ್ತು. ಅಭಿಷೇಕ್‌ ಶರ್ಮಾ ಜತೆಗೆ ಕ್ರೀಸ್‌ಗೆ ಬಂದ ಸಂಜು, ಅದ್ಭುತವಾಗಿ ಬ್ಯಾಟ್‌ ಬೀಸಿದರು. 12 ಎಸೆತಗಳಲ್ಲಿ 20 ರನ್‌ ಗಳಿಸಿದ ಅಭಿಷೇಕ್‌ ಶರ್ಮಾ ಜೊತೆಗೆ ಸಂಜು ಮೊದಲನೇ ವಿಕೆಟ್‌ಗೆ 42 ರನ್‌ಗಳನ್ನು ಕಲೆ ಹಾಕಿದರು.

ಭಾರತ ತಂಡದ ಸ್ಥಿರ ಪ್ರದರ್ಶನದ ಕೊರತೆಗೆ ಗೌತಮ್‌ ಗಂಭೀರ್‌ ಕಾರಣ: ಶೇನ್‌ ವಾಟ್ಸನ್‌ ಗಂಭೀರ ಆರೋಪ!

ಅಭಿಷೇಕ್‌ ಶರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ಪಡೆದುಕೊಂಡ ಸಂಜು ಸ್ಯಾಮ್ಸನ್‌, ಒಳ್ಳೆಯ ಎಸೆತಗಳಿಗೆ ಗೌರವ ಕೊಟ್ಟು, ಕೆಟ್ಟ ಎಸೆತಗಳಿಗೆ ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸಿದರು. ಅವರು 21 ಎಸೆತಗಳಲ್ಲಿ ಸಿಕ್ಸರ್‌ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು. ನಂತರ 41 ಎಸೆತಗಳಲ್ಲಿ 82 ರನ್‌ಗಳನ್ನು ಪೂರ್ಣಗೊಳಿಸಿದರು.

ಅತಿ ಹೆಚ್ಚು ಟಿ20ಐ ಶತಕದ ದಾಖಲೆ ಹೊಂದಿರುವ ಸಂಜು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20ಐ ಶತಕಗಳನ್ನು ಬಾರಿಸಿದ ವಿಕೆಟ್‌ ಕೀಪರ್‌-ಬ್ಯಾಟರ್‌ಗಳ ಸಾಲಿನಲ್ಲಿ ಈಗಾಗಲೇ ಅಗ್ರ ಸ್ಥಾನದಲ್ಲಿದ್ದಾರೆ. ಇದೀಗ ನಾಲ್ಕನೇ ಶತಕ ಸಿಡಿಸುವ ಸನಿಹ ಬಂದು ಸಂಜು ವಿಕೆಟ್‌ ಒಪ್ಪಿಸಿದರು. 40 ಎಸೆತಗಳಲ್ಲಿ 80 ರನ್‌ ಗಳಿಸಿ ಆಡುತ್ತಿದ್ದಾಗ, ಅವರು 15ನೇ ಓವರ್‌ನಲ್ಲಿ ಶಮರ್‌ ಸ್ಪ್ರಿಂಗರ್‌ ಎಸೆತದಲ್ಲಿ ಅಪ್ಪರ್‌ ಕಟ್‌ ಹೊಡೆಯುವ ಪ್ರಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಟ್ಟು ವಿಕೆಟ್‌ ಒಪ್ಪಿಸಿದರು. ಆ ಮೂಲಕ 18 ರನ್‌ಗಳಿಂದ ಶತಕ ವಂಚಿತರಾದರು.