ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೈದಾನದಿಂದಲೇ ಮಹಿಕಾ ಶರ್ಮಗೆ ಫ್ಲೈಯಿಂಗ್ ಕಿಸ್ ನೀಡಿದ ಪಾಂಡ್ಯ; ವಿಡಿಯೊ ವೈರಲ್‌

Hardik Pandya: ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ "ತುಂಬಾ ಸಂತೋಷವಾಗಿದೆ. ನಾನು ಚೆಂಡನ್ನು ತುಂಬಾ ಕಠಿಣವಾಗಿ ಹೊಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ನನಗೆ ಅರಿವಾಯಿತು. ನಂತರ ನಾನು ಚೆಂಡನ್ನು ಸಮಯಕ್ಕೆ ಸರಿಯಾಗಿ ಹೊಡೆಯಬಹುದೆಂದು ಅರಿತುಕೊಂಡೆ. ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದೆ. ನಾವೆಲ್ಲರೂ ಇನ್ನೊಂದು ಪಂದ್ಯದ ಮೇಲೆ ಕಣ್ಣಿಟ್ಟಿದ್ದೆ." ಎಂದು ಹೇಳಿದರು.

ಅರ್ಧಶತಕ ಬಾರಿಸಿ ಗೆಳತಿಗೆ ಫ್ಲೈಯಿಂಗ್ ಕಿಸ್ ನೀಡಿದ ಪಾಂಡ್ಯ

Pandya gives flying kiss to Mahieka Sharma -

Abhilash BC
Abhilash BC Feb 27, 2026 11:56 AM

ಚೆನ್ನೈ, ಫೆ. 27: ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನೆಡೆಸಿ ಕೇವಲ 23 ರನ್‌ಗಳಲ್ಲಿ ಅರ್ಧಶತಕವನ್ನು ಗಳಿಸಿದ್ದ ಹಾರ್ದಿಕ್‌ ಪಾಂಡ್ಯ(Hardik Pandya) ಇದೇ ಸಂತಸದಲ್ಲಿ ಮೈದಾನದಿಂದಲೇ ತಮ್ಮ ಗೆಳತಿ ಮಹಿಕಾ ಶರ್ಮ(Mahieka Sharma)ಗೆ ಫ್ಲೈಯಿಂಗ್ ಕಿಸ್ ನೀಡಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಾಂಡ್ಯ ಬ್ಯಾಟಿಂಗ್‌ ವೇಳೆ ಸಿಕ್ಸರ್‌ ಮತ್ತು ಬೌಂಡರಿ ಬಾರಿಸುತ್ತಿದಾಗ ಪ್ರೇಕ್ಷಕರ ಸ್ಟ್ಯಾಂಡ್‌ನಿಂದ ಮಹಿಕಾ ಚಪ್ಪಾಳೆ ತಟ್ಟುತ್ತಾ ಆಲ್‌ರೌಂಡರ್‌ಗೆ ಹುರಿದುಂಬಿಸುತ್ತಿದ್ದರು. ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಪಾಂಡ್ಯ ಅರ್ಧಶತ ಪೂರ್ತಿಗೊಳಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು.



ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ "ತುಂಬಾ ಸಂತೋಷವಾಗಿದೆ. ನಾನು ಚೆಂಡನ್ನು ತುಂಬಾ ಕಠಿಣವಾಗಿ ಹೊಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ನನಗೆ ಅರಿವಾಯಿತು. ನಂತರ ನಾನು ಚೆಂಡನ್ನು ಸಮಯಕ್ಕೆ ಸರಿಯಾಗಿ ಹೊಡೆಯಬಹುದೆಂದು ಅರಿತುಕೊಂಡೆ. ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದೆ. ನಾವೆಲ್ಲರೂ ಇನ್ನೊಂದು ಪಂದ್ಯದ ಮೇಲೆ ಕಣ್ಣಿಟ್ಟಿದ್ದೆ" ಎಂದು ಹೇಳಿದರು.

"ನನಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ಇಷ್ಟ. ದೇವರು ದಯೆ ತೋರಿಸಿದ್ದಾನೆ. ನಾನು ಇನ್‌ಸ್ವಿಂಗ್ ಮತ್ತು ಔಟ್‌ಸ್ವಿಂಗ್ ಅನ್ನು ಎಸೆಯಬಲ್ಲೆ. ಆದ್ದರಿಂದ, ಸಾಕಷ್ಟು ತೃಪ್ತಿ ಹೊಂದಿದ್ದೇನೆ" ಎಂದು ಸ್ಟಾರ್ ಆಲ್-ರೌಂಡರ್ ಹೇಳಿದರು.

ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ ಅಕ್ಷರಶಃ ಅಬ್ಬರಿಸಿತು. ಸ್ಫೋಟಕ ಆಟವಾಡಿ 4 ವಿಕೆಟ್‌ ನಷ್ಟದಲ್ಲಿ 256 ರನ್‌ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿ ಗೆಲ್ಲಲು ಜಿಂಬಾಬ್ವೆ ಸಾಧ್ಯವಾಗದಿದ್ದರೂ ಕೊನೆವರೆಗೂ ಹೋರಾಡಿದ ತಂಡ 6 ವಿಕೆಟ್‌ ನಷ್ಟದಲ್ಲಿ 184 ರನ್‌ ಸಿಡಿಸಿತು.

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್‌ಗಳಲ್ಲಿ 256/4 (ಅಭಿಷೇಕ್‌ 55, ಹಾರ್ದಿಕ್‌ 50*, ತಿಲಕ್‌ 44*, ಇಶಾನ್‌ 38, ಸೂರ್ಯ 33, ಸಂಜು 24, ಸಿಕಂದರ್‌ 1-29), ಜಿಂಬಾಬ್ವೆ: 20 ಓವರ್‌ಗಳಲ್ಲಿ 184/6 (ಬೆನಟ್‌ 97*, ಸಿಕಂದರ್‌ 31, ಅರ್ಶ್‌ದೀಪ್‌ 3-24).