ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡ ಮುಂದಿನ ಟಿ20 ವಿಶ್ವಕಪ್‌ ಗೆಲ್ಲುವುದು ಅನುಮಾನವೆಂದ ಕೆ ಶ್ರೀಕಾಂತ್‌!

ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ ಏಷ್ಯಾ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಬಹುದು, ಆದರೆ ಈ ತಂಡದ ಮೂಲಕ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ ಅನ್ನು ಗೆಲ್ಲುವುದು ಅನುಮಾನ ಎಂದು ಮಾಜಿ ಟೀಮ್‌ ಇಂಡಿಯಾ ನಾಯಕ ಕೃಷ್ಣಮಾಚಾರಿ ಭವಿಷ್ಯ ನುಡಿದಿದ್ದಾರೆ.

ಭಾರತ ಟಿ20 ವಿಶ್ವಕಪ್‌ ಗೆಲ್ಲುವುದು ಅನುಮಾನ ಎಂದ ಶ್ರೀಕಾಂತ್‌!

ಭಾರತ ತಂಡ ಈ ಆಟಗಾರರೊಂದಿಗೆ ಟಿ20 ವಿಶ್ವಕಪ್‌ ಗೆಲ್ಲಲ್ಲ ಎಂದ ಶ್ರೀಕಾಂತ್‌.

Profile Ramesh Kote Aug 27, 2025 7:32 PM

ಬರಹ: ಕೆ. ಎನ್‌ ರಂಗು, ಚಿತ್ರದುರ್ಗ

ದುಬೈ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸೂರ್ಯಕುಮಾರ್‌ ನಾಯಕತ್ವದಲ್ಲಿ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು (India's Squad) ಆಯ್ಕೆ ಮಾಡಿತ್ತು. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಆಲ್‌ರೌಂಡರ್‌ ವಿಭಾಗದಲ್ಲಿ ತಂಡ ಬಲಿಷ್ಠವಾಗಿದೆ ಎನ್ನಲಾಗಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಗೊಂದಲ ಹೊರತುಪಡಿಸಿ ಇನ್ನೆಲ್ಲಾ ವಿಭಾಗದಲ್ಲೂ ತಂಡದ ಆಯ್ಕೆ ಅತ್ಯುತ್ತಮವಾಗಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಕೆಲವು ಸಣ್ಣಪುಟ್ಟ ಬದಲಾವಣೆಗಳ ಅಗತ್ಯವಿದೆ. ಅದನ್ನು ಹೊರತುಪಡಿಸಿದರೆ ಆಯ್ಕೆ ಸಮಿತಿ ಬೇರೆ ಯೋಚಿಸುವ ಅಗತ್ಯ ಇಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಸಲಹೆಯನ್ನು ನೀಡುತ್ತಿದ್ದಾರೆ. ಇದರ ನಡುವೆ ತಮಿಳುನಾಡು ಕ್ರಿಕೆಟಿಗ ಕ್ರಿಸ್‌ ಶ್ರೀಕಾಂತ್‌ (Kris Srikkanth) ಮಹತ್ವದ ಹೇಳಿಕೆ ನೀಡಿದ್ದು, ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಅವಕಾಶಗಳಿದ್ದರೂ ಮುಂಬರುವ ಟಿ20 ವಿಶ್ವಕಪನಲ್ಲಿ ಭಾರತ ತಂಡದ ಅವಕಾಶದ ಬಗ್ಗೆ ಅನುಮಾನ ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಸುದೀರ್ಘ ವಿಡಿಯೋವೊಂದನ್ನು ಹಂಚಿಕೊಂಡಿರುವ ಕ್ರಿಸ್‌ ಶ್ರೀಕಾಂತ್‌, " ಈ ತಂಡದೊಂದಿಗೆ ನಾವು ಏಷ್ಯಾ ಕಪ್ ಗೆಲ್ಲಬಹುದು, ಆದರೆ ಈ ಗುಂಪಿನೊಂದಿಗೆ ಟಿ20 ವಿಶ್ವಕಪ್ ಗೆಲ್ಲುವ ಯಾವುದೇ ಅವಕಾಶವಿಲ್ಲ. ನೀವು ಈ ತಂಡವನ್ನು ವಿಶ್ವಕಪ್‌ಗೆ ಕರೆದೊಯ್ಯುತ್ತೀರಾ? ಆರು ತಿಂಗಳಷ್ಟೇ ದೂರದಲ್ಲಿರುವ ಟಿ20 ವಿಶ್ವಕಪ್‌ಗೆ ಇದು ತಯಾರಿಯೇ?" ಎಂದು ಹೇಳಿದ್ದಾರೆ.

Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್‌ ರೌಫ್‌ ಎಚ್ಚರಿಕೆ!

2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಟಿ20ಐ ಆಡಿದ್ದ ಗಿಲ್, ಟೂರ್ನಿಗೆ ಸೂರ್ಯಕುಮಾರ್‌ ಯಾದವ್‌ಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಇದರರ್ಥ ಅವರು ಪ್ಲೇಯಿಂಗ್‌ XIನಲ್ಲಿ ಆಡುವುದು ಖಚಿತ. ಜನವರಿಯಲ್ಲಿ ಇಂಗ್ಲೆಂಡ್ ದ್ವಿಪಕ್ಷೀಯ ಸರಣಿಯ ಸಮಯದಲ್ಲಿ ಉಪನಾಯಕನಾಗಿದ್ದ ಅಕ್ಷರ್ ಪಟೇಲ್ ಅವರನ್ನು ಆ ಪಾತ್ರದಿಂದ ತೆಗೆದುಹಾಕಲಾಯಿತು. 2025ರ ಐಪಿಎಲ್‌ ಟೂರ್ನಿಯಲ್ಲಿ ಎಡವಿದ್ದ ರಿಂಕು ಸಿಂಗ್, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಅವರನ್ನು ಸೇರಿಸಿಕೊಂಡಿರುವುದನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ರಿಂಕು 13 ಪಂದ್ಯಗಳಿಂದ ಕೇವಲ 206 ರನ್ ಗಳಿಸಿದರೆ, ಶಿವಂ ದುಬೆ ಉತ್ತಮ ಪ್ರದರ್ಶನ ನೀಡಿ ಸಿಎಸ್‌ಕೆ ಪರ 14 ಪಂದ್ಯಗಳಲ್ಲಿ 357 ರನ್ ಗಳಿಸಿದರು. ಮತ್ತೊಂದೆಡೆ, ಒಂದು ಟಿ20ಐ ಆಡಿರುವ ಹರ್ಷಿತ್ ರಾಣಾ ಅವರನ್ನು ಪರ್ಪಲ್ ಕ್ಯಾಪ್ ವಿಜೇತ ಪ್ರಸಿದ್ಧ್ ಕೃಷ್ಣ ಅವರಿಗಿಂತ 15 ಸದಸ್ಯರ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಇತ್ತೀಚಿನ ಪ್ರದರ್ಶನಗಳಿಗಿಂತ ಹಿಂದಿನ ಪ್ರದರ್ಶನಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Asia Cup 2025: ʻಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!

ಮುಂದುವರೆದು ಮಾತನಾಡಿ, "ಅವರು ಹಿಂದೆ ಸರಿದಿದ್ದಾರೆ. ಅಕ್ಷರ್ ಪಟೇಲ್ ಅವರನ್ನು ಉಪನಾಯಕತ್ವದಿಂದ ತೆಗೆದುಹಾಕಲಾಗಿದೆ. ರಿಂಕು ಸಿಂಗ್, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಹೇಗೆ ಬಂದಿದ್ದಾರೆಂದು ನನಗೆ ತಿಳಿದಿಲ್ಲ. ಐಪಿಎಲ್ ಅನ್ನು ಆಯ್ಕೆಗೆ ಪ್ರಮುಖ ಮಾನದಂಡವೆಂದು ಪರಿಗಣಿಸಲಾಗಿದೆ, ಆದರೆ ಆಯ್ಕೆದಾರರು ಅದಕ್ಕೂ ಮೊದಲು ಪ್ರದರ್ಶನವನ್ನು ಪರಿಗಣಿಸಿದ್ದಾರೆಂದು ತೋರುತ್ತದೆ," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಟೂರ್ನಿಯಲ್ಲಿ ಭಾರತದ ಪರ 5ನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ನಡೆಸುತ್ತಾರೆ ಎಂಬ ಪ್ರಶ್ನೆಯನ್ನು ಸಹ ಕೇಳಿತ್ತು. ಯಶಸ್ವಿ ಜೈಸ್ವಾಲ್, ದುಬೆ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂದು ಅವರು ಹೇಳಿದ್ದಾರೆ.

Asia Cup 2025: ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರತಿಕ್ರಿಯೆ!

"5ನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ? ಐದು ಮಂದಿಯಲ್ಲಿ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಅಥವಾ ಶಿವಂ ದುಬೆ ಅಥವಾ ರಿಂಕು ಸಿಂಗ್ ಇರಬೇಕು. ಹಾರ್ದಿಕ್ ಪಾಂಡ್ಯ ಸಾಮಾನ್ಯವಾಗಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಾರೆ , ಆದ್ದರಿಂದ ಈಗ ಅಕ್ಷರ್ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಾಧ್ಯವಿಲ್ಲ. ಅವರು ದುಬೆಯನ್ನು ಹೇಗೆ ಆಯ್ಕೆ ಮಾಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಏನು ಮಾಡುತ್ತಾರೆ?" ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಭಾರತ ತಂಡ ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಡುವ ಮೂಲಕ ಏಷ್ಯಾಕಪ್‌ ಟೂರ್ನಿಯ ಅಭಿಯಾನ ಆರಂಭಿಸಲಿದೆ. ಇದರ ಮುಂದಿನ ಪಂದ್ಯ ಸಾಂಪ್ರಾದಾಯಿಕ ಎದುರಾಳಿ ಪಾಕ್‌ ವಿರುದ್ದ ಸೆಪ್ಟೆಂಬರ್‌ 14ರಂದು ನಡೆಯಲಿದೆ.