ಕೊನೆಯ ಓವರ್‌ನಲ್ಲಿ ಸತತ 4 ವಿಕೆಟ್ ಕಿತ್ತು ರೋಚಕ ಗೆಲುವು ತಂದುಕೊಟ್ಟ ಶನಕ
Dasun Shanaka: ಸಿಯಾಟಲ್ ಓರ್ಕಾಸ್ ತಂಡವು ಜುಲೈ 10 ರಂದು MI ನ್ಯೂಯಾರ್ಕ್ ವಿರುದ್ಧ ತಮ್ಮ ಮುಂದಿನ ಪಂದ್ಯವನ್ನು ಆಡಲಿದೆ. ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಜುಲೈ 12 ರಂದು ವಾಷಿಂಗ್ಟನ್ ಫ್ರೀಡಂ ವಿರುದ್ಧದ ಪಂದ್ಯವನ್ನು ಆಡಲಿದೆ.
Dasun Shanaka -
ನವದೆಹಲಿ, ಜು.6: ಮೇಜರ್ ಲೀಗ್ ಕ್ರಿಕೆಟ್ ಇತಿಹಾಸದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ದಾಸುನ್ ಶಂಕಾ ಪಾತ್ರರಾಗಿದ್ದಾರೆ. ಪೊಮೊನಾದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದರು. ಮಾತ್ರವಲ್ಲದೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
122 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಟಿಎಸ್‌ಕೆ ತಂಡ ಕೊನೆಯ ಓವರ್‌ಗೆ 107/5 ಸ್ಕೋರ್‌ನೊಂದಿಗೆ ಆರಾಮದಾಯಕ ಸ್ಥಿತಿಯಲ್ಲಿತ್ತು ಮತ್ತು ಗೆಲ್ಲಲು ಇನ್ನೂ 15 ರನ್‌ಗಳು ಬೇಕಾಗಿದ್ದವು.
ಅಂತಿಮ ಓವರ್ ಎಸೆದ ಶನಕ ಅವರ ಮೊದಲ ಎಸೆತದಲ್ಲಿ ಶುಭಂ ರಂಜಾನೆ ಬೌಂಡರಿ ಬಾರಿಸಿದರು. ಮಂದಿನ ಎಸೆತದಲ್ಲಿ ರಂಜಾನೆ ಒಂದು ರನ್ ಕಸಿದರು. ಆ ಬಳಿಕದ ನಾಲ್ಕು ಎಸೆತಗಳಲ್ಲಿ ಶನಕ ಸಂಪೂರ್ಣ ಮೇಲುಗೈ ಸಾಧಿಸಿ ಸತತ 4 ವಿಕೆಟ್ ಕಿತ್ತು ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.
DASUN SHANAKA BRINGS THIS ONE HOME FOR THE ORCAS 🐋
— Cognizant Major League Cricket (@MLCricket) July 6, 2026
The Texas Super Kings went into the last over needing just 15 runs, but Shanaka held them off and got the first double hat-trick in Cognizant Major League Cricket history 🎩 pic.twitter.com/vN3mkIAmwJ
ನಿಧಾನಗತಿಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ ಓರ್ಕಾಸ್ ತಂಡವು ಒಟ್ಟು 121 ರನ್ ಗಳಿಸಿತು. ಆರಂಭಿಕ ಓವರ್‌ಗಳಲ್ಲಿ 3 ವಿಕೆಟ್‌ಗೆ 15 ರನ್ ಗಳಿಸುವ ಮೂಲಕ ಎಡವಿತ್ತು. ಕ್ಯಾಮರೂನ್ ಗ್ಯಾನನ್ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 20 ರನ್‌ಗಳೊಂದಿಗೆ ತಂಡದ ಪರ ಅತಿ ಹೆಚ್ಚು ಸ್ಕೋರರ್ ಆದರು. ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಶನಕ ಅವರ ನಾಲ್ಕು ವಿಕೆಟ್‌ಗಳ ಅದ್ಭುತ ಆಟ ಮತ್ತು ಬಾರ್ಟ್‌ಮನ್ ಅವರ ಮೂರು ವಿಕೆಟ್‌ಗಳ ಗೊಂಚಲು ತಂಡವನ್ನು ಗೆಲುವಿನತ್ತ ಕೊಂಡೊಯ್ದವು.
ಮೂರನೇ ಟಿ20ಗೆ ಭಾರತ-ಇಂಗ್ಲೆಂಡ್ ಸಜ್ಜು; ಭಾರತ ಪರ 2 ಬದಲಾವಣೆ ಸಾಧ್ಯತೆ
ಸಿಯಾಟಲ್ ಓರ್ಕಾಸ್ ತಂಡವು ಜುಲೈ 10 ರಂದು MI ನ್ಯೂಯಾರ್ಕ್ ವಿರುದ್ಧ ತಮ್ಮ ಮುಂದಿನ ಪಂದ್ಯವನ್ನು ಆಡಲಿದೆ. ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಜುಲೈ 12 ರಂದು ವಾಷಿಂಗ್ಟನ್ ಫ್ರೀಡಂ ವಿರುದ್ಧದ ಪಂದ್ಯವನ್ನು ಆಡಲಿದೆ.