92 ವರ್ಷಗಳ ಬಳಿಕ ಫಿಫಾ ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತೆರೆದ ಈಜಿಪ್ಟ್
FIFA World Cup 2026: ಸೌದಿ ಅರೇಬಿಯಾ ವಿರುದ್ಧ ಸ್ಪೇನ್ 4-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 'ಎಚ್' ಗುಂಪಿನ ಈ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸ್ಪೇನ್ ನಿರಾಯಾಸ ಗೆಲುವು ದಾಖಲಿಸಿತು. ಸ್ಪೇನ್ ಪರ ಲ್ಯಾಮಿನೆ ಯಮಲ್ (10ನೇ ನಿಮಿಷ), ಮೈಕೆಲ್ ಒಯರ್ಜಾಬಲ್ (21ನೇ ಹಾಗೂ 24ನೇ) ಗೋಲು ಗಳಿಸಿದರೆ ಎದುರಾಳಿ ತಂಡದ ಹಸನ್ ಅಲ್-ತಂಬಕ್ತಿ (49) ಉಡುಗೊರೆ ಗೋಲು ನೀಡಿದರು.
Mohamed Salah -
ಮಿಯಾಮಿ, ಜೂ.22: ತಲೆಮಾರುಗಳಿಂದ, ಈಜಿಪ್ಟ್ ಕಂಡಿದ್ದ ಕನಸು ಕೊನೆಗೂ ನನಸಾಗಿದೆ. 1934 ರಲ್ಲಿ ಫಿಫಾ ವಿಶ್ವಕಪ್(FIFA World Cup 2026)ಗೆ ಪದಾರ್ಪಣೆ ಮಾಡಿದ ತೊಂಬತ್ತೆರಡು ವರ್ಷಗಳ ನಂತರ, ಅಂತಿಮವಾಗಿ ಪಂದ್ಯಾವಳಿಯಲ್ಲಿ ತಮ್ಮ ಮೊದಲ ವಿಜಯವನ್ನು ಆಚರಿಸಿದ್ದಾರೆ. ವ್ಯಾಂಕೋವರ್ನಲ್ಲಿ ನಡೆದ 'ಜಿ' ಗುಂಪಿನ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ತಂಡ ಗ್ರೂಪ್ G ಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಮಾತ್ರವಲ್ಲದೆ ನಾಕೌಟ್ ಹಂತ್ಕೇರುವ ಸನಿಹದಲ್ಲಿದೆ.
ಮೊಹಮ್ಮದ್ ಸಲಾಹ್ ಈಜಿಪ್ಟ್ ತಂಡವನ್ನು ನ್ಯೂಜಿಲೆಂಡ್ ವಿರುದ್ಧ 3-1 ಅಂತರದ ಐತಿಹಾಸಿಕ ಗೆಲುವು ಸಾಧಿಸಲು ಪ್ರೇರೇಪಿಸಿದರು. ಫರೋಸ್ ತಂಡದ ಪರ ಮೊದಲ ಗೋಲು ಬಾರಿಸಿದರು. ಆ ಬಳಿಕ ಮೊಸ್ತಫಾ ಜಿಕೊ, ಸಲಾಹ್ ಗೋಲು ಬಾರಿಸಿದರು. ದಶಕಗಳ ನಿರಾಶೆ, ಬಹುತೇಕ ತಪ್ಪುಗಳು ಮತ್ತು ಈಡೇರದ ಭರವಸೆಯ ಮೂಲಕ, ಕನಸು ಉಳಿದುಕೊಂಡಿತು. ಸ್ಪರ್ಧೆಯ ಆರಂಭದಲ್ಲಿ ಹಿಂದುಳಿದ ಈಜಿಪ್ಟ್, ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಈಜಿಪ್ಟ್ ತಂಡವು ಬೆಲ್ಜಿಯಂ ವಿರುದ್ಧದ ಮೊದಲ ಪಂದ್ಯವನ್ನು 1-1 ಡ್ರಾ ಸಾಧಿಸಿತ್ತು. ತಮ್ಮ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ನಂತರ ಭಾರತ ಮಹಿಳಾ ತಂಡದ T20 ವಿಶ್ವಕಪ್ ಸೆಮಿಫೈನಲ್ ಅರ್ಹತಾ ಲೆಕ್ಕಾಚಾರ ಹೇಗಿದೆ?
ಸೌದಿ ಅರೇಬಿಯಾ ವಿರುದ್ಧ ಸ್ಪೇನ್ 4-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 'ಎಚ್' ಗುಂಪಿನ ಈ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸ್ಪೇನ್ ನಿರಾಯಾಸ ಗೆಲುವು ದಾಖಲಿಸಿತು. ಸ್ಪೇನ್ ಪರ ಲ್ಯಾಮಿನೆ ಯಮಲ್ (10ನೇ ನಿಮಿಷ), ಮೈಕೆಲ್ ಒಯರ್ಜಾಬಲ್ (21ನೇ ಹಾಗೂ 24ನೇ) ಗೋಲು ಗಳಿಸಿದರೆ ಎದುರಾಳಿ ತಂಡದ ಹಸನ್ ಅಲ್-ತಂಬಕ್ತಿ (49) ಉಡುಗೊರೆ ಗೋಲು ನೀಡಿದರು.
ಮತ್ತೊಂದೆಡೆ ಬೆಲ್ಜಿಯಂ ಹಾಗೂ ಇರಾನ್ ಮತ್ತು ಉರುಗ್ವೆ ಹಾಗೂ ಕೇಪ್ ವೆರ್ದೆ ನಡುವಣ ಪಂದ್ಯಗಳು ಡ್ರಾ ಫಲಿತಾಂಶವನ್ನು ಕಂಡಿವೆ. ಉರುಗ್ವೆ ಹಾಗೂ ಕೇಪ್ ವೆರ್ದೆ ತಂಡಗಳು 2-2ರ ಗೋಲುಗಳ ಅಂತರದ ಸಮಬಲ ಸಾಧಿಸಿದವು. ಕೇಪ್ ವೆರ್ದೆ ಪರ ಕೆವಿನ್ ಪಿನಾ (21ನೇ ನಿಮಿಷ), ಹೆಲಿಯೊ ವರೆಲಾ (61ನೇ ನಿಮಿಷ) ಮತ್ತು ಉರುಗ್ವೆ ಪರ ಮ್ಯಾಕ್ಸಿಮಿಲಿಯಾನೊ ಅರೌಜೊ (44) ಹಾಗೂ ಆಗಸ್ಟಿನ್ ಕ್ಯಾನೋಬಿಯೊ (45+6) ಗೋಲು ಗಳಿಸಿದರು.