IND vs AUS: ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿಕೊಳ್ಳಲು ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್!
ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪ ನಾಯಕ ಶ್ರೇಯಸ್ ಅಯ್ಯರ್ ಅವರು ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿಕೊಂಡಿದ್ದರು. ಅಡಿಲೇಡ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿಕೊಳ್ಳಲು ಕಾರಣವನ್ನು ತಿಳಿಸಿದ್ದಾರೆ.

ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿಕೊಳ್ಳಲು ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್. -

ನವದೆಹಲಿ: ಗುರುವಾರ ಅಡಿಲೇಡ್ ಓವಲ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರೋಹಿತ್ ಶರ್ಮಾ ಅರ್ಧಶತಕವನ್ನು ಬಾರಿಸಿದ ಹೊರತಾಗಿಯೂ ಭಾರತ ತಂಡ ಎರಡು ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರು ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಅನ್ನು ಬದಲಿಸಿಕೊಂಡಿದ್ದರು. ಆದರೂ ಅವರು ನಿರ್ಣಾಯಕ ಅರ್ಧಶತಕ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಜೊತೆ ಮೂರನೇ ವಿಕೆಟ್‌ಗೆ 118 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೂ ಈ ಪಂದ್ಯವನ್ನು ಗೆಲ್ಲಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ ಹಾಗೂ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್ ಇಂಡಿಯಾ, ಏಕದಿನ ಸರಣಿಯನ್ನು 0-2 ಅಂತರದಲ್ಲಿ ಸೋಲು ಅನುಭವಿಸಿತು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲಿದರು. ಎರಡನೇ ಪಂದ್ಯದಲ್ಲಿ ಅಯ್ಯರ್ ಸ್ಟ್ಯಾನ್ಸ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಬೌನ್ಸ್ ಪಿಚ್‌ಗಳಲ್ಲಿ ವೇಗದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿದ್ದೇನೆಂದು ಹೇಳಿದ ಅಯ್ಯರ್, ಇದಕ್ಕೆ ಕೋಚ್‌ಗಳು ಸಹಾಯ ಮಾಡಿದ್ದಾರೆ.
IND vs AUS: ಆಸ್ಟ್ರೇಲಿಯಾ ಎದುರು ಎರಡನೇ ಪಂದ್ಯದಲ್ಲಿಯೂ ಸೋತು ಒಡಿಐ ಸರಣಿ ಕಳೆದುಕೊಂಡ ಭಾರತ!
"ಇತ್ತೀಚೆಗೆ ನಾನು ಈ ತಂತ್ರವನ್ನು ಅಳವಡಿಸಿಕೊಂಡಿದ್ದೇನೆ, ಆದರೆ ನಾನು ಕಾಲಾನಂತರದಲ್ಲಿ ಬದಲಾಗಿದ್ದೇನೆ ಎಂದಲ್ಲ, ಆದರೆ ಕಳೆದ ವರ್ಷದಿಂದ, ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಬೌನ್ಸ್ ಇರುವ ನೇರವಾದ ನಿಲುವನ್ನು ಹೊಂದಲು ನಾನು ಬಯಸಿದ್ದೆ. ಅದರ ಆಧಾರದ ಮೇಲೆ, ನಾನು ನನ್ನ ತರಬೇತುದಾರರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ನಾವು ಈ ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಅದು ನನಗೆ ಚೆನ್ನಾಗಿ ಹೊಂದಿಕೆಯಾಯಿತು. ನಾನು ಆಟವಾಡುತ್ತಾ ಬೆಳೆದ ರೀತಿ, ನಾನು ಪ್ರಧಾನವಾಗಿ ನೇರವಾದ ಸ್ಟ್ಯಾನ್ಸ್ ಹೊಂದಿದ್ದೆ," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
"ನಾನು ನನ್ನ ಹಳೆಯ ತಂತ್ರಕ್ಕೆ ಹಿಂತಿರುಗಿ ನೋಡೋಣ ಹಾಗೂ ಇದು ಹೇಗೆ ಕೆಲಸ ಮಾಡುತ್ತದೆ ಎಂದು ಅಂದುಕೊಂಡೆ. ಹೌದು, ನಾನು ನನ್ನನ್ನು ಬೆಂಬಲಿಸಿದೆ ಮತ್ತು ದೇಶಿ ಕ್ರಿಕೆಟ್‌ನಿಂದಲೇ ಇದನ್ನು ಪ್ರಾರಂಭಿಸಿದ್ದೇನೆ. ಇಲ್ಲಿಯವರೆಗೆ, ನಾನು ಅದೇ ಸ್ಟ್ಯಾನ್ಸ್ ಮುಂದುವರಿಸಿದ್ದೇನೆ," ಎಂದು ಅವರು ಹೇಳಿದ್ದಾರೆ.
IND vs AUS: ಎರಡನೇ ಒಡಿಐ ಸೋಲಿಗೆ ಕಾರಣವೇನೆಂದು ತಿಳಿಸಿದ ಶುಭಮನ್ ಗಿಲ್!
ರೋಹಿತ್ ಜತೆ ಜೊತೆಯಾಟದ ಬಗ್ಗೆ ಅಯ್ಯರ್ ಮಾತು
"ಪಾಲುದಾರಿಕೆಯ ಬಗ್ಗೆ ಹೇಳುವುದಾದರೆ, ನೀವು ಸರಿಯಾಗಿ ಹೇಳಿದಂತೆ ಅದು ಬಹಳ ನಿರ್ಣಾಯಕವಾಗಿತ್ತು ಎಂದು ನಾನು ಭಾವಿಸುತ್ತೇನೆ. ಹೇಝಲ್‌ವುಡ್ ಅವರು ಅದ್ಭುತವಾಗಿ ಬೌಲ್ ಮಾಡುತ್ತಿದ್ದರು ಮತ್ತು ಚೆಂಡು ಒಳಗೆ ಮತ್ತು ಹೊರಗೆ ಬರುತ್ತಿತ್ತು. ಆದ್ದರಿಂದ ನಾವು ನಮ್ಮ ಕಡೆಗೆ ಆವೇಗವನ್ನು ನಿರ್ಮಿಸೋಣ ಎಂದು ಹೇಳುತ್ತಿದ್ದೆವು. ಇದು ಬ್ಯಾಟ್ ಮಾಡಲು ಸುಲಭವಾದ ವಿಕೆಟ್ ಆಗಿರಲಿಲ್ಲ, ವಿಶೇಷವಾಗಿ ಆರಂಭದಲ್ಲಿ. ಆದ್ದರಿಂದ ನಾವು ಆರಂಭದಲ್ಲಿ ಆಕ್ರಮಣಕಾರಿ ವಿಧಾನವನ್ನು ಹೊಂದಲು ಬಯಸಿದ್ದೆವು. ಆದರೆ ಅದೇ ಸಮಯದಲ್ಲಿ ರನ್ ಗಳಿಸುವುದು ಸುಲಭವಾಗಿರಲಿಲ್ಲ. ಆದ್ದರಿಂದ ನಾವು ಸಾಧ್ಯವಾದಷ್ಟು ಸ್ಟ್ರೈಕ್ ರೊಟೇಟ್ ಮಾಡಲು ನಿರ್ಧರಿಸಿದ್ದೆವು ಮತ್ತು ನಮ್ಮ ಬೌಲರ್‌ಗಳು ಎದುರಾಳಿ ತಂಡವನ್ನು ಕಟ್ಟಿಹಾಕುವಷ್ಟು ಮೊತ್ತವನ್ನು ನಾವು ಕಲೆಹಾಕಬೇಕೆಂದು ಭಾವಿಸಿದ್ದೆವು," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.