ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಪಾಯಕಾರಿ ಪಿಚ್‌; ಪಂದ್ಯವೇ ರದ್ದುಗೊಳಿಸಿದ ಅಂಪಾಯರ್‌

dangerous pitch: ಘಟನೆಯ ನಂತರ ಅಂಪೈರ್‌ಗಳಾದ ಲೆಸ್ಲಿ ರೀಫರ್ ಮತ್ತು ಜಾಹಿದ್ ಬಸ್ಸರತ್ ಅವರು ಪಂದ್ಯದ ರೆಫರಿ ಜೋನಾಥನ್ ಬ್ಲೇಡ್ಸ್ ಮತ್ತು ಮೈದಾನ ಸಿಬ್ಬಂದಿಯನ್ನು ಸಂಪರ್ಕಿಸಿ ದೀರ್ಘ ಚರ್ಚೆಯ ನಂತರ, ಪಂದ್ಯದ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ನಾಯಕರಾದ ಜೋಶುವಾ ಡಾ ಸಿಲ್ವಾ ಮತ್ತು ಜಸ್ಟಿನ್ ಗ್ರೀವ್ಸ್ ಅವರಿಗೆ ತಿಳಿಸಿದರು.

ಅಪಾಯಕಾರಿ ಪಿಚ್‌; ಪಂದ್ಯವೇ ರದ್ದುಗೊಳಿಸಿದ ಅಂಪಾಯರ್‌

dangerous pitch -

Abhilash BC
Abhilash BC Apr 22, 2026 11:57 AM

ಆಂಟಿಗುವಾ, ಎ.22: ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೆಸ್ಟ್ ಇಂಡೀಸ್ ಚಾಂಪಿಯನ್‌ಶಿಪ್‌ ಟೂರ್ನಿಯ ಟ್ರಿನಿಡಾಡ್-ಟೊಬಾಗೊ vs ಲೀವರ್ಡ್ ಐಸ್‌ಲ್ಯಾಂಡ್‌ ನಡುವಿನ ಪಂದ್ಯವನ್ನು ಅಪಾಯಕಾರಿ ಪಿಚ್‌(dangerous pitch)ನಿಂದಾಗಿ ರದ್ದುಗೊಳಿಸಲಾಗಿದೆ. ಬೆಳಗಿನ ಮೂರನೇ ದಿನದ ಆಟದ ಸಮಯದಲ್ಲಿ ಜೇಡನ್ ಸೀಲ್ಸ್ ಅವರ ಎಸೆತ ಬ್ಯಾಟ್ಸ್‌ಮನ್ ಜೆರೆಮಿಯಾ ಲೂಯಿಸ್(Jeremiah Louis) ಅವರ ಹೆಲ್ಮೆಟ್‌ಗೆ ಬಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಗುಡ್‌ ಲೆಂತ್‌ನಲ್ಲಿ ಎಸೆದ ಚೆಂಡು ಏಕಾಏಕಿ ಬೌನ್ಸರ್‌ ಆಗುವ ಮೂಲಕ‌ ಬ್ಯಾಟರ್ ಲೂಯಿಸ್ ಹೆಲ್ಮೆಟ್‌ಗೆ ಬಡಿಯಿತು. ಕುಸಿದು ಬಿದ್ದ ಲೂಯಿಸ್ ಕೋಪದಿಂದ ಪಿಚ್‌ಗೆ ಕೈಗಳಿಂದ ಬಡಿದು ಸ್ಕ್ವೇರ್ ಲೆಗ್ ಕಡೆಗೆ ಹೆಲ್ಮೆಟ್ ಕಿಕ್‌ ಮಾಡಿದರು. ಘಟನೆಯ ನಂತರ ಲೂಯಿಸ್‌ಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ಅವರನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಿಚ್‌ ವರ್ತನೆ ಕಂಡು ಬೌಲರ್‌ ಕೂಡ ಒಂದು ಕ್ಷಣ ದಂಗಾದರು.

ಘಟನೆಯ ನಂತರ ಅಂಪೈರ್‌ಗಳಾದ ಲೆಸ್ಲಿ ರೀಫರ್ ಮತ್ತು ಜಾಹಿದ್ ಬಸ್ಸರತ್ ಅವರು ಪಂದ್ಯದ ರೆಫರಿ ಜೋನಾಥನ್ ಬ್ಲೇಡ್ಸ್ ಮತ್ತು ಮೈದಾನ ಸಿಬ್ಬಂದಿಯನ್ನು ಸಂಪರ್ಕಿಸಿ ದೀರ್ಘ ಚರ್ಚೆಯ ನಂತರ, ಪಂದ್ಯದ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ನಾಯಕರಾದ ಜೋಶುವಾ ಡಾ ಸಿಲ್ವಾ ಮತ್ತು ಜಸ್ಟಿನ್ ಗ್ರೀವ್ಸ್ ಅವರಿಗೆ ತಿಳಿಸಿದರು.



ಲೀವರ್ಡ್ಸ್ ತಂಡದ ತರಬೇತುದಾರ ವೈಲ್ಡನ್ ಕಾರ್ನ್‌ವಾಲ್, ಜೆರೆಮಿಯಾ ಲೂಯಿಸ್‌ಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ತಿಳಿಸಿದರು. ಬ್ಯಾಟರ್‌ಗೆ ಪೆಟ್ಟು ಬಿದ್ದ ರೀತಿ ನೋಡುವಾಗ ಭಯವಾಗಿತ್ತು. ಸದ್ಯ ಅವರು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ. ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತು ಯಾವುದೇ ಗಂಭೀರ ಹಾನಿಯಾಗಿಲ್ಲ" ಎಂದು ತಿಳಿಸಿದರು.

MS Dhoni: ಐಪಿಎಲ್‌ ಆಡಲು ಧೋನಿ ರೆಡಿ; ಹೊಸ ವಿಡಿಯೊ ಹಂಚಿಕೊಂಡ ಫ್ರಾಂಚೈಸಿ

'ಸರಿಯಾಗಿ ಸಿದ್ಧವಾಗಿಲ್ಲ ಎಂದು ಭಾವಿಸಿದ ಪಿಚ್‌ನಲ್ಲಿ ನಡೆದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ಸುಮಾರು ಏಳು ಅವಧಿಗಳನ್ನು ತೆಗೆದುಕೊಂಡರು. ನನ್ನ ಪ್ರಕಾರ, ನಾಲ್ಕು ದಿನಗಳ ವಿಕೆಟ್‌ನ ತಯಾರಿಯನ್ನು ನೀಡಲಾಗಿಲ್ಲ, ಆದ್ದರಿಂದ ನಾವು ಅನೇಕ ಆಟಗಾರರು ಹಾನಿಗೊಳಗಾಗುವುದನ್ನು ನೋಡಿದ್ದೇವೆ ಮೂರು ದಿನಗಳಲ್ಲಿ ಪಿಚ್ ಕೆಟ್ಟದಾಗಿ ವರ್ತಿಸುತ್ತಿದೆ" ಎಂದು ಕಾರ್ನ್‌ವಾಲ್ ಹೇಳಿದರು. ಘಟನೆ ನಡೆಯುವವರೆಗೆ ಪಂದ್ಯದ 147 ಓವರ್‌ಗಳಲ್ಲಿ ಒಟ್ಟು 27 ವಿಕೆಟ್‌ಗಳು ಪತನಗೊಂಡಿದ್ದವು.