ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ENG vs SL: ಇಂಗ್ಲೆಂಡ್‌ ವೈಟ್‌ಬಾಲ್‌ ಸರಣಿಗಳಿಗೆ ಶ್ರೀಲಂಕಾ ತಂಡ ಪ್ರಕಟ!

Sri lanka Squad: ಇಂಗ್ಲೆಂಡ್‌ ಪ್ರವಾಸದ ಒಡಿಐ ಹಾಗೂ ಟಿ20ಐ ಸರಣಿಗಳಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಶ್ರೀಲಂಕಾ ತಂಡ ಮೂರು ಟಿ20ಐ ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿವೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ತನ್ನ ತಂಡದಲ್ಲಿ ಇಬ್ಬರು ಹೊಸ ಆಟಗಾರರಿಗೆ ಅವಕಾಶ ನೀಡಿದೆ.

ಇಂಗ್ಲೆಂಡ್‌ ವೈಟ್‌ಬಾಲ್‌ ಸರಣಿಗಳಿಗೆ ಶ್ರೀಲಂಕಾ ತಂಡ ಪ್ರಕಟ!

ಇಂಗ್ಲೆಂಡ್‌ ಪ್ರವಾಸಕ್ಕೆ ಶ್ರೀಲಂಕಾ ತಂಡಗಳ ಪ್ರಕಟ. -

Profile
Ramesh Kote Sep 2, 2026 5:10 PM

ನವದೆಹಲಿ: ಇಂಗ್ಲೆಂಡ್‌ ಪ್ರವಾಸದ ವೈಟ್‌ ಬಾಲ್‌ ಸರಣಿಗಳಿಗೆ (ENG vs SL) ಶ್ರೀಲಂಕಾ ತಂಡಗಳನ್ನು (Sri lanka Squad) ಪ್ರಕಟಿಸಲಾಗಿದೆ. ಇಂಗ್ಲೆಂಡ್‌ ಎದುರು ಶ್ರೀಲಂಕಾ ತಂಡ ಮೂರು ಪಂದ್ಯಗಳ ಟಿ20ಐ ಸರಣಿ ಹಾಗೂ ಅಷ್ಟೇ ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಶ್ರೀಲಂಕಾ ತಂಡದಲ್ಲಿ ಇಬ್ಬರು ಹೊಸ ಆಟಗಾರರಿಗೆ ಚೊಚ್ಚಲ ಅವಕಾಶಗಳನ್ನು ನೀಡಲಾಗಿದೆ. 28ರ ವಯಸ್ಸಿನ ಸಚಿಂದು ಕೊಲಂಬಾಗೆ ಒಡಿಐ ತಂಡದಲ್ಲಿ ಸ್ಥಾನವನ್ನು ನೀಡಿದ್ದರೆ, ಆಲ್‌ರೌಂಡರ್‌ ಥರಿಂದು ರತ್ನನಾಯಕೆಗೆ ಟಿ20ಐ ತಂಡದಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಗಿದೆ.

ಇಲ್ಲಿಯವರೆಗೂ 48 ಟಿ20 ಪಂದ್ಯಗಳನ್ನು ಆಡಿರುವ ಕೊಲಂಬಾಗೆ 6.61ರ ಎಕಾನಮಿ ರೇಟ್‌ನಲ್ಲಿ 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ತಮ್ಮ ಬೌಲಿಂಗ್‌ನಲ್ಲಿ 13.7ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಇನ್ನು ರತ್ನ ನಾಯಕೆ ಅವರು 82 ಟಿ20 ಪಂದ್ಯಗಳಿಂದ 6.50ರ ಎಕಾನಮಿ ರೇಟ್‌ನಲ್ಲಿ 92 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇನ್ನು ಇವರು ಬ್ಯಾಟಿಂಗ್‌ನಲ್ಲಿ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ.

IND vs SL: ಭಾರತ ತಂಡದ ವೈಡ್‌ಬಾಲ್‌ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಸುನೀಲ್‌ ಗವಾಸ್ಕರ್‌!

ಶ್ರೀಲಂಕಾ ಎರಡೂ ತಂಡಗಳಿಗೂ ಕುಸಾಲ್‌ ಮೆಂಡಿಸ್‌ ನಾಯಕ

ಶ್ರೀಲಂಕಾದ ಎರಡೂ ಸ್ವರೂಪದ ತಂಡಗಳಿಗೂ ಕುಸಾಲ್‌ ಮೆಂಡಿಸ್‌ಗೆ ನಾಯಕತ್ವವನ್ನು ನೀಡಲಾಗಿದ್ದು, ಚಿರಿತ ಅಸಲಂಕಾಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಮಾಜಿ ನಾಯಕ ದಸೂನ್‌ ಶಣಕ, ಶ್ರೀಲಂಕಾ ಏಕದಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಅವರು 2024ರಲ್ಲಿ ಕೊನೆಯ ಬಾರಿ ಜಿಂಬಾಬ್ವೆ ಎದುರು ಒಡಿಐ ಪಂದ್ಯವನ್ನು ಆಡಿದ್ದರು. ಇದರೊಂದಿಗೆ 2027ರ ಏಕದಿನ ವಿಶ್ವಕಪ್‌ ಟೂರ್ನಿಯ ಯೋಜನೆಯಲ್ಲಿ ದಸೂನ್‌ ಶಣಕ ಇದ್ದಾರೆಂದು ಅಂದಾಜಿಸಬಹುದು.

ಲಹಿರು ಉದಾರ ಹಾಗೂ ಥರಿಂದು ರತ್ನನಾಯಕೆ ಅವರು ಕೇವಲ ಶ್ರೀಲಂಕಾದ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಪವನ್‌ ರತ್ನನಾಯಕೆ, ಸಚಿಂದು ಕೊಲಂಬಾಗೆ, ಆಸಿತಾ ಫೆರ್ನಾಂಡೊ ಹಾಗೂ ದಿಲ್ಷಾನ್‌ ಮದುಶಂಕ ಅವರು ಒಡಿಐ ತಂಡದಲ್ಲಿ ಮಾತ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದಂತೆ ಎಲ್ಲಾ ಆಟಗಾರರು ಎರಡೂ ತಂಡಗಳಲ್ಲಿ ಆಡಲಿದ್ದಾರೆ.

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಆರಿಸಿದ ದೀಪ್‌ ದಾಸ್‌ಗುಪ್ತಾ!

ಪಥುಮ್‌ ನಿಸಾಂಕ, ಕಮಿಲ್‌ ಮಿಶಾರಾ, ಕಮಿಂದು ಮೆಂಡಿಸ್‌, ಜನಿತ್‌ ಲಿಯಾನಗೆ, ವಾನಿಂದು ಹಸರಂಗ, ದುನಿತ್‌ ವೆಲ್ಲಾಳಗೆ, ಮಹೀಶ್‌ ತೀಕ್ಷಣ, ದುಷ್ಮಾಂತ ಚಮೀರ ಹಾಗೂ ಇಶಾನ್‌ ಮಾಲಿಂಗಾ ಅವರು ಎರಡೂ ಸ್ವರೂಪಗಳ ತಂಡದಲ್ಲಿ ಆಡಲಿದ್ದಾರೆ. ಈ ಸರಣಿಗಳು ಸೆಪ್ಟಂಬರ್‌ 15 ರಿಂದ 27ರವರೆಗೆ ನಡೆಯಲಿದೆ.

ಶ್ರೀಲಂಕಾ ಒಡಿಐ ತಂಡ: ಕುಸಾಲ್‌ ಮೆಂಡಿಸ್‌ (ನಾಯಕ), ಪಥುಮ್‌ ನಿಸಾಂಕ, ಕಮಿಲ್‌ ಮಿಶಾರಾ, ಕಮಿಂದು ಮೆಂಡಿಸ್‌, ಚರಿತ್‌ ಅಸಲಂಕಾ, ಜನಿತ್‌ ಲಿಯಾನಗೆ, ಪವನ್‌ ರತ್ನನಾಯಕೆ, ದಸೂನ್‌ ಶಾನಕ, ವಾನಿಂದು ಹಸರಂಗ, ದುನೀತ್‌ ವೆಲ್ಲಾಳಗೆ, ಮಹೀಶ್‌ ತೀಕ್ಷಣ, ಸಚಿಂದು ಕೊಲಂಬಾಗೆ, ದುಷ್ಮಾಂತ ಚಮೀರಾ, ಇಶಾನ್‌ ಮಾಲಿಂಗಾ, ಆಸಿತಾ ಫೆರ್ನಾಂಡೊ, ದಿಲ್ಷಾನ್‌ ಮದುಶಂಕ

ಶ್ರೀಲಂಕಾ ಟಿ20 ತಂಡ: ಕುಸಾಲ್‌ ಮೆಂಡಿಸ್‌ (ನಾಯಕ), ಪಥುಮ್‌ ನಿಸಾಂಕ, ಕಮಿಲ್‌ ಮಿಶಾರಾ, ಲಹಿರು ಉದಾರ, ಕಮಿಂದು ಮೆಂಡಿಸ್‌, ಚರಿತ್‌ ಅಸಲಂಕಾ, ಜನಿತ್‌ ಲಿಯಾನಗೆ, ದಸೂನ್‌ ಶಾನಕ, ವಾನಿಂದು ಹಸರಂಗ, ದುನೀತ್‌ ವೆಲ್ಲಾಳಗೆ, ಮಹೀಶ್‌ ತೀಕ್ಷಣ, ಥರಿಂದು ರತ್ನನಾಯಕೆ, ದುಷ್ಮಾಂತ ಚಮೀರಾ, ಇಶಾನ್‌ ಮಾಲಿಂಗಾ, ನುವಾನ್‌ ತುಷಾರ, ಬಿನುರಾ ಫೆರ್ನಾಂಡೊ