ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್‌? ಮೊಹಮ್ಮದ್‌ ಕೈಫ್‌ ಹೇಳಿದ್ದಿದು!

ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಅಂದ ಹಾಗೆ ಟೆಸ್ಟ್‌ ಕ್ರಿಕೆಟ್‌ ವಿರಾಟ್‌ ಕೊಹ್ಲಿ ಮರಳುವ ಬಗ್ಗೆ ಮೊಹಮ್ಮದ್‌ ಕೈಫ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಕೈಫ್‌ ಹೇಳಿಕೆ!

ವಿರಾಟ್‌ ಕೊಹ್ಲಿಯ ಟೆಸ್ಟ್‌ ಕಮ್‌ಬ್ಯಾಕ್‌ ಬಗ್ಗೆ ಮೊಹಮ್ಮದ್‌ ಕೈಫ್‌ ಹೇಳಿಕೆ. -

Profile
Ramesh Kote Dec 3, 2025 3:31 PM

ನವದೆಹಲಿ: ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ(Virat Kohli) ಅವರು ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ ಹಾಗೂ ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಯ (ODI World Cup 2027) ನಿಮಿತ್ತ 50 ಓವರ್‌ಗಳ ಸ್ವರೂಪದಲ್ಲಿ ಮುಂದುವರಿಯುತ್ತಿದ್ದಾರೆ. ಅಂದ ಹಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ ಬಳಿಕ ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ ವಿದಾಯವನ್ನು ಹಿಂತೆಗೆದುಕೊಂಡು ದೀರ್ಘ ಸ್ವರೂಪದ ಕ್ರಿಕೆಟ್‌ಗೆ ಮರಳಬೇಕೆಂದು ಅಭಿಮಾನಿಗಳು ಹಾಗೂ ಕ್ರಿಕೆಟ್‌ ಪಂಡಿತರು ಆಗ್ರಹಿಸಿದ್ದರು. ಆದರೆ, ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌(Mohammad Kaif), ವಿರಾಟ್‌ ಕೊಹ್ಲಿ ಎಂದಿಗೂ ಟೆಸ್ಟ್‌ ಕ್ರಿಕೆಟ್‌ಗೆ ಮರಳುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರಾಂಚಿಯಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕವನ್ನು ಬಾರಿಸಿದ್ದರು. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾಬೀತುಪಡಿಸಿದ್ದರು. ಡಿಸೆಂಬರ್‌ 3 ರಂದು ರಾಯ್ಪುರದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿಯೂ ಅವರು ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

IND vs SA: ಈ ಇಬ್ಬರಿಂದ ಡ್ರೆಸ್ಸಿಂಗ್‌ ರೂಂ ವಾತಾವರಣ ಚೆನ್ನಾಗಿದೆ'-ಹರ್ಷಿತ್‌ ರಾಣಾ!

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್‌ ಕೈಫ್‌, "ವಿರಾಟ್‌ ಕೊಹ್ಲಿ ಅವರು ಯಾವಾಗಲೂ ತಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ಅಂಟಿಕೊಳ್ಳುವ ಹವ್ಯಾಸವನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ, ನಿವೃತ್ತಿಯಿಂದ ವಾಪಸ್‌ ಬಂದ ಹಲವು ಆಟಗಾರರನ್ನು ನಾವು ನೋಡಿದ್ದೇವೆ. ಆದರೆ, ಇವರ ಸಾಲಿಗೆ ವಿರಾಟ್‌ ಕೊಹ್ಲಿ ಸೇರುವುದಿಲ್ಲ. ಕಳೆದ ಐಪಿಎಲ್‌ ಟೂರ್ನಿಯ ವೇಳೆಯೂ ಆರ್‌ಸಿಬಿ ನಾಯಕತ್ವಕ್ಕೆ ಮರಳುವಂತೆ ಹಲವರು ಆಗ್ರಹ ಮಾಡಿದ್ದರು. ಆದರೆ, ಕೊಹ್ಲಿ ಇದನ್ನು ಒಪ್ಪಿರಲಿಲ್ಲ. ಅವರು ಆ ವೇಳೆ ಯುವ ಹಾಗೂ ಕಿರಿಯ ಆಟಗಾರರನ್ನೇ ನಾಯಕರನ್ನಾಗಿ ಮಾಡಿ ಎಂದು ಸಲಹೆ ನೀಡಿದ್ದರು ಹಾಗೂ ರಜತ್‌ ಪಾಟಿದಾರ್‌ ನಾಯಕರಾಗಿದ್ದರು," ಎಂದು ತಿಳಿಸಿದ್ದಾರೆ.

"ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಗಟ್ಟಿ ಮನಸನ್ನು ವಿರಾಟ್‌ ಕೊಹ್ಲಿ ಹೊಂದಿದ್ದಾರೆ. ಏನೇ ಕಾರಣ ಇರಲಿ ಅದಕ್ಕೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಸಾಕಷ್ಟು ಯೋಚನೆ ಮಾಡಿದ ಬಳಿಕ ಈ ನಿರ್ಧಾರವನ್ನು ತೆಗದುಕೊಂಡಿದ್ದಾರೆ. ಹಾಗೆಯೇ ಅವರು ತಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುತ್ತಾರೆ ಹಾಗೂ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸುವುದಿಲ್ಲ. ಜನರಿಗೆ ಅವರು ಬೇಖಕಾಗಬಹುದು, ಆದರೆ ಅವರು ಒಮ್ಮೆ ನಿರ್ಧಾರವನ್ನು ತೆಗೆದುಕೊಂಡರೆ, ಮತ್ತೆ ಅದನ್ನು ಬದಲಿಸುವುದಿಲ್ಲ," ಎಂದು ಕೈಫ್‌ ಹೇಳಿದ್ದಾರೆ.

IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಿದ ಬಳಿಕ ಇದೀಗ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಮರಳಿದ ವಿರಾಟ್‌ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಮೊದಲನೇ ಏಕದಿನ ಪಂದ್ಯದಲ್ಲಿ ತಮ್ಮ ಏಕದಿನ ವೃತ್ತಿ ಜೀವನದ 52 ಒಡಿಐ ಶತಕವನ್ನು ಬಾರಿಸಿದ್ದರು. ಕೊಹ್ಲಿಯ ಬ್ಯಾಟಿಂಗ್‌ ಹಾದಿಯನ್ನು ನೋಡಿದರೆ, ಅವರು ದ್ವಿಶತಕವನ್ನು ಗಳಿಸಬಹುದೆಂದು ಅನಿಸುತ್ತಿತ್ತು ಎಂದು ಮೊಹಮ್ಮದ್‌ ಕೈಫ್‌ ತಿಳಿಸಿದ್ದಾರೆ.

" ಅವರು ಒಂದು ತಿಂಗಳ ಬಳಿಕ ಆಡಿದ್ದರು. ಅವರು ಎಲ್ಲಿಯೂ ಆಡಿಲ್ಲ ಹಾಗೂ ಅವರು ಟಚ್‌ನಲ್ಲಿಯೂ ಇರಲಿಲ್ಲ. ಆದರೆ, ರಾಂಚಿಯಲ್ಲಿ ಅವರು ಆಡಿದ ಹಾದಿ ಅದ್ಭುತವಾಗಿತ್ತು ಹಾಗೂ ಅವರು ದ್ವಿಶತಕವನ್ನು ಗಳಿಸುವ ಹಾದಿಯಲ್ಲಿದ್ದರು. ಒಂದು ವೇಳೆ ವಿಕೆಟ್‌ಗಳು ಉರುಳದೇ ಇದ್ದಿದ್ದರೆ, ಅವರ ಬ್ಯಾಟಿಂಗ್‌ ವೇಗ ತಗ್ಗುತ್ತಿರಲಿಲ್ಲ. ಈ ವೇಳೆ ಕೊಹ್ಲಿ ಅವರನ್ನು ಸಾಕಷ್ಟು ಮಂದಿ ತಮ್ಮದೇ ದಾಟಿಯಲ್ಲಿ ವ್ಯಾಖ್ಯಾನಿಸುತ್ತಾರೆ ಹಾಗೂ ಅವರು ಈ ಹಾದಿಯಲ್ಲಿ ವಿಕೆಟ್‌ ಒಪ್ಪಿಸಬುದೆಂದು ಕಾಯುತ್ತಾರೆ. ಕ್ರಿಕೆಟರ್‌ ಆಗಿ ಈ ಹಂತದಲ್ಲಿ ಕಠಿಣವಾಗಿರುತ್ತದೆ. ಒತ್ತಡದಲ್ಲಿ ಅವರು ಇಂಥಾ ಇನಿಂಗ್ಸ್‌ ಆಡುವುದಿಲ್ಲ ಹಾಗೂ ಸುರಕ್ಷಿತವಾಗಿ ಅವರು ಆಡುತ್ತಾರೆ. ಆದರೆ, ಅಂದು ಅವರು ಆ ರೀತಿ ಕಾಣಲಿಲ್ಲ. ಈ ಕಾರಣದಿಂದಲೇ ಅವರು ಶ್ರೇಷ್ಠ ಬ್ಯಾಟ್ಸ್‌ಮನ್‌," ಎಂದು ಕೈಫ್‌ ಶ್ಲಾಘಿಸಿದ್ದಾರೆ.