ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 2026ರ ಐಪಿಎಲ್‌ ಟೂರ್ನಿಯಲ್ಲಿ ನನಗೆ ಮೊದಲು ನೆನಪಾಗುವುದು ವೈಭವ್‌ ಎಂದು ತಿಳಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ವೈಭವ್‌ ಸೂರ್ಯವಂಶಿಗೆ ಸುನೀಲ್‌ ಗವಾಸ್ಕರ್‌ ಮೆಚ್ಚುಗೆ. -

Profile
Ramesh Kote Jun 2, 2026 5:04 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ (IPL 2026) ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಡುಕ ಉಂಟು ಮಾಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 2026ರ ಟೂರ್ನಿ ಎಂದರೆ ನನಗೆ ನೆನಪಾಗುವುದು ವೈಭವ್‌ ಸೂರ್ಯವಂಶಿ ಮಾತ್ರ ಎಂದು ಹೇಳಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ತಂಡ 2026ರ ಐಪಿಎಲ್‌ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದರೂ ವೈಭವ್‌ ಸೂರ್ಯವಂಶಿ ಅವರ ಆಟ ಸ್ಮರಣೀಯ. ಅವರು 220ಕ್ಕೂ ಹೆಚ್ಚಿನ ಸ್ಟ್ರೈಕ್‌ ರೇಟ್‌ನಲ್ಲಿ 776 ರನ್‌ಗಳನ್ನು ದಾಖಲಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಅವರು 72 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, "2026ರ ಐಪಿಎಲ್‌ ಟೂರ್ನಿಯಲ್ಲಿ ನಾನು ನೆನಪು ಮಾಡಿಕೊಳ್ಳುವುದೇನೆಂದರೆ ವೈಭವ್‌ ಸೂರ್ಯವಂಶಿ," ಎಂದು ಹೇಳಿದ್ದಾರೆ.

ಐಪಿಎಲ್‌ ಖ್ಯಾತಿಯ ಬೆನ್ನಲ್ಲೇ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿಕೊಂಡ ಸೂರ್ಯವಂಶಿ!

"ವೈಭವ್‌ ಸೂರ್ಯವಂಶಿ ತಮ್ಮ ಬ್ಯಾಟಿಂಗ್‌ನಲ್ಲಿ 72 ಸಿಕ್ಸರ್‌ ಹಾಗೂ ಅವರು ಪವರ್‌ಪ್ಲೇನಲ್ಲಿ 500ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದ್ದಾರೆ. 15ರ ವಯಸ್ಸಿನ ಬ್ಯಾಟ್ಸ್‌ಮನ್‌ನಿಂದ ಇದು ಅದ್ಭುತ ಸಾಧನೆ. ಭಾರತೀಯ ಕ್ರಿಕೆಟ್‌ನ ಅವರು ದೊಡ್ಡ ಭವಿಷ್ಯ," ಎಂದು ತಿಳಿಸಿದ್ದಾರೆ.

ಐರ್ಲೆಂಡ್‌ಸರಣಿಯಲ್ಲಿ ವೈಭವ್‌ಗೆ ಅವಕಾಶ ನೀಡಬೇಕು

ಬಿಸಿಸಿಐ ಮಾಜಿ ಸೆಲೆಕ್ಟರ್‌ ಎಂಎಸ್‌ಕೆ ಪ್ರಸಾದ್‌ ಕೂಡ ವೈಭವ್‌ ಸೂರ್ಯವಂಶಿ ಅವರನ್ನು ಗುಣಗಾನ ಮಾಡಿದ್ದಾರೆ ಹಾಗೂ ಅವರು ʻಸೂಪರ್‌ ಟ್ಯಾಲೆಂಟ್‌ʼ ಮತ್ತು ʻವಿಶ್ವ ಟಿ20 ಕ್ರಿಕೆಟ್‌ನಲ್ಲಿ ಅವರು ಬೆಸ್ಟ್‌ʼ , ಹಾಗಾಗಿ ಯುವ ಬ್ಯಾಟ್ಸ್‌ಮನ್‌ಗೆ ಐರ್ಲೆಂಡ್‌ ವಿರುದ್ಧದ ಟಿ20 ಸರಣಿಯ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಭಾರತ ತಂಡಕ್ಕೆ ವೈಭವ್‌ ಸೂರ್ಯವಂಶಿ ಆಯ್ಕೆ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

"ಅವರು ಕೇವಲ ಸೂಪರ್‌ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಮಾತ್ರವಲ್ಲ. ಅವರು ಈಗಾಗಲೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಭಾರತ ತಂಡದಲ್ಲಿ ಅವರಿಗೆ ಬೇಗ ಅವಕಾಶ ನೀಡಬೇಕಾಗಿದೆ. ಶ್ರೀಲಂಕಾದಲ್ಲಿ ಭಾರತ ಎ ತಂಡದ ತ್ರಿಕೋನ ಸರಣಿಯ ಬಳಿಕ ಐರ್ಲೆಂಡ್‌ ಟಿ20ಐ ಸರಣಿಯಲ್ಲಿ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಬೇಕಾಗಿದೆ," ಎಂದು ಪಿಟಿಐ ಸಂದರ್ಶನದಲ್ಲಿ ಎಂಎಸ್‌ಕೆ ಪ್ರಸಾದ್‌ ತಿಳಿಸಿದ್ದಾರೆ.

"ಸಾಮಾನ್ಯವಾಗಿ ಭಾರತ ಎ ತಂಡದ ಪರ ಆಡಿದ ಬಳಿಕ ಭಾರತ ಮುಖ್ಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಆದರೆ, ವಿಶ್ವ ದರ್ಜೆತಯ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುತ್ತಾರೆ ಹಾಗೂ ಅವರ ವಿರುದ್ಧ ವೈಭವ್‌ ಸೂರ್ಯವಂಶಿ ಪ್ರಾಬಲ್ಯ ಸಾಧಿಸಿದ್ದಾರೆ. ಹಾಗಾಗಿ ಅವರನ್ನು ನೇರವಾಗಿ ಭಾರತ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಆಯ್ಕೆದಾರರು ಚಿಂತಿಸಬೇಕಾಗಿದೆ. ಭಾರತ ತಂಡದ ಪರ ಆಡುವುದು ದೊಡ್ಡ ವಿಷಯವಲ್ಲ, ಆದರೆ ಅವರು ಭಾರತದ ಪರ ದೀರ್ಘಾವಧಿ ಆಡುವುದು ಇಲ್ಲಿ ಮುಖ್ಯ ಸಂಗತಿ," ಎಂದು ಹೇಳಿದ್ದಾರೆ.