GT vs MI: ಬುಮ್ರಾ ವಿಕೆಟ್ ಬರಗಾಲ ನನ್ನ ಸಮಸ್ಯೆಯಲ್ಲ ಎಂದ ಹಾರ್ದಿಕ್ ಪಾಂಡ್ಯ
Jasprit Bumrah: ಪಂದ್ಯದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಪಾಂಡ್ಯ, "ಸತತ ಸೋಲಿನ ಬಳಿಕ ಗೆಲ್ಲುವುದು ಯಾವಾಗಲೂ ಸವಾಲಿನ ಕೆಲಸ. ಅಲ್ಲದೆ, ಅಹಮದಾಬಾದ್‌ನಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಆದ್ದರಿಂದ ಈ ಗೆಲುವು ತುಂಬಾ ತೃಪ್ತಿಕರವಾಗಿದೆ" ಎಂದು ಅವರು ಹೇಳಿದರು.
Hardik Pandya -
ಅಹಮದಾಬಾದ್, ಎ.21: ಸೋಮವಾರ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್(GT vs MI) ವಿರುದ್ಧ ಮುಂಬೈ ಇಂಡಿಯನ್ಸ್ ಪರ ಮೊದಲ ಎಸೆತದಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಸ್‌ಪ್ರೀತ್ ಬುಮ್ರಾ ಐಪಿಎಲ್ 2026(IPL 2026) ರಲ್ಲಿ ತಮ್ಮ ವಿಕೆಟ್ ಖಾತೆಯನ್ನು ತೆರೆದರು. ತಮ್ಮ ಮೊದಲ ಐದು ಪಂದ್ಯಗಳಲ್ಲಿ ವಿಕೆಟ್ ಪಡೆಯದ ಬುಮ್ರಾ, ಆರಂಭಿಕ ಎಸೆತದಿಂದಲೇ ಸಾಯಿ ಸುದರ್ಶನ್ ವಿಕೆಟ್ ಕಿತ್ತು ಮಿಂಚಿದರು. ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ(Hardik Pandya) ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ.
ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯಗೆ ಬುಮ್ರಾ ಇನ್ನಿಂಗ್ಸ್‌ನ ಮೊದಲ ಓವರ್‌ನ ವಿಕೆಟ್ ಪಡೆದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಾಂಡ್ಯ, "ಹೌದು, ಇದು ತುಂಬಾ ಆಕರ್ಷಕವಾಗಿದೆ. ಜಸ್ಪ್ರೀತ್ ಮೊದಲ ಓವರ್ ಏಕೆ ಬೌಲ್ ಮಾಡಿಲ್ಲ ಎಂದು ಬಹಳಷ್ಟು ಜನರು ಕೇಳುವುದನ್ನು ನಾನು ನೋಡಿದ್ದೇನೆ. ಆದರೆ ನೀವು ನೋಡಿದರೆ, ಅವರು ಆಡಿದ 151 ಪಂದ್ಯಗಳಲ್ಲಿ ಎಂಟು ಅಥವಾ ಒಂಬತ್ತು ಬಾರಿ ಮಾತ್ರ ಮೊದಲ ಓವರ್ ಎಸೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಹಾರ್ದಿಕ್ ಪಾಂಡ್ಯ ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ" ಎಂದು ಪಾಂಡ್ಯ ಉತ್ತರಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡವು 199/5 ರನ್ ಗಳಿಸಿತು, ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಅಜೇಯ 101 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಮುಂಬೈ ತಂಡವು ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಮೂರು ಸ್ಥಾನ ಜಿಗಿದು 7 ನೇ ಸ್ಥಾನವನ್ನು ಪಡೆದುಕೊಂಡಿದೆ. ಆಡಿದ ಆರು ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ.
ಪಂದ್ಯದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಪಾಂಡ್ಯ, "ಸತತ ಸೋಲಿನ ಬಳಿಕ ಗೆಲ್ಲುವುದು ಯಾವಾಗಲೂ ಸವಾಲಿನ ಕೆಲಸ. ಅಲ್ಲದೆ, ಅಹಮದಾಬಾದ್‌ನಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಆದ್ದರಿಂದ ಈ ಗೆಲುವು ತುಂಬಾ ತೃಪ್ತಿಕರವಾಗಿದೆ" ಎಂದು ಅವರು ಹೇಳಿದರು.
ಗುಜರಾತ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳ ಜಿಗಿತ ಕಂಡ ಮುಂಬೈ
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಿಲಕ್ ವರ್ಮ ಅವರ ಶತಕದ ನೆರವಿನಿಂದ 5 ವಿಕೆಟ್‌ಗೆ 199 ರನ್ ಬಾರಿಸಿತು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ 15.5 ಓವರ್‌ಗಳಲ್ಲಿ 100 ರನ್‌ಗೆ ಸರ್ವಪತನ ಕಂಡಿತು. ಮುಂಬೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅಶ್ವನಿ ಕುಮಾರ್ 24 ರನ್ ವೆಚ್ಚದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಿತ್ತು ಗುಜರಾತ್ ಪತನಕ್ಕೆ ಕಾರಣರಾದರು. ಉಳಿದಂತೆ ಆಫ್ಘಾನ್ ಸಿನ್ನರ್ ಎ.ಎಂ. ಗಜನ್‌ಫರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಪಡೆದರು.