IND vs ENG: ಬ್ಯಾಟಿಂಗ್ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನ ತೊರೆದ ರಿಷಭ್ ಪಂತ್!
ಭಾರತ ಮತ್ತು ಇಂಗ್ಲೆಂಡ್ ನಡುವಣ ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲನೇ ದಿನ ಮೂರನೇ ಸೆಷನ್‌ನಲ್ಲಿ ರಿಷಭ್ ಪಂತ್ ಅಪಾಯಕಾರಿ ಗಾಯಕ್ಕೆ ತುತ್ತಾದರು. ಈ ಗಾಯದಿಂದಾಗಿ ಅವರು ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗದೆ, ಮೈದಾನ ತೊರೆಯಬೇಕಾಯಿತು. ಈಗಾಗಲೇ ಹಲವು ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತಕ್ಕೆಇದೀಗ ಪಂತ್‌ಗೆ ಗಾಯ ಇನ್ನಷ್ಟುಆತಂಕವನ್ನು ಮೂಡಿಸಿದೆ.

ರಿವರ್ಸ್ ಸ್ವೀಪ್ ಮಾಡಲು ಹೋಗಿ ಗಾಯಕ್ಕೆ ತುತ್ತಾದ ರಿಷಭ್ ಪಂತ್!

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ಮೊದಲ ದಿನವೇ ಆಘಾತಕಾರಿ ಘಟನೆ ನಡೆದಿದೆ. ಮೊದಲ ದಿನದ ಮೂರನೇ ಸೆಷನ್‌ನಲ್ಲಿ ರಿಷಭ್ ಪಂತ್(Rishabh Pant) ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದರು. ಆದರೆ ನಂತರ ಅವರು ಅಪಾಯಕಾರಿ ಹೊಡೆತಕ್ಕೆ ಕೈ ಹಾಕಿ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಕ್ರಿಸ್ ವೋಕ್ಸ್ (Chris Woaks) ಬೌಲಿಂಗ್‌ನಲ್ಲಿ ರಿಷಭ್ ಪಂತ್ ಅಪಾಯಕಾರಿ ಗಾಯಕ್ಕೆ ಒಳಗಾದರು. ಇದರಿಂದಾಗಿ ಅವರು ಬ್ಯಾಟಿಂಗ್ ಮುಂದುರವರಿಸಲು ಸಾಧ್ಯವಾಗದ ಮೈದಾನವನ್ನು ತೊರೆದರು. ಈಗಾಗಲೇ ಬೆರಳು ಗಾಯದಿಂದ ಗುಣಮುಖರಾಗಿ ಅಂಗಣಕ್ಕೆ ಬಂದಿರುವ ಪಂತ್ ಮತ್ತೊಂದು ಗಾಯಕ್ಕೆ ತುತ್ತಾಗುವ ಮೂಲಕ ಭಾರತ ತಂಡಕ್ಕೆ ಆಘಾತ ಮೂಡಿಸಿದ್ದಾರೆ.
ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್ ಅತ್ಯುತ್ತಮವಾಗಿ ಬ್ಯಾಟ್ ಮಾಡಿದ್ದರು. ಅವರು ಆಡಿದ 48 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು ಹಾಗೂ ಮತ್ತೊಂದು ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, 68ನೇ ಓವರ್ ನಾಲ್ಕನೇ ಎಸೆತದಲ್ಲಿ ಕ್ರಿಸ್ ವೋಕ್ಸ್ ಸ್ಲೋ ರನ್ ಎಸೆತವನ್ನು ಹಾಕಿದರು. ಇದನ್ನು ಅರಿತುಕೊಂಡ ಪಂತ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ಗೆ ಸಿಗದೆ ನೇರವಾಗಿ ಪಾದದ ಕಾಲ್ಬೆರಳಿನ ಕೆಳಗೆ ಜೋರಾಗಿ ತಾಗಿತು.
IND vs ENG: ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
ನೋವು ತಾಳಲಾರದೆ ರಿಷಭ್ ಪಂತ್ ನೆಲಕ್ಕೆ ಉರುಳಿದರು. ನಂತರ, ತಂಡದ ಫಿಸಿಯೊ ಹಾಗೂ ವೈದ್ಯರು ಬಂದು ಪಂತ್ ಅವರ ಗಾಯವಾಗಿರುವ ಪಾದವನ್ನು ಪರಿಶೀಲಿಸಿದರು. ಶೋ ತೆಗೆದು ಗಾಯಕ್ಕೆ ಐಸ್ ಇಟ್ಟರು ಹಾಗೂ ಊತ ಕಡಿಮೆ ಮಾಡಲು ಪಪ್ರಯತ್ನ ನಡೆಸಿದರು. ಆದರೆ, ಇದು ಆವುದೇ ಪ್ರಯೋಜನವಾಗಲಿಲ್ಲ. ಪಂತ್ ನೋವು ಅನುಭವಿಸುತ್ತಿದ್ದರು. ಅಂತಿಮವಾಗಿ ಅವರು ಬ್ಯಾಟಿಂಗ್ ಮುಂದುವರಿಸದೆ, ಕ್ಯಾಬ್ ಆಂಬ್ಯುಲೆನ್ಸ್ ಮೂಲಕ ಡ್ರೆಸ್ಸಿಂಗ್ ರೂಂ ತಲುಪಿದರು.
Rishabh Pant is driven off the field of play after suffering some severe swelling on his right foot and Ravindra Jadeja walks out to the middle... 🩹 pic.twitter.com/vJlu5CABQ8
— Sky Sports Cricket (@SkyCricket) July 23, 2025
ಇದಾದ ಬಳಿಕ ರವೀಂದ್ರ ಜಡೇಜಾ ಕ್ರೀಸ್‌ಗೆ ಬಂದರು ಹಾಗೂ ಬ್ಯಾಟಿಂಗ್ ಮುಂದುವರಿಸಿದರು. ರಿಷಭ್ ಪಂತ್‌ಗೆ ರಿಟೈರ್ ಹರ್ಟ್ ನೀಡಲಾಯಿತು. ಇದಕ್ಕೂ ಮೊದಲು ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲೂ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಇದರ ಪರಿಣಾಮ ಅವರು ಕಳೆದ ಟೆಸ್ಟ್‌ನಲ್ಲಿ ವಿಕೆಟ್ ಕೀಪಿಂಗ್‌ನಲ್ಲಿ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆದರೆ, ಇದೀಗ ಪಾದದ ಗಾಯದಿಂದ ಭಾರತ ತಂಡಕ್ಕೆ ಭಾರಿ ಹಿನ್ನಡೆಯನ್ನು ಅನುಭವಿಸಿದೆ.
IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!
ಭಾರತ ತಂಡಕ್ಕೆ ಉತ್ತಮ ಆರಂಭ
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ 94 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಕೆಎಲ್ ರಾಹುಲ್ ಕೂಡ ಉತ್ತಮವಾಗಿ ಆಡಿ 46 ರನ್ ಗಳಿಸಿ ಅರ್ಧಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದ್ದರು. ಶುಭಮನ್ ಗಿಲ್ ನಿರಾಶೆ ಮೂಡಿಸಿದರೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ 57 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ರಿಷಭ್ ಪಂತ್ ಗಾಯಕ್ಕೆ ತುತ್ತಾಗುವುದಕ್ಕೂ ಮುನ್ನ 37 ರನ್ ಗಳಿಸಿದ್ದರು. ಇದೀಗ ಭಾರತ 72 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿದೆ. ರವೀಂದ್ರ ಜಡೇಜಾ ಹಾಗೂ ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ.