ಭಾರತ ಮಹಿಳಾ ತಂಡದ ಪ್ಲೇಯಿಂಗ್ XIನಲ್ಲಿ ಸ್ಮೃತಿ ಮಂಧಾನಾ ಸ್ಥಾನದಲ್ಲಿ ಆಡಿದ ಗುಣಲಕ್ ಕಮಲಿನಿ ಯಾರು!
17ನೇ ವಯಸ್ಸಿನ ಗುಣಲನ್ ಕಮಲಿನಿ ಶ್ರೀಲಂಕಾ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಮಹಿಳಾ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ಗಾಯಾಳು ಸ್ಮೃತಿ ಮಂಧಾನಾ ಅವರ ಸ್ಥಾನದಲ್ಲಿ ಭಾರತ ಟಿ20ಐ ತಂಡದ ಪ್ಲೇಯಿಂಗ್ XIಗೆ ಪ್ರವೇಶ ಮಾಡಿದ್ದಾರೆ. ಅಂದ ಹಾಗೆ ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಮಹಿಳಾ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗುಣಲನ್ ಕಮಲಿನಿ ಯಾರು? -
ನವದೆಹಲಿ: ಭಾರತ ಮತ್ತು ಶ್ರೀಲಂಕಾ (INDW vs SLW) ನಡುವಣ ಐದು ಪಂದ್ಯಗಳ ಟಿ20ಐ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿತ್ತು. 17ನೇ ವಯಸ್ಸಿನ ಗುಣಲನ್ ಕಮಲಿನಿ (Gunalan Kamalini) ಈ ಪಂದ್ಯದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು ಗಾಯಾಳು ಸ್ಮೃತಿ ಮಂಧಾನಾ (Smriti Mandhana) ಅವರ ಸ್ಥಾನದಲ್ಲಿ ಭಾರತದ ಪ್ಲೇಯಿಂಗ್ XIನಲ್ಲಿ ಆಡಿದರು. ಇನಿಂಗ್ಸ್ ಆರಂಭಿಸಿದ ಇವರು 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ತಮ್ಮ ಟಿ20ಐ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸುವಲ್ಲಿ ವಿಫಲರಾದರು. ಆದಾಗ್ಯೂ, ಅವರ ವೃತ್ತಿ ಬದುಕಿನ ಹಾದಿ ಸಾಕಷ್ಟು ಆಸಕ್ತಿದಾಯಕವಾಗಿದೆ.
ತಮಿಳುನಾಡಿನ ಗುಣಲನ್ ಕಮಲಿನಿ ಒಬ್ಬ ಪ್ರತಿಭಾನ್ವಿತ ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್‌ವುಮೆನ. ಕಮಲಿನಿ ಭಾರತೀಯ ತಂಡವನ್ನು ಸೇರುವ ಮೊದಲೇ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಮಲಿನಿ ಕೇವಲ 16 ವರ್ಷ ಮತ್ತು 213 ದಿನಗಳ ವಯಸ್ಸಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಕಮಲಿನಿ ಡಬ್ಲ್ಯುಪಿಎಲ್ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂದು ದಾಖಲೆ ಬರೆದಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಒಮನ್ ತಂಡ ಪ್ರಕಟ!
2025ರ ಮಿನಿ-ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿತು. ಮುಂಬೈ ತಂಡ 10 ಲಕ್ಷ ರು ಮೂಲ ಬೆಲೆಯೊಂದಿಗೆ ಅವರನ್ನು 1.6 ಕೋಟಿ ರು. ಗಳಿಗೆ ಖರೀದಿಸಿತ್ತು. ಇತ್ತೀಚೆಗೆ, ಅವರು ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನವನ್ನು ತೋರಿದ್ದರು. ಅವರು ಕೇವಲ 29 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿ ತಂಡವನ್ನು ಸ್ಮರಣೀಯ ಗೆಲುವಿಗೆ ಕರೆದೊಯ್ದಿದ್ದರು.
ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಅವರು ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರು. 2024 ರ ಅಂಡರ್-19 ಮಹಿಳಾ ಟಿ20 ಟ್ರೋಫಿಯಲ್ಲಿ, ಎಂಟು ಪಂದ್ಯಗಳಲ್ಲಿ 311 ರನ್ ಗಳಿಸುವ ಮೂಲಕ ಅವರು ತಮ್ಮ ತಂಡದ (ತಮಿಳುನಾಡು) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Ellyse Perry: 2026ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಸ್ಟಾರ್ ಆಟಗಾರ್ತಿ ಔಟ್, ಆರ್‌ಸಿಬಿಗೆ ಆಘಾತ!
ಐದನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ
ಐದನೇ ಟಿ20ಐ ಪಂದ್ಯದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 175 ರನ್ ಕಲೆ ಹಾಕಿತು. ಆ ಮೂಲಕ ಶ್ರೀಲಂಕಕ್ಕೆ 176 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 68 ರನ್‌ಗಳೊಂದಿಗೆ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ, ಹಾಸೀನಿ ಪೆರೆರಾ (65) ಹಾಗೂ ಇಮೇಶ ದುಲಾನಿ (50) ಅವರ ಅರ್ಧಶತಕಗಳ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಭಾರತ ಮಹಿಳಾ ತಂಡ 15 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.