ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಟಾಸ್‌ ವೇಳೆ‌ ರವಿ ಶಾಸ್ತ್ರಿ ಪ್ರಶ್ನೆಗೆ ಗೊಂದಲದ ಉತ್ತರವನ್ನು ಕೊಟ್ಟ ಶುಭಮನ್‌ ಗಿಲ್!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಲಂಡನ್‌ನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಜುಲೈ 31 ರಂದು ಆರಂಭವಾಗಲಿದೆ. ಈ ಪಂದ್ಯದ ಟಾಸ್‌ ವೇಳೆ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ತಮ್ಮ ತಂಡದ ಪ್ಲೇಯಿಂಗ್‌ xiಗೆ ಸಂಬಂಧಿಸಿದಂತೆ ಗೊಂದಲಕ್ಕೆ ಒಳಗಾದರು.

IND vs ENG: ಟಾಸ್‌ ವೇಳೆ ಗೊಂದಲಕ್ಕೆ ಒಳಗಾದ ಶುಭಮನ್‌ ಗಿಲ್‌!

ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ಶುಭಮನ್‌ ಗಿಲ್‌!

Profile Ramesh Kote Jul 31, 2025 6:32 PM

ನವದೆಹಲಿ: ಲಂಡನ್‌ನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ ಐದನೇ ಹಾಗೂ ಟೆಸ್ಟ್‌ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಟಾಸ್‌ ಸೋತ ಭಾರತ ತಂಡ (India) ಮೊದಲು ಬ್ಯಾಟ್‌ ಮಾಡುವಂತಾಯಿತು. ಈ ವೇಳೆ ಪ್ರವಾಸಿ ತಂಡದ ಪ್ಲೇಯಿಂಗ್‌ XIಗೆ ಸಂಬಂಧಿಸಿದ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಗೊಂದಲಕ್ಕೆ ಒಳಗಾದ ಪ್ರಸಂಗ ನಡೆಯಿತು. ಭಾರತ ತಂಡ ತನ್ನ ಆಡುವ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆದರೆ, ಗಿಲ್‌ ಕೇವಲ ಮೂರು ಬದಲಾವಣೆ ಮಾತ್ರ ಹೇಳಿದ್ದರು. ಅಂದ ಹಾಗೆ ಈಗಾಗಲೇ ನಾಲ್ಕು ಟೆಸ್ಟ್‌ ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಓವಲ್‌ ಟೆಸ್ಟ್‌ ಗೆದ್ದು ಸರಣಿಯನ್ನು 2-2 ಅಂತರದಲ್ಲಿ ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ಈ ಸರಣಿಯ ಐದನೇ ಪಂದ್ಯದಲ್ಲಿಯೂ ಟಾಸ್‌ ಸೋತರು. ಆ ಮೂಲಕ ಟೀಮ್‌ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 15ನೇ ಬಾರಿ ಟಾಸ್‌ ಸೋಲುವಂತಾಯಿತು. ಕಳೆದ ಜನವರಿಯಲ್ಲಿ ಭಾರತ ತಂಡ ತವರು ಟಿ20ಐ ಪಂದ್ಯದಲ್ಲಿ ಕೊನೆಯ ಬಾರಿ ಟಾಸ್‌ ಗೆದ್ದಿದ್ದರು. ಇದಾದ ಬಳಿಕ ಟೀಮ್‌ ಇಂಡಿಯಾ ಸತತವಾಗಿ 15ಬಾರಿ ಟಾಸ್‌ ಸೋತಿದೆ. ಇನ್ನು ಟೆಸ್ಟ್‌ ಕ್ರಿಕೆಟ್‌ ಇಕತಿಹಾಸದಲ್ಲಿ 14ನೇ ಬಾರಿ ಭಾರತ ತಂಡ ಟೆಸ್ಟ್‌ ಸರಣಿಯ ಎಲ್ಲಾ ಐದು ಪಂದ್ಯಗಳಲ್ಲಿ ಟಾಸ್‌ ಸೋತಿರುವುದು. 2018ರ ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡ ಎಲ್ಲಾ ಪಂದ್ಯಗಳಲ್ಲಿಯೂ ಟಾಸ್‌ ಸೋತಿತ್ತು.

IND vs ENG 5th Test: ಭಾರತ ವಿರುದ್ದ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌!

ಟಾಸ್‌ ವೇಳೆ ಗೊಂದಲಕ್ಕೆ ಒಳಗಾದ ಶುಭಮನ್‌ ಗಿಲ್‌

ಐದನೇ ಟೆಸ್ಟ್‌ ಪಂದ್ಯದಲ್ಲಿಯೂ ಟಾಸ್‌ ಸೋತ ಬಳಿಕ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಹತಾಶರಾದರು. ನಿರೂಪಕರಾಗಿದ್ದ ರವಿ ಶಾಸ್ತ್ರಿ ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಪ್ರಶ್ನೆಯನ್ನು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್‌, "ನಾವು ಮೂರು ಬದಲಾವಣೆಯನ್ನು ಮಾಡಿಕೊಂಡಿದ್ದೇವೆಂದು ಹೇಳಿದರು. ರಿಷಭ್‌ ಪಂತ್‌, ಶಾರ್ದುಲ್‌ ಠಾಕೂರ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರ ಬದಲು ಕ್ರಮವಾಗಿ ಧ್ರುವ್‌ ಜುರೆಲ್‌, ಕರುಣ್‌ ನಾಯರ್‌ ಹಾಗೂ ಪ್ರಸಿಧ್‌ ಕೃಷ್ಣ ಪ್ಲೇಯಿಂಗ್‌ XIಗೆ ಸೇರ್ಪಡೆ ಮಾಡಲಾಗಿದೆ," ಎಂದು ಮಾಹಿತಿ ನೀಡಿದ್ದರು.



ನಂತರ ಭಾರತ ತಂಡದ ಪ್ಲೇಯಿಂಗ್‌ XI ಶೀಟ್‌ನಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಿವೀಲ್‌ ಮಾಡಿತ್ತು. ಅಂದ ಹಾಗೆ ನಾಯಕ ಶುಭಮನ್‌ ಗಿಲ್‌ ಅವರು ಅನ್ಶುಲ್‌ ಕಾಂಬೋಜ್‌ ಅವರ ಸ್ಥಾನಕ್ಕೆ ಆಕಾಶ್‌ ದೀಪ್‌ ಅವರಿಗೆ ಸ್ಥಾನ ನೀಡಲಾಗಿದೆ ಎಂದು ಹೇಳುವುದನ್ನು ಮರೆತಿದ್ದರು. ಸ್ನಾಯು ಸೆಳೆತದ ಕಾರಣ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು. ಅದರಂತೆ ಈ ಪಂದ್ಯದಲ್ಲಿ ಭಾರತ ತಂಡ 336 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.

IND vs ENG: ಪಿಚ್‌ ಕ್ಯುರೇಟರ್‌-ಗಂಭೀರ್‌ ಜಗಳದ ಬಗ್ಗೆ ಬೆನ್‌ ಸ್ಟೋಕ್ಸ್‌ ಹೇಳಿದ್ದಿದು!

ಐದನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ಕರುಣ್‌ ನಾಯರ್‌, ಧ್ರುವ್‌ ಜುರೆಲ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಆಕಾಶ್‌ ದೀಪ್‌, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ