ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

UPW vs GGTW: ಸೋಫಿ ಡಿವೈನ್‌ ಆಲ್‌ರೌಂಡರ್‌ ಆಟ, ಗುಜರಾತ್‌ ಜಯಂಟ್ಸ್‌ಗೆ 45 ರನ್‌ ಜಯ!

UPW vs GGTW Match Highlights: ಸೋಫಿ ಡಿವೈನ್‌ ಆಲ್‌ರೌಂಡರ್‌ ಆಟದ ಬಲದಿಂದ ಗುಜರಾತ್‌ ಜಯಂಟ್ಸ್‌ ತಂಡ 45 ರನ್‌ಗಳಿಂದ ಯುಪಿ ವಾರಿಯರ್ಸ್‌ ತಂಡವನ್ನು ಮಣಿಸಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೂರನೇ ಗೆಲುವು ಪಡೆದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

WPL 2026: ಯುಪಿ ವಾರಿಯರ್ಸ್‌ ಎದುರು ಗುಜರಾತ್‌ ಜಯಂಟ್ಸ್‌ಗೆ 45 ರನ್‌!

ಗುಜರಾತ್‌ ಜಯಂಟ್ಸ್‌ ತಂಡಕ್ಕೆ 45 ರನ್‌ ಜಯ. -

Profile
Ramesh Kote Jan 22, 2026 11:20 PM

ವಡೋದರ: ಸೋಫಿ ಡಿವೈನ್‌ (Sophie Devine) ಆಲ್‌ರೌಂಡರ್‌ ಆಟದ ಬಲದಿಂದ ಗುಜರಾತ್‌ ಜಯಂಟ್ಸ್‌ (Gujarat Giants) ತಂಡ, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯ 14ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ತಂಡದ ವಿರುದ್ಧ 45 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ಪಡೆದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಸೋಲು ಅನುಭವಿಸಿದ ಯುಪಿ ವಾರಿಯರ್ಸ್‌ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಇದೆ. ಈ ಪಂದ್ಯದಲ್ಲಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ ರಾಜೇಶ್ವರಿ ಗಾಯಕ್ವಾಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಗುಜರಾತ್‌ ಜಯಂಟ್ಸ್‌ ತಂಡ ನೀಡಿದ್ದ 154 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಯುಪಿ ವಾರಿಯರ್ಸ್‌ ತಂಡ, ರಾಜೇಶ್ವರ್‌ ಗಾಯಕ್ವಾಡ್‌ ಹಾಗೂ ರೇಣುಕಾ ಸಿಂಗ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. ಆ ಮೂಲಕ 17.3 ಓವರ್‌ಗಳಿಗೆ 108 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು. ಫೋಬ್‌ ಲಿಚ್‌ಫೀಲ್ಡ್‌ ಹಾಗೂ ಕ್ಲೋ ಟ್ರಯಾನ್‌ ಅವರು ಕ್ರಮವಾಗಿ 32 ರನ್‌ ಹಾಗೂ 30 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು.

IPL 2026: ಆರ್‌ಸಿಬಿ ತಂಡವನ್ನು ಖರೀದಿಸಲು ಮುಂದೆ ಬಂದ ಸೀರಮ್‌ ಕಂಪನಿ ಸಿಇಒ!

ಜಯಂಟ್ಸ್‌ ತಂಡದ ಪರ ಎಲ್ಲಾ ಬೌಲರ್‌ಗಳು ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ರೇಣುಕಾ ಸಿಂಗ್‌ ಅವರು 4 ಓವರ್‌ಗಳಿಗೆ 20 ರನ್‌ ನೀಡಿ 2 ವಿಕೆಟ್‌ ಕಿತ್ತರು. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದ ಸೋಫಿ ಡಿವೈನ್‌ 3.3 ಓವರ್‌ಗಳಿಗೆ 16 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಆದರೆ, ರಾಜೇಶ್ವರಿ ಗಾಯಕ್ವಾಡ್‌ ಅವರು 4 ಓವರ್‌ಗಳಿಗೆ ಕೇವಲ 16 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದರು.



153 ರನ್‌ ಗಳಿಸಿದ ಗುಜರಾತ್‌ ಜಯಂಟ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಜಯಂಟ್ಸ್‌ ತಂಡ, ಸೋಫಿಯಾ ಡಿವೈನ್‌ (50 ರನ್‌) ಹಾಗೂ ಬೆಥ್‌ ಮೂನಿ (38 ರನ್‌) ಅವರ ಬ್ಯಾಟಿಂಗ್‌ ಬಲದಿಂದ, ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ 153 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಯುಪಿ ವಾರಿಯರ್ಸ್‌ ತಂಡಕ್ಕೆ 154 ರನ್‌ಗಳ ಗುರಿಯನ್ನು ನೀಡಿತ್ತು. ಯುಪಿ ಪರ ಕ್ರಾಂತಿ ಗೌಡ್‌ ಹಾಗೂ ಸೋಫಿ ಎಕ್ಲೇನ್‌ಸ್ಟೋನ್‌ ತಲಾ ಎರಡು ವಿಕೆಟ್‌ ಕಿತ್ತಿದ್ದರು.



ಸೋಫಿ ಡಿವೈನ್‌ ಅರ್ಧಶತಕ

ಗುಜರಾತ್‌ ಜಯಂಟ್ಸ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಬೆಥ್‌ ಮೂನಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 34 ಎಸೆತಗಳಲ್ಲಿ 38 ರನ್‌ ಗಳಿಸಿ ಔಟ್‌ ಆದರು. ಒಂದು ಹಂತದಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಸೋಫಿ ಡಿವೈನ್‌ ಅವರು ಜವಾಬ್ದಾರಿಯುತ ಇನಿಂಗ್ಸ್‌ ಆಡಿದರು. ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಿದ ಸೋಫಿ ಡಿವೈನ್‌ ಅವರು 42 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ ಅಜೇಯ 50 ರನ್‌ ಗಳಿಸಿದರು.