ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾರ್ದಿಕ್ ಪಾಂಡ್ಯ ಪಂಜಾಬ್‌ಗೆ, ಅರ್ಷದೀಪ್ ಸಿಂಗ್‌ ಮುಂಬೈಗೆ

IPL 2027 trade: 2025ರ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ (PBKS) ಅರ್ಷದೀಪ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆದರೆ 'ರೈಟ್ ಟು ಮ್ಯಾಚ್' (RTM) ಕಾರ್ಡ್ ಬಳಸುವ ಮೂಲಕ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡವು 18 ಕೋಟಿ ರೂಪಾಯಿವರೆಗೆ ಬಿಡ್ ಮೊತ್ತವನ್ನು ಹೆಚ್ಚಿಸಿದಾಗ, ಪಂಜಾಬ್ ತಂಡವು ಅದೇ ಮೊತ್ತವನ್ನು ನೀಡಿ ಈ ಎಡಗೈ ವೇಗದ ಬೌಲರ್ ಅನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

ಹಾರ್ದಿಕ್ ಪಾಂಡ್ಯ ಪಂಜಾಬ್‌ಗೆ, ಅರ್ಷದೀಪ್ ಸಿಂಗ್‌ ಮುಂಬೈಗೆ

Hardik Pandya and Arshdeep Singh -

Abhilash BC
Abhilash BC Nov 11, 2026 10:39 AM

ಮುಂಬಯಿ, ನ.11: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ದೊಡ್ಡ ವಿನಿಮಯ ಒಪ್ಪಂದ ಎಂದು ಬಣ್ಣಿಸಲಾಗುತ್ತಿರುವ ಬೆಳವಣಿಗೆಯಲ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ತಂಡಗಳನ್ನು ಅದಲು-ಬದಲು ಮಾಡಿಕೊಂಡಿದ್ದಾರೆ. ಐಪಿಎಲ್ 2027ರ ಋತುವಿಗೆ ಮುನ್ನ, ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ನೀಡಿ, ಪ್ರತಿಯಾಗಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಪಡೆದುಕೊಂಡಿದೆ. ಇದರೊಂದಿಗೆ ಎರಡು ವಾರಗಳ ಊಹಾಪೋಹಗಳಿಹಗೆ ತೆರೆ ಬಿದ್ದಿದೆ. ಲೀಗ್ ಇತಿಹಾಸದಲ್ಲೇ ಇದು ಅತ್ಯಂತ ಗಮನಾರ್ಹವಾದ ಆಟಗಾರರ ವಿನಿಮಯಗಳಲ್ಲಿ ಒಂದಾಗಿದೆ.

ಹಾರ್ದಿಕ್ 18 ಕೋಟಿ ರೂ.ಗೆ ಪಂಜಾಬ್‌ ತಂಡವನ್ನು ಸೇರಿಕೊಂಡಿದ್ದಾರೆ (ಇದು ಅವರ ಹಿಂದಿನ 16.35 ಕೋಟಿ ರೂ. ಸಂಭಾವನೆಗಿಂತ ಹೆಚ್ಚಾಗಿದೆ). ಇತ್ತ, ಅರ್ಷದೀಪ್ ತಮ್ಮ ಹಿಂದಿನ 18 ಕೋಟಿ ರೂ. ಸಂಭಾವನೆಯೊಂದಿಗೆ ಮುಂಬೈ ತಂಡಕ್ಕೆ ಸೇರಿದ್ದಾರೆ. ನವೆಂಬರ್ 17ರ 'ರಿಟೆನ್ಷನ್' (ಆಟಗಾರರನ್ನು ಉಳಿಸಿಕೊಳ್ಳುವ) ಗಡುವಿಗೆ ಮುನ್ನ, ಮುಂಬೈ ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ರಿಕಿ ಪಾಂಟಿಂಗ್ ಕೋಚ್ ಆಗಿರುವ ಈ ಫ್ರಾಂಚೈಸಿಯು ಭಾರತದ ಈ ಆಲ್‌ರೌಂಡರ್ ಆಟಗಾರನನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

2025ರ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ (PBKS) ಅರ್ಷದೀಪ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆದರೆ 'ರೈಟ್ ಟು ಮ್ಯಾಚ್' (RTM) ಕಾರ್ಡ್ ಬಳಸುವ ಮೂಲಕ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡವು 18 ಕೋಟಿ ರೂಪಾಯಿವರೆಗೆ ಬಿಡ್ ಮೊತ್ತವನ್ನು ಹೆಚ್ಚಿಸಿದಾಗ, ಪಂಜಾಬ್ ತಂಡವು ಅದೇ ಮೊತ್ತವನ್ನು ನೀಡಿ ಈ ಎಡಗೈ ವೇಗದ ಬೌಲರ್ ಅನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ರವೀಂದ್ರ, ಕಾನ್ವೇ ಕಮ್‌ಬ್ಯಾಕ್‌

ಇದೇ ವೇಳೆ, 2024ರಲ್ಲಿ ಪ್ರಾರಂಭವಾದ ಮುಂಬೈ ಇಂಡಿಯನ್ಸ್‌ನೊಂದಿಗೆ ತಮ್ಮ ಎರಡನೇ ಅವಧಿಯ ನಂತರ, ಹಾರ್ದಿಕ್ ಈಗ ಪಂಜಾಬ್‌ಗೆ ಮರಳಿದ್ದಾರೆ. ಅವರು ಆರಂಭದಲ್ಲಿ 2015ರಲ್ಲಿ ಮುಂಬೈ ತಂಡವನ್ನು ಸೇರಿಕೊಂಡಿದ್ದರು ಮತ್ತು ಆ ತಂಡದೊಂದಿಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು (2015, 2017, 2019 ಮತ್ತು 2020) ಗೆದ್ದಿದ್ದರು. ಏಳು ಸೀಸನ್‌ಗಳ ನಂತರ, 2022ರಲ್ಲಿ ಅವರು ಗುಜರಾತ್ ಟೈಟಾನ್ಸ್‌ಗೆ ಸೇರ್ಪಡೆಗೊಂಡರು. ಅಲ್ಲಿ ತಮ್ಮ ನಾಯಕತ್ವದಲ್ಲಿ ತಂಡವು ಮೊದಲ ಸೀಸನ್‌ನಲ್ಲೇ ಪ್ರಶಸ್ತಿ ಗೆದ್ದುಕೊಂಡಿತು ಮತ್ತು 2023ರಲ್ಲಿ ಫೈನಲ್ ತಲುಪಿತು. 2024ರಲ್ಲಿ ಅವರು ನಾಯಕರಾಗಿ ಮುಂಬೈ ಇಂಡಿಯನ್ಸ್‌ಗೆ ಮರಳಿದರು. ಒಟ್ಟು 162 ಐಪಿಎಲ್ ಪಂದ್ಯಗಳಲ್ಲಿ, ಅವರು 146.28 ಸ್ಟ್ರೈಕ್ ರೇಟ್‌ನೊಂದಿಗೆ 2,955 ರನ್‌ಗಳನ್ನು ಗಳಿಸಿದ್ದಾರೆ ಮತ್ತು 82 ವಿಕೆಟ್‌ಗಳನ್ನು ಪಡೆದಿದ್ದಾರೆ.

2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅರ್ಷದೀಪ್, ಎಂಟು ಋತುಗಳ ನಂತರ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿದ್ದಾರೆ. 96 ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಕಬಳಿಸಿರುವ ಅವರು, ಪಂಜಾಬ್ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದು, ಅಲ್ಲಿನ ಪ್ರಮುಖ ವೇಗದ ಬೌಲಿಂಗ್ ಆಯ್ಕೆಗಳಲ್ಲಿ ಒಬ್ಬರಾಗಲಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಕೂಡ ತಂಡದಲ್ಲಿರುವ ಕಾರಣ ತಂಡದ ಬೌಲಿಂಗ್‌ ಬಲಿಷ್ಠಗೊಳ್ಳಲಿದೆ.