ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ್ ಟ್ಯಾಕ್ಸಿಗೆ ಇಂದು ಚಾಲನೆ; ಉಬರ್, ಓಲಾ ಜತೆ ಪೈಪೋಟಿ

ಓಲಾ, ಉಬರ್ ಮಾದರಿಯ ಸರ್ಕಾರಿ ಬೆಂಬಲಿತ ಭಾರತ್ ಟ್ಯಾಕ್ಸಿ ಬಿಡುಗಡೆಯಾಗಿದೆ. ಅಪ್ಲಿಕೇಶನ್ ಮಾದರಿಯ ಈ ಟ್ಯಾಕ್ಸಿಯನ್ನು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಬಿಡುಗಡೆ ಮಾಡಲಿದ್ದಾರೆ. ಸದ್ಯ ಇದು ನವದೆಹಲಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಶೀಘ್ರದಲ್ಲೇ ಇದು ರಾಜ್ಯಗಳ ನಗರಗಳನ್ನು ತಲುಪಲಿದೆ ಎಂದು ಆಲ್ ಇಂಡಿಯಾ ರೇಡಿಯೋ ತನ್ನ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ತಿಳಿಸಿದೆ.

ಉಬರ್, ಓಲಾ ಮಾದರಿಯ ಭಾರತ್ ಟ್ಯಾಕ್ಸಿ ಬಿಡುಗಡೆ

ಸಂಗ್ರಹ ಚಿತ್ರ -

ನವದೆಹಲಿ: ಉಬರ್ (Uber), ಓಲಾಗೆ (Ola) ಪೈಪೋಟಿ ನೀಡುವ ಭಾರತ್ ಟ್ಯಾಕ್ಸಿ (Bharat Taxi cab service) ಗುರುವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಸಂಚಾರ ನಡೆಸಲಿದೆ. ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವ ಭಾರತ್ ಟ್ಯಾಕ್ಸಿ, ಅಪ್ಲಿಕೇಶನ್ ಮಾದರಿಯೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಟ್ಯಾಕ್ಸಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಲಿದ್ದಾರೆ. ಸದ್ಯ ಇದು ನವದೆಹಲಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಶೀಘ್ರದಲ್ಲೇ ಇದು ರಾಜ್ಯಗಳ ನಗರಗಳನ್ನು ತಲುಪಲಿದೆ. ಭಾರತ್ ಟ್ಯಾಕ್ಸಿ ಬಗ್ಗೆ ಆಲ್ ಇಂಡಿಯಾ ರೇಡಿಯೋ (All India radio) ತನ್ನ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.

ಏನಿದು ಭಾರತ್ ಟ್ಯಾಕ್ಸಿ?

ಕೇಂದ್ರ ಸಹಕಾರ ಸಚಿವಾಲಯದ ಪ್ರಕಾರ, ಇದೊಂದು ಅಪ್ಲಿಕೇಶನ್ ಆಧಾರಿತ ಸಾರಿಗೆ ಸೇವೆಯಾಗಿದೆ. ಇದು ಸಹಕಾರಿ ಮಾದರಿಯನ್ನು ಆಧರಿಸಿದ್ದು, ಚಾಲಕರನ್ನು ಮಾಲೀಕರನ್ನಾಗಿ ಮಾಡುತ್ತದೆ. ಖಾಸಗಿ ವಾಹನ ಮಾಲೀಕರ ಶೋಷಣೆಯಿಂದ ಚಾಲಕರಿಗೆ ರಕ್ಷಣೆಯನ್ನು ಕೊಡುತ್ತದೆ. ಭಾರತ್ ಟ್ಯಾಕ್ಸಿಯನ್ನು ಭಾರತ ಸರ್ಕಾರ ನಡೆಸುತ್ತಿಲ್ಲ. ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನ ಸಹಯೋಗದೊಂದಿಗೆ ನಡೆಸಲಾಗುತ್ತದೆ. ಇದು ವಿಶ್ವದ ಅತ್ಯಂತ ಯಶಸ್ವಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಅಮೂಲ್‌ನಲ್ಲಿ ಈ ಹಿಂದೆ ಕೆಲಸ ಮಾಡಿದ ಅನೇಕ ಪ್ರಮುಖರು ಇದಕ್ಕೆ ಬೆಂಬಲಿಸಲಿದ್ದಾರೆ.

ಇಯು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತದ ಆರ್ಥಿಕತೆಯಲ್ಲಿ ಹೊಸ ಯುಗದ ಆರಂಭ



ಹೇಗೆ ಕಾರ್ಯನಿರ್ವಹಿಸುತ್ತದೆ?

ಭಾರತ್ ಟ್ಯಾಕ್ಸಿಯಲ್ಲಿ ಪ್ರತಿಯೊಬ್ಬ ಚಾಲಕ ಸಹಕಾರಿ ಸಂಸ್ಥೆಯ ಐದು ಷೇರುಗಳನ್ನು ಹೊಂದಿರುತ್ತಾನೆ. ಪ್ರತಿ ಬಾಡಿಗೆಗೆ ಯಾವುದೇ ರೀತಿಯಲ್ಲಿ ಕಮಿಷನ್ ಕಡಿತಗೊಳಿಸಲಾಗುವುದಿಲ್ಲ. ಬದಲಾಗಿ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಚಾಲಕರು ದಿನಕ್ಕೆ 30 ರೂ. ಶುಲ್ಕವನ್ನು ಪಾವತಿಸಬೇಕು. ಉಬರ್ ಮತ್ತು ಓಲಾದಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಕಮಿಷನ್, ಏಜೆನ್ಸಿಯ ಕೊರತೆಯಿಂದಾಗಿ ಅನೇಕ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದು, ಇದನ್ನು ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಭಾರತ್ ಟ್ಯಾಕ್ಸಿಯಲ್ಲಿ ಸವಾರರು ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಖಾಸಗಿ ಸ್ಪರ್ಧಿಗಳಿಗಿಂತ ಶೇ. 30ರಷ್ಟು ಇದು ಅಗ್ಗವಾಗಿರುತ್ತದೆ. ಭಾರತ್ ಟ್ಯಾಕ್ಸಿಯ ಶೂನ್ಯ ಕಮಿಷನ್ ಮಾದರಿಯು ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ. ಭಾರತ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ನೋಂದಾಯಿತ ಚಾಲಕರನ್ನು ಸೇರಿಸಲಾಗಿದೆ.



ಭಾರತ್ ಟ್ಯಾಕ್ಸಿ ಸೇವೆಯು ಸಹಾಯವಾಣಿ ಸೇರಿದಂತೆ ಹಲವು ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ. ದೆಹಲಿ ಪೊಲೀಸರ ಸಹಯೋಗದೊಂದಿಗೆ ಗ್ರಾಹಕರ ಕಾಳಜಿ ಮತ್ತು ದೂರುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು 35 ವಿಶೇಷ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಸೇವೆಯನ್ನು ಬಳಸುವ ಪ್ರಯಾಣಿಕರಿಗೆ ಸುರಕ್ಷತೆಯನ್ನು ಹೆಚ್ಚಿಸಲು ಎಲ್ಲಾ ಚಾಲಕರ ವಿವರಗಳನ್ನು ಪೊಲೀಸರು ಸಂಗ್ರಹಿಸಿಟ್ಟಿರುತ್ತಾರೆ. ಅವರ ಮೇಲೆ ಪೊಲೀಸರ ನಿಗಾ ಇಟ್ಟಿರುತ್ತಾರೆ.

ಯಾವುದೇ ದೇಶದಿಂದ ತೈಲ ಖರೀದಿಸುವ ಸ್ವಾತಂತ್ರ್ಯ ಭಾರತಕ್ಕಿದೆ; ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ಕೊಟ್ಟ ರಷ್ಯಾ?

2025ರ ಡಿಸೆಂಬರ್ ನಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಬಿಡುಗಡೆಯಾಗಿರುವ ಭಾರತ್ ಟ್ಯಾಕ್ಸಿ 4,000 ವಿಮಾನ ನಿಲ್ದಾಣ ಪ್ರಯಾಣಗಳು ಸೇರಿದಂತೆ ಪ್ರತಿದಿನ ಸರಾಸರಿ 5,500 ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿರುವ ದಾಖಲೆಯನ್ನು ಹೊಂದಿದೆ.