ವಿರಾಟ್ ಕೊಹ್ಲಿಗೆ ಶುಭಮನ್ ಗಿಲ್ ಹೋಲಿಕೆ ಇಲ್ಲವೇ ಇಲ್ಲ ಎಂದ ಮಾಂಟಿ ಪನೇಸರ್!
Monty Panesar on Shubman Gill: ಶುಭ್‌ಮನ್ ಗಿಲ್ ಅವರು ನಿರ್ಲಕ್ಷ್ಯದ ಹೊಡೆತಗಳನ್ನು ಆಡುತ್ತಿದ್ದಾರೆ ಎಂದು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಆರೋಪಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಯಂತೆ ಎಲ್ಲಾ ಸ್ವರೂಪಗಳಲ್ಲಿ ಆಡಲು ಅವರಿಗೆ ವೇಗದ ಕೊರತೆಯಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್ ಬಗ್ಗೆ ಮಾಂಟಿ ಪನೇಸರ್ ಅಸಮಾಧಾನ. -
ನವದೆಹಲಿ: ಇಂಗ್ಲೆಂಡ್ ಪರ ಆಡಿದ್ದ ಭಾರತೀಯ ಮೂಲದ ಸಿಖ್ ಸ್ಪಿನ್ನರ್ ಮಾಂಟಿ ಪನೇಸರ್ (Monty Panesar), ಭಾರತೀಯ ಟೆಸ್ಟ್ ನಾಯಕ ಶುಭಮನ್ ಗಿಲ್ (Shubman Gill) ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅವರು ಸಂತೃಪ್ತರಾಗುತ್ತಿದ್ದಾರೆ ಮತ್ತು ಅಜಾಗರೂಕ ಹೊಡೆತಗಳನ್ನು ಆಡುತ್ತಿದ್ದು, ಎಲ್ಲಾ ಸ್ವರೂಪದ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿಲ್ಲ ಎಂದು ಆಂಗ್ಲರ ಸ್ಪಿನ್ನರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಿಲ್ ಅವರ ಪ್ರದರ್ಶನವನ್ನು ವಿರಾಟ್ ಕೊಹ್ಲಿಗೆ (Virat Kohli) ಹೋಲಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಸ್ವರೂಪಗಳ ಬೇಡಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಮಾಂಟಿ ಪನೇಸರ್ ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, "ಶುಭಮನ್ ಗಿಲ್ ಸಂತೃಪ್ತ ಕ್ರಿಕೆಟಿಗ. ಅವರಿಗೆ ಸಾಕಷ್ಟು ಪ್ರತಿಭೆ ಇದೆ, ಆದರೆ ಅವರು ಆಟದ ಆರಂಭದಲ್ಲಿ ಅಜಾಗರೂಕ ಹೊಡೆತಗಳನ್ನು ಆಡುತ್ತಾರೆ. ವಿರಾಟ್ ಕೊಹ್ಲಿಯ ವೇಗ ಮತ್ತು ಆಕ್ರಮಣಶೀಲತೆ ಎಲ್ಲಾ ಸ್ವರೂಪಗಳಲ್ಲಿ ಸ್ಪಷ್ಟವಾಗಿತ್ತು. ಆದರೆ, ಗಿಲ್ ಹಾಗೆ ಮಾಡಲು ಸಾಧ್ಯವಿಲ್ಲ. ಅದು ಅವರಿಗೆ ದೊಡ್ಡ ಹೊರೆ. ಅವರು ಎಲ್ಲಾ ಸ್ವರೂಪಗಳ ನಾಯಕತ್ವ ವಹಿಸಲು ಸಾಧ್ಯವಿಲ್ಲ. ಅದು ಅವರಿಗೆ ತುಂಬಾ ಕಷ್ಟ," ಎಂದು ಹೇಳಿದ್ದಾರೆ.
Vijay Hazare Trophy 2025-26: 101 ಎಸೆತಗಳಲ್ಲಿ 160 ರನ್ ಸಿಡಿಸಿದ ಧ್ರುವ್ ಜುರೆಲ್!
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಕಳೆದುಕೊಳ್ಳುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ತುಂಬಾ ದುರ್ಬಲವಾಗಿದೆ ಎಂದು ಪನೇಸರ್ ಸ್ಪಷ್ಟವಾಗಿ ಹೇಳಿದ್ದಾರೆ. ತಂಡ ವೈಫಲ್ಯದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಮೂವರು ಪ್ರಮುಖ ಆಟಗಾರರು ನಿವೃತ್ತರಾದಾಗ, ಅವರನ್ನು ಬದಲಾಯಿಸಲು ಸಿದ್ಧರಾಗಿರುವ ಕ್ರಿಕೆಟಿಗರನ್ನು ಹೊಂದಿರುವುದು ತುಂಬಾ ಕಷ್ಟ.
ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯನ್ನು ಪನೇಸರ್ ಒತ್ತಿ ಹೇಳಿದರು. ವೈಟ್-ಬಾಲ್ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ20ಐ) ಟೀಮ್ ಇಂಡಿಯಾ ಅವರಿಲ್ಲದೆ ನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ. ಆದರೆ ಟೆಸ್ಟ್ ಪಂದ್ಯಗಳಲ್ಲಿ ಅವರ ಅನುಪಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.
ಗೌತಮ್ ಗಂಭೀರ್ ರಣಜಿ ಟ್ರೋಫಿ ತಂಡಕ್ಕೆ ಕೋಚ್ ಆಗಬೇಕು: ಮಾಂಟಿ ಪನೇಸರ್ ವ್ಯಂಗ್ಯ!
"ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನೀವು ವಿರಾಟ್ ಕೊಹ್ಲಿಯನ್ನು ಹೆಚ್ಚು ಕಳೆದುಕೊಳ್ಳುವುದಿಲ್ಲ. ಆದರೆ ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ, ವಿರಾಟ್ ಕೊಹ್ಲಿ ಇಲ್ಲ ಎಂಬುದು ಸಂಪೂರ್ಣ ಸತ್ಯ ಮತ್ತು ಇದು ತಂಡದ ತೀವ್ರತೆಯನ್ನು ಕಡಿಮೆ ಮಾಡಿದೆ," ಎಂದು ಮಾಂಟಿ ಪನೇಸರ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ ಮಾಂಟಿ ಪನೇಸರ್ 167 ವಿಕೆಟ್‌ಗಳನ್ನು ಕಬಳಿಸಿದ್ದು, ಭಾರತದ ವಿರುದ್ಧದ 11 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದಲ್ಲಿ ಎಂಟು ಟೆಸ್ಟ್ ಪಂದ್ಯಗಳಲ್ಲಿ ಪನೇಸರ್ 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಐದು ವಿಕೆಟ್ ಸಾಧನೆ ಮತ್ತು ಒಂದು ಬಾರಿ ಹತ್ತು ವಿಕೆಟ್ ಸಾಧನೆ ಮಾಡಿದ್ದಾರೆ. 2012ರಲ್ಲಿ ಭಾರತದ ವಿರುದ್ಧ ನಾಲ್ಕು ಟೆಸ್ಟ್ ಸರಣಿಯನ್ನು ಗೆಲ್ಲಲು ಇಂಗ್ಲೆಂಡ್‌ಗೆ ಮಾಂಟಿ ಪನೇಸರ್ ಸಹಾಯ ಮಾಡಿದ್ದರು. ಮುಂಬೈನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಮತ್ತು ನಂತರ ಕೋಲ್ಕತ್ತಾದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಅನ್ನು ಗೆದ್ದು ಇಂಗ್ಲೆಂಡ್ ಟಡಸ್ಟ್ 2-1 ಗೆಲುವು ಸಾಧಿಸಿತು.