ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ

FIFA World Cup 2026 Round of 16 Schedule: ಶುಕ್ರವಾರ ತಡರಾತ್ರಿ ನಡೆದ 32ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಆಘಾತಕಾರಿ ಸೋನಿಂದ ಕೂದಲೆಳೆ ಅಂತರದಿಂದ ಪಾರಾಯಿತು. ಕೇಪ್ ವರ್ಡೆ ವಿರುದ್ಧ 3–2 ಅಂತರದ ರೋಚಕ ಜಯ ಸಾಧಿಸಿ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್‌ (ಅಂತಿಮ 16) ಹಂತಕ್ಕೆ ಪ್ರವೇಶಿಸಿದೆ.

ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ

FIFA World Cup 2026 Round of 16 Schedule -

Abhilash BC
Abhilash BC Jul 4, 2026 12:27 PM

ನ್ಯೂಜೆರ್ಸಿ, ಜು.4: 2026 ರ ಫಿಫಾ ವಿಶ್ವಕಪ್‌ನ ಎರಡನೇ ನಾಕೌಟ್ ಸುತ್ತು ಶನಿವಾರ ಆರಂಭವಾಗಲಿದ್ದು, ಇನ್ನೂ 16 ತಂಡಗಳು ಕಣದಲ್ಲಿವೆ. ಮುಂದಿನ ನಾಲ್ಕು ದಿನಗಳಲ್ಲಿ ನಡೆಯುವ ಎಂಟು ಪಂದ್ಯಗಳು ಯಾವ ತಂಡಗಳು ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತವೆ ಎಂಬುದನ್ನು ನಿರ್ಧರಿಸುತ್ತವೆ. ಮೂರು ಆತಿಥೇಯ ರಾಷ್ಟ್ರಗಳು 16 ರ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿವೆ.

ಭಾರತದ ಅಭಿಮಾನಿಗಳು ಪಂದ್ಯಾವಳಿಯನ್ನು ಯುನೈಟೆಡ್ 8 ಸ್ಪೋರ್ಟ್ಸ್ 1 ಮತ್ತು 2 (SD ಮತ್ತು HD) ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ZEE5 ನಲ್ಲಿ ಚಂದಾದಾರಿಕೆಯೊಂದಿಗೆ ನೋಡಬಹುದು.

16 ರ ಸುತ್ತಿನ ಪೂರ್ಣ ವೇಳಾಪಟ್ಟಿ

ಕೆನಡಾ vs ಮೊರಾಕೊ- ಜುಲೈ 4, ರಾತ್ರಿ 10:30

ಪರಾಗ್ವೆ vs ಫ್ರಾನ್ಸ್- ಜುಲೈ 5, ಬೆಳಿಗ್ಗೆ 2:30

ಬ್ರೆಜಿಲ್ vs ನಾರ್ವೆ- ಜುಲೈ 6, ಬೆಳಿಗ್ಗೆ 1:30

ಮೆಕ್ಸಿಕೊ vs ಇಂಗ್ಲೆಂಡ್- ಜುಲೈ 6, ಬೆಳಿಗ್ಗೆ 5:30

ಪೋರ್ಚುಗಲ್ vs ಸ್ಪೇನ್- ಜುಲೈ 7, ರಾತ್ರಿ 12:30

ಯುಎಸ್ಎ vs ಬೆಲ್ಜಿಯಂ- ಜುಲೈ 7, ಬೆಳಿಗ್ಗೆ 5:30

ಅರ್ಜೆಂಟೀನಾ vs ಈಜಿಪ್ಟ್- ಜುಲೈ 7, ರಾತ್ರಿ 9:30

ಸ್ವಿಟ್ಜರ್ಲೆಂಡ್ vs ಕೊಲಂಬಿಯಾ- ಜುಲೈ 8, ಬೆಳಿಗ್ಗೆ 1:30

ಸೋಲಿನ ಆಘಾತದಿಂದ ಪಾರಾದ ಅರ್ಜೆಂಟೀನಾ

ಶುಕ್ರವಾರ ತಡರಾತ್ರಿ ನಡೆದ 32ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಆಘಾತಕಾರಿ ಸೋನಿಂದ ಕೂದಲೆಳೆ ಅಂತರದಿಂದ ಪಾರಾಯಿತು. ಕೇಪ್ ವರ್ಡೆ ವಿರುದ್ಧ 3–2 ಅಂತರದ ರೋಚಕ ಜಯ ಸಾಧಿಸಿ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್‌ (ಅಂತಿಮ 16) ಹಂತಕ್ಕೆ ಪ್ರವೇಶಿಸಿದೆ. ಹೆಚ್ಚುವರಿ ವೇಳೆಯಲ್ಲಿ ಕೇಪ್ ವರ್ಡೆ ಆಟಗಾರ ಡೈನಿ ಬೋರ್ಗೆಸ್ ಅವರ ಸ್ವಂತ ಗೋಲಿನ ನೆರವಿನಿಂದ ಅರ್ಜೆಂಟೀನಾ ಸೋಲಿನಿಂದ ಪಾರಾಯಿತು. ಒಂದೊಮ್ಮೆ ಶೂಟೌಟ್‌ಗೆ ಪಂದ್ಯ ಸಾಗುತ್ತಿದ್ದರೆ ಕೇಪ್ ವರ್ಡೆ ಸುಲಭವಾಗಿ ಪಂದ್ಯವನ್ನು ಗೆಲ್ಲುವ ಸಾಧ್ಯತೆಯಿತ್ತು.

ಇಂದಿನ ಭಾರತ-ಇಂಗ್ಲೆಂಡ್‌ 2ನೇ ಟಿ20ಗೂ ಮಳೆ ಭೀತಿ ಇದೆಯಾ?

ಪಂದ್ಯದ 29ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಅವರ ಗೋಲಿನಿಂದ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, 59ನೇ ನಿಮಿಷದಲ್ಲಿ ಡೆರಾಯ್ ಡುವಾರ್ಟೆ ನಿಖರವಾಗಿ ಚೆಂಡನ್ನು ಗೋಲು ಪೆಟ್ಟಿಗೆಗೆ ಹೊಡೆದು ಕೇಪ್ ವರ್ಡೆಗೆ ಸಮಬಲ ತಂದುಕೊಟ್ಟರು. ಈ ಗೋಲು ಅರ್ಜೆಂಟೀನಾ ತಂಡವನ್ನು ಒತ್ತಡಕ್ಕೆ ತಳ್ಳಿತು. ನಿಯಮಿತ ಅವಧಿಯಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಲು ವಿಫಲವಾದ ಅರ್ಜೆಂಟೀನಾ, ಹೆಚ್ಚುವರಿ ವೇಳೆಯ ಎರಡನೇ ನಿಮಿಷದಲ್ಲೇ ಮತ್ತೆ ಮುನ್ನಡೆ ಸಾಧಿಸಿತು. ಲಿಸಾಂಡ್ರೊ ಮಾರ್ಟಿನೆಜ್ ಮೇಲಿನ ಬಲ ಮೂಲೆಗೆ ಭರ್ಜರಿ ಶಾಟ್ ಬಾರಿಸಿ ತಂಡಕ್ಕೆ 2–1ರ ಮುನ್ನಡೆ ತಂದುಕೊಟ್ಟರು.ಆದರೆ, ಕೇಪ್ ವರ್ಡೆ ಮತ್ತೆ ಅಚ್ಚರಿ ಮೂಡಿಸಿತು. ಹೆಚ್ಚುವರಿ ವೇಳೆಯ 103ನೇ ನಿಮಿಷದಲ್ಲಿ ಸಿಡ್ನಿ ಲೋಪ್ಸ್ ಕ್ಯಾಬ್ರಾಲ್ ದೂರದಿಂದ ಬಾರಿಸಿದ ಅದ್ಭುತ ಗೋಲು ಪಂದ್ಯವನ್ನು ಮತ್ತೆ 2–2ರಿಂದ ಸಮಬಲಗೊಳಿಸಿತು.

ಟೂರ್ನಿಯ ಅತ್ಯುತ್ತಮ ಗೋಲುಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಈ ಗೋಲಿನಿಂದ ಮಿಯಾಮಿ ಕ್ರೀಡಾಂಗಣದ ವಾತಾವರಣವೇ ಬದಲಾಗಿತ್ತು. ಪಂದ್ಯ ಅಂತ್ಯದತ್ತ ಸಾಗುತ್ತಿದ್ದಂತೆ ಅರ್ಜೆಂಟೀನಾ ತಂಡದ ಮೇಲಿನ ಒತ್ತಡ ಹೆಚ್ಚಾಗತೊಡಗಿತು. ಆದರೆ, ಹೆಚ್ಚುವರಿ ವೇಳೆಯ 111ನೇ ನಿಮಿಷದಲ್ಲಿ ತಂಡದ ಡೈನಿ ಬೋರ್ಗೆಸ್‌, ಎಡವಟ್ಟು ಮಾಡಿಕೊಂಡರು. ಅವರ ತಲೆಗೆ ತಾಗಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆ ಸೇರಿತು. ಇದರೊಂದಿಗೆ ಅರ್ಜೆಂಟೀನಾ ಜಯ ಖಾತ್ರಿಯಾಯಿತು.