ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಇಂಗ್ಲೆಂಡ್‌

FIFA World Cup semis: ಹ್ಯಾರಿ ಕೇನ್ 2018ರ ಫಿಫಾ ಆವೃತ್ತಿಯಲ್ಲೂ 6 ಗೋಲು ಗಳಿಸಿದ್ದರು. ಈ ಬಾರಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಅವರು 6 ಗೋಲು ಗಳಿಸುವ ಮೂಲಕ ಫಿಫಾ ವಿಶ್ವಕಪ್‌ನ ಎರಡು ಆವೃತ್ತಿಗಳಲ್ಲಿ ಕನಿಷ್ಠ 6 ಗೋಲು ದಾಖಲಿಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಫಿಫಾ ವಿಶ್ವಕಪ್; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಇಂಗ್ಲೆಂಡ್‌

Messi, Kane, Mbappe and Lamine Yamal -

Abhilash BC
Abhilash BC Jul 12, 2026 5:56 PM

ಕಾನ್ಸಸ್‌ ಸಿಟಿ, ಜು. 12: ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕೆ ವೇದಿಗೆ ಸಿದ್ಧಗೊಂಡಿದೆ. ಫ್ರಾನ್ಸ್‌, ಇಂಗ್ಲೆಂಡ್‌, ಅರ್ಜೆಂಟೀನಾ ಮತ್ತು ಸ್ಪೇನ್‌ ತಂಡಗಳು ಸೆಣಸಾಟ ನಡೆಸಲಿವೆ. ಭಾರತೀಯ ಕಾಲಮಾನ ಭಾನುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸ್ವಿಟ್ಜರ್ಲೆಂಡ್ ತಂಡವನ್ನು 3-1 ಗೋಲುಗಳಿಂದ ಮಣಿಸಿದರೆ, ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಾರ್ವೆ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಕ್ವಾರ್ಟರ್‌ ಫೈನಲ್‌ಗೂ ಮುನ್ನ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೋಲು ಬಾರಿಸಿದ್ದ ಲಿಯೋನಲ್‌ ಮೆಸ್ಸಿ ಈ ಪಂದ್ಯದಲ್ಲಿ ಗೋಲು ದಾಖಲಿಸಲು ವಿಫಲರಾದರು. ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರು ಗೋಲು ಗಳಿಸುವ ಆರಂಭಿಕ ಮುನ್ನಡೆ ಒದಗಿಸಿದರು.

ದ್ವಿತಿಯಾರ್ಧದ 67ನೇ ನಿಮಿಷದಲ್ಲಿ ಡ್ಯಾನ್ ಎನ್‌ಡೋಯ್ ಗೋಲು ದಾಖಲಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಇದಾದ ಬಳಿಕ ಉಭಯ ತಂಡಗಳ ರಕ್ಷಣಾತ್ಮಕ ಆಟದ ಮುಂದೆ ಗೋಲು ದಾಖಲಾಗಿಲ್ಲ. 90 ನಿಮಿಷಗಳ ಆಟ ಪೂರ್ಣಗೊಂಡಾಗ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿ, ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಸಮಯ ನೀಡಲಾಯಿತು.

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಕೋಚ್‌! ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಟೇಲ್‌ ಸೋಲ್ಬಾಕೆನ್

ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ ಪರ 112ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಜ್ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಅಂತಿಮ ಹಂತದಲ್ಲಿ ಲೌಟಾರೊ ಮಾರ್ಟಿನೆಜ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 3–1ರ ಅಂತರದಲ್ಲಿ ಗೆಲುವು ಸಾಧಿಸಲು ನೆರವಾದರು. ಎರಡು ಬಾರಿ ಹಳದಿ ಕಾರ್ಡ್ ಪಡೆದ ಸ್ವಿಟ್ಜರ್ಲೆಂಡ್‌ ತಂಡದ ಬ್ರೀಲ್ ಎಂಬೊಲೊ ಮೈದಾನದಿಂದ ಹೊರನಡೆಯಬೇಕಾಯಿತು. ಇದು ತಂಡಕ್ಕೆ ಭಾರೀ ಹಿನ್ನಡೆಯಾಯಿತು.



ದಿನದ ಮತ್ತೊಂದು ಪಂದ್ಯದಲ್ಲಿ ನಾರ್ವೆ ವಿರುದ್ಧ ಇಂಗ್ಲೆಂಡ್ ಆಟಗಾರ ಬೆಲ್ಲಿಂಗ್‌ಹ್ಯಾಮ್ ಅವರು 45 ಮತ್ತು 93ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಆ ಮೂಲಕ 2026ರ ಫಿಫಾ ವಿಶ್ವಕಪ್ ಆವೃತ್ತಿಯಲ್ಲಿ ಅವರ ವೈಯಕ್ತಿಕ ಗೋಲುಗಳ ಸಂಖ್ಯೆ ಆರಕ್ಕೆ ಏರಿಕೆಯಾಯಿತು. ಬೆಲ್ಲಿಂಗ್‌ಹ್ಯಾಮ್ ಹೊರತುಪಡಿಸಿ ತಂಡದ ನಾಯಕ ಹ್ಯಾರಿ ಕೇನ್ ಕೂಡ 6 ಗೋಲುಗಳನ್ನು ಕಲೆಹಾಕಿದ್ದಾರೆ.

ಹ್ಯಾರಿ ಕೇನ್ 2018ರ ಫಿಫಾ ಆವೃತ್ತಿಯಲ್ಲೂ 6 ಗೋಲು ಗಳಿಸಿದ್ದರು. ಈ ಬಾರಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಅವರು 6 ಗೋಲು ಗಳಿಸುವ ಮೂಲಕ ಫಿಫಾ ವಿಶ್ವಕಪ್‌ನ ಎರಡು ಆವೃತ್ತಿಗಳಲ್ಲಿ ಕನಿಷ್ಠ 6 ಗೋಲು ದಾಖಲಿಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.