ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ದುಃಖದಿಂದ ತಲೆ ತಗ್ಗಿಸಿ, ಕೈಗವಸು ಮೇಲಕ್ಕೆತ್ತಿದ ವಿರಾಟ್‌ ಕೊಹ್ಲಿ; ಇದು ನಿವೃತ್ತಿ ಸುಳಿವೇ?

ಕೊಹ್ಲಿ ಅಡಿಲೇಡ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡಾಂಗಣದಲ್ಲಿ 18 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 975 ರನ್‌ ಗಳಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ 25 ರನ್‌ ಬಾರಿಸಿದ್ದರೆ ಅವರು ಅಡಿಲೇಡ್‌ನಲ್ಲಿ ಸಾವಿರ ರನ್‌ ಗಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳುತ್ತಿದ್ದರು. ಆದರೆ ಅವರು ಶೂನ್ಯಕ್ಕೆ ಔಟಾಗಿ ಈ ಅವಕಾಶ ಕಳೆದುಕೊಂಡರು.

ಸತತ ಶೂನ್ಯ; ನಿವೃತ್ತಿ ಸುಳಿವು ಬಿಟ್ಟುಕೊಟ್ಟ ವಿರಾಟ್‌ ಕೊಹ್ಲಿ

-

Abhilash BC Abhilash BC Oct 23, 2025 3:20 PM

ಅಡಿಲೇಡ್‌: ಆಸ್ಟ್ರೇಲಿಯಾ(Australia vs India) ವಿರುದ್ಧದ ಏಕದಿನ ಸರಣಿಯ ಸತತ ಎರಡು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ(Virat Kohli) ಶೂನ್ಯ ಸುತ್ತಿನ ನಂತರ ಅವರ ಅಭಿಮಾನಿ ಬಳಗದಲ್ಲಿ ಕೊಹ್ಲಿಗೆ ಆಸೀಸ್‌ ಸರಣಿ ಅಂತ್ಯವೇ? ಎಂಬ ಪ್ರಶ್ನೆಗಳು ಹುಟ್ಟಿ ಹಾಕುವಂತೆ ಮಾಡಿದೆ.

ಹೌದು, ಅಡಿಲೇಡ್‌ ಪಂದ್ಯದಲ್ಲಿ ಔಟಾಗಿ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಂತೆ, ಕೊಹ್ಲಿ ಅಡಿಲೇಡ್ ಪ್ರೇಕ್ಷಕರಿಗೆ ಹೃದಯಪೂರ್ವಕವಾಗಿ ಕೈ ಬೀಸಿದರು. ಈ ವೇಳೆ ಐಕಾನಿಕ್ ಕ್ರೀಡಾಂಗಣದಲ್ಲಿ ಅವರ ಕೊನೆಯ ಪ್ರದರ್ಶನವಾಗಿರಬಹುದು ಎಂದು ತಿಳಿದಿದ್ದ ಪ್ರೇಕ್ಷಕರು ಕೊಹ್ಲಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಜತೆಗೆ ಕೊಹ್ಲಿ ಪ್ರದರ್ಶನವನ್ನು ವೀಕ್ಷಿಸಲು ಅಲ್ಲಿಗೆ ಬಂದಿದ್ದ ಭಾರತೀಯ ಬೆಂಬಲಿಗರ ಮುಖಭಾವಗಳು ದುಃಖದಿಂದ ತುಂಬಿದ್ದವು. ಕೊಹ್ಲಿ ನಿಧಾನವಾಗಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಸೀಸ್‌ ಸರಣಿ ಬಳಿಕ ಕೊಹ್ಲಿ ಏಕದಿನಕ್ಕೂ ನಿವೃತ್ತಿ ಹೇಳಲಿದ್ದಾರೆ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ.

ಆಸ್ಟ್ರೇಲಿಯಾದ ಮಾಧ್ಯಮಗಳು ಕೂಡ ಕೊಹ್ಲಿ ಅಭಿಮಾನಿಗಳತ್ತ ಕೈಸಿಬಿ ಡ್ರೆಸ್ಸಿಂಗ್ ಕೋಣೆಯತ್ತ ಸಾಗುತ್ತಿರುವ ವಿಡಿಯೊ ಪ್ರಸಾರ ಮಾಡುವ ಮೂಲಕ ಕೊಹ್ಲಿ ಶೀಘ್ರದಲ್ಲೇ ನಿವೃತ್ತಿ ಘೋಷಿಸುವ ಸುಳಿವು ಇದಾಗಿದೆ ಎಂದು ಸುದ್ದಿ ಮಾಡಿದೆ.



ಕೊಹ್ಲಿ ಅಡಿಲೇಡ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡಾಂಗಣದಲ್ಲಿ 18 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 975 ರನ್‌ ಗಳಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ 25 ರನ್‌ ಬಾರಿಸಿದ್ದರೆ ಅವರು ಅಡಿಲೇಡ್‌ನಲ್ಲಿ ಸಾವಿರ ರನ್‌ ಗಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳುತ್ತಿದ್ದರು. ಆದರೆ ಅವರು ಶೂನ್ಯಕ್ಕೆ ಔಟಾಗಿ ಈ ಅವಕಾಶ ಕಳೆದುಕೊಂಡರು.

ಇದನ್ನೂ ಓದಿ 'Give Up' ಭಾರೀ ಸಂಚಲನ ಮೂಡಿಸಿದ ವಿರಾಟ್‌ ಕೊಹ್ಲಿ ಪೋಸ್ಟ್‌; ಇದು ನಿವೃತ್ತಿಯ ಸುಳಿವೇ?

ಅಡಿಲೇಡ್‌ನಲ್ಲಿ ಕೊಹ್ಲಿ 5 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಏಕದಿನದಲ್ಲಿ 2, ಟೆಸ್ಟ್‌ನಲ್ಲಿ 3 ಸೆಂಚುರಿ ಸಿಡಿಸಿದ್ದಾರೆ. ಕೊಹ್ಲಿಗೆ ಇದು ಅಡಿಲೇಡ್‌ನಲ್ಲಿ ಕೊನೆಯ ಪಂದ್ಯ ಎಂದರೂ ತಪ್ಪಾಗಲಾರದು.