ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ನಲ್ಲಿ ಮಾಡುತ್ತಿರುವ ತಪ್ಪನ್ನು ತಿಳಿಸಿದ ಸುನೀಲ್‌ ಗವಾಸ್ಕರ್‌!

ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ ಇತ್ತೀಚಿನ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅವರ ಆಟದಲ್ಲಿ ತಾಂತ್ರಿಕ ದೋಷ ಕಾಣುತ್ತಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸಂಜು ಕೇವಲ ಎಂಟು ಬಾಲ್‌ಗಳಲ್ಲಿ 22 ರನ್ ಗಳಿಸಿ ಔಟ್‌ ಆಗಿದ್ದರು.

ಸಂಜು ಸ್ಯಾಮ್ಸನ್‌ ಮಾಡುತ್ತಿರುವ ತಪ್ಪನ್ನು ತಿಳಿಸಿದ ಗವಾಸ್ಕರ್‌!

ಸಂಜು ಸ್ಯಾಮ್ಸನ್‌ಗೆ ಮಹತ್ವದ ಸಲಹೆ ನೀಡಿದ ಸುನೀಲ್‌ ಗವಾಸ್ಕರ್‌. -

Profile
Ramesh Kote Feb 13, 2026 4:51 PM

ನವದೆಹಲಿ: ದೀರ್ಘಾವಧಿ ಫಾರ್ಮ್ ಕುಸಿತದಿಂದ ಹೊರಬರಲು ಯತ್ನಿಸುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ (Sanju Samson) ಅವರ ಆಟದಲ್ಲಿ ತಾಂತ್ರಿಕ ದೋಷ ಕಾಣುತ್ತಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ (IND vs PAK) ಟಿ20 ವಿಶ್ವಕಪ್ ಮಹತ್ವದ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಸಂಜು ಸ್ಯಾಮ್ಸನ್‌ಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಗುರುವಾರ ನಮೀಬಿಯಾ ವಿರುದ್ಧ ನಡೆದೊದ್ದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಸಂಜು, ಕೇವಲ 8 ಎಸೆತಗಳಲ್ಲಿ 22 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿ ವಿಕೆಟ್‌ ಒಪ್ಪಿಸಿದ್ದರು.

ಅಭಿಷೇಕ್‌ ಶರ್ಮಾ ಅನಾರೋಗ್ಯದ ಕಾರಣ ನಮೀಬಿಯಾ ವಿರುದ್ದದ ಪಂದ್ಯದ ಆಯ್ಕೆಗೆ ಅಲಭ್ಯರಾಗಿದ್ದರು. ಇವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದು ಮೈದಾನಕ್ಕಿಳಿದಿದ್ದ ಸಂಜು, ಆರಂಭದಿಂದಲೂ ನಮೀಬಿಯಾ ಬೌಲಿಂಗ್ ದಾಳಿಯನ್ನು ಎದುರಿಸಲು ಆಕ್ರಮಣಕಾರಿ ಮನೋಭಾವ ತೋರಿದರು. ಆದರೆ ಉತ್ತಮ ಆರಂಭದ ಹೊರತಾಗಿಯೂ ದೊದ್ದ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗವಾಸ್ಕರ್, ಸಂಜು ತಮ್ಮ ಶಾಟ್ ಸೆಲೆಕ್ಷನ್‌ ಮತ್ತು ಫುಟ್‌ವರ್ಕ್‌ ಮೇಲೆ ಹೆಚ್ಚಿನ ಗಮನಹರಿಸಬೇಕು. ದೊಡ್ಡ ಪಂದ್ಯಗಳಲ್ಲಿ ಸ್ಥಿರತೆ ಅತ್ಯಂತ ಮುಖ್ಯವಾಗಿದ್ದು, ತಾಂತ್ರಿಕ ದೃಢತೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಸೂಚಿಸಿದ್ದಾರೆ.

IND vs PAK: ʻಅಭಿಷೇಕ್‌ ಶರ್ಮಾ ತಾಂತ್ರಿಕವಾಗಿ ಉತ್ತಮ ಬ್ಯಾಟ್ಸ್‌ಮನ್‌ ಅಲ್ಲʼ-ಮೊಹಮ್ಮದ್‌ ಆಮಿರ್‌ ಅಚ್ಚರಿ ಹೇಳಿಕೆ!

ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸಂಜುಗೆ ಮತ್ತೊಂದು ಅವಕಾಶ ಸಿಗಬಹುದೇ ಎಂಬುದು ಸ್ಪಷ್ಟವಿಲ್ಲದಿದ್ದರೂ, ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಅವರು ಶ್ರಮಿಸಬೇಕಿದೆ.

“ಸಂಜು ಸ್ಯಾಮ್ಸನ್‌ಗೆ ತಾಂತ್ರಿಕ ಸಮಸ್ಯೆ ಇದೆ. ಅವರು ಕ್ರೀಸ್ ಒಳಗೆ ತುಂಬಾ ಆಳಕ್ಕೆ ಹೋಗಿ ಫ್ಲಿಕ್ ಶಾಟ್ ಆಡುತ್ತಾರೆ. ಅದು ಗ್ಯಾಪ್‌ಗೆ ಸರಿಯಾಗಿ ಟೈಮ್ ಆದರೆ ಅಥವಾ ಸಿಕ್ಸರ್ ಆಗಿ ಹೋದರೆ ಮಾತ್ರ ಲಾಭ,” ಎಂದು ನಮೀಬಿಯಾ ವಿರುದ್ಧ ಭಾರತದ 93 ರನ್ ಜಯದ ಬಳಿಕ ಜಿಯೋಹಾಟ್‌ಸ್ಟಾರ್‌ಗೆ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

IND vs NAM: 8 ಎಸೆತಗಳಲ್ಲಿ 22 ರನ್‌ ಸಿಡಿಸಿದರೂ ಗೋಲ್ಡನ್‌ ಚಾನ್ಸ್‌ ಕಳೆದುಕೊಂಡು ಸಂಜು ಸ್ಯಾಮ್ಸನ್!‌

“ಅವರು ಸುಧಾರಣೆ ಮಾಡಬೇಕಿದೆ, ವಿಶೇಷವಾಗಿ ಆರಂಭಿಕನಾಗಿ ಆಡುತ್ತಿರುವಾಗ ಹೊಸ ಬಾಲ್ ಎದುರಿಸುತ್ತಿರುವ ವೇಳೆ. ನಮೀಬಿಯಾ ಫೀಲ್ಡ್‌ ಸೆಟ್‌ ಮಾಡುವ ವಿಷಯದಲ್ಲಿ ಚಾತುರ್ಯ ತೋರಿತು. ಸಂಜು ಅವರನ್ನು ಔಟ್ ಮಾಡಲು ವಿಶೇಷವಾಗಿ ಫೀಲ್ಡ್ ಅಳವಡಿಸಿದ್ದರು. ಆದರೆ, ಅವರು ಕೆಲವು ಉತ್ತಮ ಶಾಟ್‌ಗಳನ್ನು ಆಡಿದ್ದು ಒಳ್ಳೆಯದು. ಅದು ಅವರಿಗೆ ಆತ್ಮವಿಶ್ವಾಸ ನೀಡಿರಬಹುದು. ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ, ಅವರು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕು,” ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟರು.