ಟಿ20 ವಿಶ್ವಕಪ್ ಆಚರಣೆಯ ಫೋಟೊದಿಂದ ಸ್ಯಾಮ್ಸನ್‌ರನ್ನು ಎಡಿಟ್ ಮಾಡಿದ್ರಾ ಗಿಲ್?
Shubman Gill: ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಕ್ಕೆ ಶುಭಮನ್ ಗಿಲ್ ಅಸೂಯೆ ಪಟ್ಟಿದ್ದರು ಮತ್ತು ಅದೇ ಕಾರಣಕ್ಕಾಗಿ, ಅವರು ತಮ್ಮ ಅಭಿನಂದನಾ ಪೋಸ್ಟ್‌ನ ಚಿತ್ರದಿಂದ ಸಂಜು ಅವರನ್ನು ತೆಗೆದುಹಾಕಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
T20 World Cup celebration picture -
ಮುಂಬಯಿ, ಮಾ.13: ಮಾರ್ಚ್ 8 ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಭಾರತ ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಐತಿಹಾಸಿಕ ಸಾಧನೆ ಮಾಡಿದ ಐದು ದಿನಗಳ ನಂತರ, ಶುಭಮನ್ ಗಿಲ್ ಅವರು ತಮ್ಮ ಅಭಿನಂದನಾ ಚಿತ್ರದಲ್ಲಿ ಸಂಜು ಸ್ಯಾಮ್ಸನ್ ಅವರ ಫೋಟೊವನ್ನು ಎಡಿಟ್ ಮಾಡಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಟೀಕೆ ಎದುರಿಸಿದ್ದಾರೆ.
ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮತ್ತು ನಂತರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಕ್ರಮವಾಗಿ ಮೂರು ಅರ್ಧಶತಕಗಳನ್ನು (97*, 89, 89) ಬಾರಿಸಿದರು. ಗಮನಾರ್ಹವಾಗಿ, ಏಷ್ಯಾ ಕಪ್ ತಂಡದಲ್ಲಿ ಸ್ಯಾಮ್ಸನ್ ಬದಲಿಗೆ ಗಿಲ್ ಅಗ್ರಸ್ಥಾನದಲ್ಲಿದ್ದರು. ಆದರೆ ವಿಶ್ವಕಪ್ ತಂಡವನ್ನು ಘೋಷಿಸಿದಾಗ ಅಂತಿಮವಾಗಿ ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡರು.
ಕಾವ್ಯ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆ ಅಮಾನತು
ವಿಶ್ವಕಪ್ ತಂಡದಲ್ಲಿ ಸ್ಯಾಮ್ಸನ್ ಸ್ಥಾನ ಪಡೆದಿದ್ದಕ್ಕೆ ಗಿಲ್ ಅಸೂಯೆ ಪಟ್ಟಿದ್ದರು ಮತ್ತು ಅದೇ ಕಾರಣಕ್ಕಾಗಿ, ಅವರು ತಮ್ಮ ಅಭಿನಂದನಾ ಪೋಸ್ಟ್‌ನ ಚಿತ್ರದಿಂದ ಸಂಜು ಅವರನ್ನು ತೆಗೆದುಹಾಕಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಚಿತ್ರವನ್ನು ಅಭಿಮಾನಿಗಳು ಹೋಲಿಸುತ್ತಿದ್ದು, ಗಿಲ್ ಅವರು ಅಸೂಯೆಯಿಂದ ಸ್ಯಾಮ್ಸನ್ ಅವರನ್ನು ಛಾಯಾಚಿತ್ರದಿಂದ ತೆಗೆದುಹಾಕಿ ನಂತರ ಭಾರತೀಯ ತಂಡವನ್ನು ಅಭಿನಂದಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
Not just a team. A family.
— Surya Kumar Yadav (@surya_14kumar) March 8, 2026
Not just a trophy. A dream for a billion of us.
PROUD to lead this group, PROUD to represent my India 🇮🇳🏆 A huge thank you to everyone standing beside me. You are the pillars of my strength 💙🙌🏼🫶🏻 pic.twitter.com/1fZ1DH3o5M
ಫೋಟೊದ ಅಸಲಿ ಸತ್ಯವನ್ನು ನೋಡುವುದಾದದರೆ ಗಿಲ್ ಈ ಫೋಟೊವನ್ನು ಉದ್ದೇಶಪೂರ್ವಕವಾಗಿ ಹಾಕಿದಂತೆ ಕಾಣುತ್ತಿಲ್ಲ. ಹೌದು, ಏಕೆಂದರೆ ಟಿ20 ವಿಶ್ವಕಪ್ ಸಂಭ್ರಮಾಚರಣೆಯ ಹಲವಾರು ಫೋಟೋಗಳನ್ನು ಕ್ಲಿಕ್ ಮಾಡಲಾಗಿತ್ತು. ಗಮನಾರ್ಹವಾಗಿ, ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಅಭಿನಂದನಾ ಪೋಸ್ಟ್‌ನಲ್ಲಿ ಗಿಲ್ ಹಂಚಿಕೊಂಡ ಅದೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರರ್ಥ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಚಿತ್ರವು ಎಡಿಟ್ ಮಾಡಿದ ಚಿತ್ರವಲ್ಲ ಮತ್ತು ಕ್ಲಿಕ್ ಮಾಡಲಾದ ಹಲವಾರು ಚಿತ್ರಗಳಲ್ಲಿ ಒಂದಾಗಿದೆ.