ENG vs IND: ಟೆಸ್ಟ್ನಲ್ಲಿ ಮೊದಲ ಬಾರಿಗೆ ಪಂದ್ಯದಲ್ಲಿ 5 ಶತಕ ದಾಖಲಿಸಿದ ಭಾರತ
ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದರಲ್ಲಿ 5 ಶತಕ ಬಾರಿಸಿದ್ದು 1955ರಲ್ಲಿ. ಆಸ್ಟ್ರೇಲಿಯಾ ತಂಡದ ಆಟಗಾರರು. ಆ ಬಳಿಕ 2001ರಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ, 2007ರಲ್ಲಿ ವಿಂಡೀಸ್ ವಿರುದ್ಧ ಇಂಗ್ಲೆಂಡ್, 2013ರಲ್ಲಿ ಬಾಂಗ್ಲಾ ವಿರುದ್ಧ ಲಂಕಾ, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪಂದ್ಯವೊಂದರಲ್ಲಿ 5 ಶತಕ ದಾಖಲಿಸಿದ್ದವು.


ಲೀಡ್ಸ್: ಇಂಗ್ಲೆಂಡ್(ENG vs IND) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ(Team India) ತಂಡದ ಆಟಗಾರರು 5 ಶತಕ ಬಾರಿಸುವ ಮೂಲಕ ಜಂಟಿ ವಿಶ್ವ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಮೂವರು, 2ನೇ ಇನ್ನಿಂಗ್ಸ್ನಲ್ಲಿ ಇಬ್ಬರು ಶತಕ ಸಿಡಿಸಿದರು. ಮೊದಲ ಇನ್ನಿಂಗ್ಸಲ್ಲಿ ಜೈಸ್ವಾಲ್ 101, ಗಿಲ್ 147, ಪಂತ್ 134 ರನ್ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ ರಾಹುಲ್ 137, ಪಂತ್ 118 ರನ್ ದಾಖಲಿಸಿದರು.
ಇದಕ್ಕೂ ಮುನ್ನ ಭಾರತ 4 ಬಾರಿ ಪಂದ್ಯದಲ್ಲಿ 4 ಶತಕಗಳನ್ನು ದಾಖಲಿಸಿತ್ತು. 2007ರಲ್ಲಿ ಬಾಂಗ್ಲಾ ವಿರುದ್ಧ ಮೀರ್ಪುರ್ನಲ್ಲಿ, 2009ರಲ್ಲಿ ಶ್ರೀಲಂಕಾ ವಿರುದ್ಧ ಅಹಮದಾಬಾದ್ನಲ್ಲಿ, 2010ರಲ್ಲಿ ದ.ಆಫ್ರಿಕಾ ವಿರುದ್ಧ ಕೋಲ್ಕತಾದಲ್ಲಿ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ ನಾಗ್ಪುರದಲ್ಲಿ ಭಾರತ 4 ಶತಕಗಳನ್ನು ದಾಖಲಿಸಿತ್ತು.
ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದರಲ್ಲಿ 5 ಶತಕ ಬಾರಿಸಿದ್ದು 1955ರಲ್ಲಿ. ಆಸ್ಟ್ರೇಲಿಯಾ ತಂಡದ ಆಟಗಾರರು. ಆ ಬಳಿಕ 2001ರಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ, 2007ರಲ್ಲಿ ವಿಂಡೀಸ್ ವಿರುದ್ಧ ಇಂಗ್ಲೆಂಡ್, 2013ರಲ್ಲಿ ಬಾಂಗ್ಲಾ ವಿರುದ್ಧ ಲಂಕಾ, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪಂದ್ಯವೊಂದರಲ್ಲಿ 5 ಶತಕ ದಾಖಲಿಸಿದ್ದವು.
2ನೇ ಇನ್ನಿಂಗ್ಸ್ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿರುವ ಭಾರತ, 364 ರನ್ ಕಲೆಹಾಕಿ ಆತಿಥೇಯ ತಂಡದ ಗೆಲುವಿಗೆ 371 ರನ್ ಗುರಿ ನೀಡಿತು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 350 ರನ್ ಬಾರಿಸಬೇಕಿದೆ. ಇಂದು(ಮಂಗಳವಾರ) ಅಂತಿಮ ದಿನವಾಗಿದ್ದು, ಭಾರತೀಯ ಬೌಲರ್ಗಳು 10 ವಿಕೆಟ್ ಉರುಳಿಸಿದರೆ ಗೆಲುವು ಸಾಧಿಸಬಹುದು.
ಇದನ್ನೂ ಓದಿ IND vs ENG: ಕೆಎಲ್ ರಾಹುಲ್, ರಿಷಭ್ ಪಂತ್ ಶತಕ, ಇಂಗ್ಲೆಂಡ್ಗೆ 371 ರನ್ ಗುರಿ ನೀಡಿದ ಭಾರತ!
ನಾಲ್ಕನೇ ದಿನದಾಟದಲ್ಲಿ ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ರ ಶತಕಗಳು ಭಾರತಕ್ಕೆ ನೆರವಾದರು. ಈ ಜೋಡಿ 4ನೇ ವಿಕೆಟ್ಗೆ 195 ರನ್ ಸೇರಿಸಿತು. ಪಂತ್ 118 ರನ್ ಗಳಿಸಿ ಔಟಾದರೆ, ರಾಹುಲ್ 137 ರನ್ ಕಲೆಹಾಕಿದರು. ಇವರಿಬ್ಬರ ವಿಕೆಟ್ ಪತನಗೊಂಡ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. 333ಕ್ಕೆ 4 ವಿಕೆಟ್ನಿಂದ 364 ರನ್ಗೆ ಅಂದರೆ 31 ರನ್ಗೆ ಕೊನೆ 6 ವಿಕೆಟ್ ಕಳೆದುಕೊಂಡಿತು. ಕರುಣ್ ನಾಯರ್ 20, ಜಡೇಜಾ ಅಜೇಯ 25 ರನ್ ಗಳಿಸಿದರು.