ಎಂಬಾಪೆ ದಾಖಲೆಯ ಗೋಲು: ಸ್ವೀಡನ್ ವಿರುದ್ಧ ಫ್ರಾನ್ಸ್‌ಗೆ ಗೆಲುವು
FIFA World Cup 2026: ಈ ವಿಶ್ವಕಪ್‌ನಲ್ಲಿ ಎಂಬಾಪೆ ಇಲ್ಲಿಯವರೆಗೂ 6 ಗೋಲುಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರಿಗೆ ನೀಡಲಾಗುವ 'ಗೋಲ್ಡನ್ ಬೂಟ್' ರೇಸ್‌ನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ.
Kylian Mbappe -
ಫಿಲಡೆಲ್ಫಿಯಾ , ಜು.1: ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕೈಲಿಯನ್ ಎಂಬಾಪೆ ವಿಶ್ವಕಪ್‌ನ ಅತ್ಯಧಿಕ ಗೋಲು ಗಳಿಸಿದ ದಾಖಲೆ ನಿರ್ಮಿಸಿದರು. ಬುಧವಾರ ಬೆಳಗ್ಗೆ ನಡೆದ ಫಿಫಾ ವಿಶ್ವಕಪ್‌ನ 32ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ತಂಡ ಸ್ವೀಡನ್ ತಂಡವನ್ನು 3-0 ಅಂತರದಿಂದ ಮಣಿಸಿ 16ರ ಸುತ್ತಿಗೆ ಲಗ್ಗೆಯಿಟ್ಟಿತು. ಮುಂದಿನ ಪಂದ್ಯದಲ್ಲಿ ಪರಾಗ್ವೆ ವಿರುದ್ಧ ಸೆಣಸಲಿದೆ. ಎಂಬಾಪೆ ಅವಳಿ ಗೋಲು ಬಾರಿಸಿ ಮತ್ತೊಮ್ಮೆ ತಂಡದ ಗೆಲುವಿನ ರೂವಾರಿ ಎನಿಸಿದರು.
ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಫ್ರಾನ್ಸ್ ತಂಡಕ್ಕೆ ಕಿಲಿಯನ್ ಎಂಬಾಪೆಯ ಅದ್ಭುತ ಪ್ರದರ್ಶನ ಮೆರುಗು ನೀಡಿತು. ಪಂದ್ಯದ 45ನೇ ನಿಮಿಷದಲ್ಲಿ ಅದ್ಭುತ ಕ್ರಾಸ್ಓವರ್ ಸ್ಟೆಪ್ ಮೂಲಕ ಎಂಬಾಪೆ ಫ್ರಾನ್ಸ್‌ಗೆ ಮೊದಲ ಮುನ್ನಡೆ ತಂದುಕೊಟ್ಟರು. ಬ್ರಾಡ್ಲಿ ಬಾರ್ಕೋಲಾ 53ನೇ ನಿಮಿಷದಲ್ಲಿ ಫ್ರಾನ್ಸ್ ಪರ ಎರಡನೇ ಗೋಲು ದಾಖಲಿಸಿ ಮುನ್ನಡೆಯನ್ನು ಹಿಗ್ಗಿಸಿದರು.
ಎರಡು ಗೋಲುಗಳನ್ನು ಹೊಡೆಯುವ ಮೂಲಕ ಹೊಸ ದಾಖಲೆ ಬರೆದರು. ಬ್ರೆಜಿಲ್‌ನ ಮಾಜಿ ತಾರೆಗಳಾದ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಅವರ ತಲಾ 8 ಗೋಲುಗಳ ದಾಖಲೆಯನ್ನು ಮುರಿದರು. ಎಂಬಾಪೆ ವಿಶ್ವಕಪ್‌ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿಕೊಂಡರು. ಇದೇ ವೇಳೆ, ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ದಾಖಲೆಯ 10 ಗೋಲುಗಳನ್ನು ಪೂರೈಸಿದ ಜಗತ್ತಿನ ಮೊದಲ ಆಟಗಾರ ಎನಿಸಿಕೊಂಡರು.
ಫಿಫಾ ನಾಕೌಟ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿಕ್ಕ ದೇಶ ಕೇಪ್ ವರ್ಡೆ
ಈ ವಿಶ್ವಕಪ್‌ನಲ್ಲಿ ಎಂಬಾಪೆ ಇಲ್ಲಿಯವರೆಗೂ 6 ಗೋಲುಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರಿಗೆ ನೀಡಲಾಗುವ 'ಗೋಲ್ಡನ್ ಬೂಟ್' ರೇಸ್‌ನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ.
40 ವರ್ಷಗಳಲ್ಲಿ ಮೊದಲ ನಾಕೌಟ್ ಗೆಲುವು ಸಾಧಿಸಿದ ಮೆಕ್ಸಿಕೊ
ಪ್ರತಿಕೂಲ ಹವಾಮಾನದಿಂದಾಗಿ ಒಂದು ಗಂಟೆ ವಿಳಂಬವಾದ ಪಂದ್ಯದಲ್ಲಿ ಈಕ್ವೆಡಾರ್ ತಂಡವನ್ನು 2-0 ಅಂತರದಿಂದ ಸೋಲಿಸಿದ ಮೆಕ್ಸಿಕೊ ತಂಡ 1986 ರ ನಂತರ ತಮ್ಮ ಮೊದಲ FIFA ವಿಶ್ವಕಪ್ ನಾಕೌಟ್ ಜಯವನ್ನು ಸಾಧಿಸಿ 16ನೇ ಸುತ್ತಿಗೆ ಪ್ರವೇಶಿಸಿತು. 16ನೇ ಸುತ್ತಿನಲ್ಲಿ ಇಂಗ್ಲೆಂಡ್ ಅಥವಾ ಡಿಆರ್ ಕಾಂಗೋ ತಂಡವನ್ನು ಎದುರಿಸಲಿದೆ.