ಕಾವ್ಯ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆ ಅಮಾನತು
Sunrisers Leeds: ಸನ್‌ರೈಸರ್ಸ್ ಲೀಡ್ಸ್‌ನ ಎಕ್ಸ್ ಖಾತೆಯನ್ನು ಈಗ ಅಮಾನತುಗೊಳಿಸಲಾಗಿದೆ. ಭಾರತದಲ್ಲಿನ ಆಕ್ರೋಶದ ನಂತರ ಫ್ರಾಂಚೈಸಿ ಅಬ್ರಾರ್ ಅಹ್ಮದ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ₹2.34 ಕೋಟಿ ಕೊಟ್ಟು ಖರೀದಿಸಿದೆ.
Sunrisers Leeds' X account gets suspended -
ನವದೆಹಲಿ, ಮಾ.13: ದಿ ಹಂಡ್ರೆಡ್ ಲೀಗ್ 2026ರ ಹರಾಜಿನಲ್ಲಿ ಕಾವ್ಯಾ ಮಾರನ್(Kavya Maran) ಒಡೆತನದ ಸನ್‌ರೈಸರ್ಸ್ ಲೀಡ್ಸ್(Sunrisers Leeds) ಫ್ರಾಂಚೈಸಿಯು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಮೂಲದ ಫ್ರಾಂಚೈಸಿಯು ಪಾಕಿಸ್ತಾನದ ಆಟಗಾರನನ್ನು ಖರೀದಿಸಿರುವುದಕ್ಕೆ ಭಾರತದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಸಂಘರ್ಷ ಇರುವುದರಿಂದ ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿಷೇಧಿಸಲಾಗಿದೆ. ಹೀಗಿದದ್ದರೂ ಭಾರತೀಯ ಮೂಲದ ಫ್ರಾಂಚೈಸಿಯು ಹಂಡ್ರೆಡ್ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರನನ್ನು ಖರೀದಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ₹2.34 ಕೋಟಿ ಕೊಟ್ಟು ಖರೀದಿಸಿದೆ.
ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ತಂಡ ಆಯ್ಕೆ ಮಾಡಿರುವುದರಿಂದ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಅಭಿಮಾನಿಗಳು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್‌ನಿಂದ ಬಹಿಷ್ಕರಿಸಬೇಕೆಂದು ಕರೆ ನೀಡುತ್ತಿರುವಂತೆಯೇ, ಫ್ರಾಂಚೈಸ್ ಸಹ-ಮಾಲೀಕ ಕಾವ್ಯಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಇದೇ ಕಾರಣಕ್ಕಾಗಿ ಗುರಿಯಾಗಿಸಲಾಗುತ್ತಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಫ್ರಾಂಚೈಸಿಗೆ ಬಿಸಿಸಿಐ ಸೂಚಿಸಿದ್ದರಿಂದ ಬಲವಂತವಾಗಿ ಬಿಡುಗಡೆ ಮಾಡಬೇಕಾಯಿತು. ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಸನ್‌ರೈಸರ್ಸ್ ಲೀಡ್ಸ್ ಕೂಡ ಅಬ್ರಾರ್ ಅಹ್ಮದ್‌ರನ್ನು ತಂಡದಿಂದ ಕೈಬಿಡಲಿದೆಯಾ ಎಂದು ಕಾದು ನೋಡಬೇಕಿದೆ. ಹಂಡ್ರೆಡ್ ಲೀಗ್‌ನ ಪ್ರತೀ ಪಂದ್ಯಾವಳಿಯು 100 ಎಸೆತಗಳಿಗೆ ಸೀಮಿತವಾಗಿರಲಿದ್ದು, 8 ಫ್ರಾಂಚೈಸಿಗಳು ಭಾಗವಹಿಸಲಿವೆ. ಜುಲೈ 21ರಿಂದ ಪ್ರಾರಂಭವಾಗಲಿದೆ.
ಪಾಕ್ ಆಟಗಾರನ ಖರೀದಿ; ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ತಂಡಕ್ಕೆ ಬಾಯ್ಕಾಟ್ ಬಿಸಿ!
ಸನ್‌ರೈಸರ್ಸ್ ಲೀಡ್ಸ್‌ನ ಎಕ್ಸ್ ಖಾತೆಯನ್ನು ಈಗ ಅಮಾನತುಗೊಳಿಸಲಾಗಿದೆ. ಭಾರತದಲ್ಲಿನ ಆಕ್ರೋಶದ ನಂತರ ಫ್ರಾಂಚೈಸಿ ಅಬ್ರಾರ್ ಅಹ್ಮದ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಏಕೆಂದರೆ ಮುಂಬರುವ ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್ ತಂಡವೂ ಸಹ ಈ ನಿರ್ಧಾರದಿಂದ ತೊಂದರೆ ಅನುಭವಿಸುವ ಸಾಧ್ಯತೆಯಿದೆ.