ನಾಳೆಯಿಂದ ಟಿ20 ವಿಶ್ವಕಪ್ ಸಮರ; ಟೂರ್ನಿಯ ಮಳೆ ನಿಯಮ ಹೇಗಿದೆ?
T20 World Cup 2026 Rain Rules: ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್ಗೇರಲಿದೆ. ಒಂದೊಮ್ಮೆ ಫೈನಲ್ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.
T20 World Cup Rain Rules -
ನವದೆಹಲಿ, ಫೆ.5: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026(T20 World Cup 2026) ಆರಂಭಕ್ಕೆ ಕೇಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇತಿಹಾಸದಲ್ಲಿ ಎರಡನೇ ಬಾರಿಗೆ 20 ತಂಡಗಳೊಂದಿಗೆ ಆಡಲಾಗುತ್ತಿರುವ ಈ ಪಂದ್ಯಾವಳಿಯ ಸುತ್ತ ಸಾಕಷ್ಟು ನಿರೀಕ್ಷೆ ಮತ್ತು ಉತ್ಸಾಹವಿದೆ. ಶನಿವಾರ(ಫೆ.7) ಪಂದ್ಯಾವಳಿ ಆರಂಭವಾಗಲಿದೆ. ಮೊದಲ ದಿನವೇ ಮೂರು ಪಂದ್ಯಗಳು ನಡೆಯಲಿವೆ. ಟೂರ್ನಿ ಆರಂಭಕ್ಕೂ ಮುನ್ನ ಐಸಿಸಿಯ ಮಳೆ ನಿಯಮ(T20 World Cup 2026 Rain Rules) ಹೇಗಿದೆ ಎಂಬ ವರದಿ ಇಲ್ಲಿದೆ.
ಕೊಲಂಬೊದಲ್ಲಿ ನಡೆದ ಪಾಕಿಸ್ತಾನ ಮತ್ತು ಐರ್ಲೆಂಡ್ ನಡುವಿನ ಅಭ್ಯಾಸ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಭಾರತದಲ್ಲಿ ಮಳೆ ಭೀತಿ ಇಲ್ಲವಾದರೂ ಶ್ರೀಲಂಕಾದಲ್ಲಿ ಮಳೆ ಪಂದ್ಯಕ್ಕೆ ಅಡಚಣೆ ಉಂಟುಮಾಡುವ ಸಾಧ್ಯತೆ ಅಧಿಕವಾಗಿದೆ. ಶ್ರೀಲಂಕಾದಲ್ಲಿ ಆರಂಭಿಕ ವಾರದ ಮುನ್ಸೂಚನೆಯು ವಿಶೇಷವಾಗಿ ಕಳವಳಕಾರಿಯಾಗಿದೆ. ಶನಿವಾರ ನಡೆಯಲಿರುವ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ 90% ರಷ್ಟು ಇದೆ ಎಂದು ಅಕ್ಯೂವೆದರ್ ಎಚ್ಚರಿಕೆ ನೀಡಿದೆ.
ಅಂಕ ಹಂಚಿಕೆ
ಲೀಗ್ ಮತ್ತು ಸೂಪರ್-8 ಹಂತದ ಪಂದ್ಯಗಳು ಮಳೆಯಿಂದಾಗಿ ಯಾವುದೇ ಪಂದ್ಯವನ್ನು ರದ್ದುಗೊಳಿಸಿದರೆ ಎರಡೂ ತಂಡಗಳ ನಡುವೆ ಅಂಕಗಳನ್ನು ಹಂಚಲಾಗುತ್ತದೆ. ಈ ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಒಂದೊಮ್ಮೆ ಈ ಹಂತದ ಪಂದ್ಯಗಳು ಮಳೆಯಿಂದ ಅಡ್ಡಿಯಾದಲ್ಲಿ, ಪಂದ್ಯದ ಫಲಿತಾಂಶ ನಿರ್ಣಯಿಸಲು ಪ್ರತಿ ತಂಡಕ್ಕೆ ಕನಿಷ್ಠ 5 ಓವರ್‌ಗಳು ಆಡುವುದು ಕಡ್ಡಾಯ.
ಆಸ್ಟ್ರೇಲಿಯಾಗೆ ಗಾಯದ ಸಮಸ್ಯೆ: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಹ್ಯಾಜಲ್‌ವುಡ್
ಸೆಮಿ, ಫೈನಲ್‌ಗೆ ಮೀಸಲು ದಿನ
ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್ಗೇರಲಿದೆ. ಒಂದೊಮ್ಮೆ ಫೈನಲ್ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.
ಟಿ20 ವಿಶ್ವಕಪ್ ಮಳೆ ನಿಯಮಗಳ ಮುಖ್ಯಾಂಶಗಳು
ಗುಂಪು ಹಂತದ ಪಂದ್ಯಗಳು: ಮಳೆಯಿಂದ ಅಡ್ಡಿಯಾದಲ್ಲಿ, ಪಂದ್ಯದ ಫಲಿತಾಂಶ ನಿರ್ಣಯಿಸಲು ಪ್ರತಿ ತಂಡಕ್ಕೆ ಕನಿಷ್ಠ 5 ಓವರ್‌ಗಳು ಆಡುವುದು ಕಡ್ಡಾಯ.
ಸೆಮಿ-ಫೈನಲ್ ಮತ್ತು ಫೈನಲ್: ನಾಕೌಟ್ ಪಂದ್ಯಗಳಲ್ಲಿ ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ 10 ಓವರ್‌ಗಳು ನಡೆಯಬೇಕು.
ಮೀಸಲು ದಿನ: ಸೆಮಿ-ಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನ ಇರುತ್ತದೆ. ನಿಗದಿತ ದಿನ ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಮುಂದಿನ ದಿನ ಉಳಿದ ಪಂದ್ಯವನ್ನು ಆಡಲಾಗುತ್ತದೆ.
ಡಿಎಲ್‌ಎಸ್ (DLS) ನಿಯಮ: ಪಂದ್ಯದ ಓವರ್‌ಗಳನ್ನು ಕಡಿಮೆ ಮಾಡಿದರೆ, DLS ನಿಯಮದಡಿ ಪರಿಷ್ಕೃತ ಗುರಿ (Target) ನೀಡಲಾಗುತ್ತದೆ.
ಪಂದ್ಯ ರದ್ದತಿ: ಒಂದು ವೇಳೆ ಮೀಸಲೂ ದಿನದಂದು ಪಂದ್ಯ ನಡೆಯದಿದ್ದರೆ, ಲೀಗ್ ಹಂತದಲ್ಲಿ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆ. ನಾಕೌಟ್‌ನಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲಿರುವ ತಂಡ ಫೈನಲ್‌ಗೆ/ಮುಂದಿನ ಹಂತಕ್ಕೆ ಪ್ರವೇಶಿಸುತ್ತದೆ.
ಹೆಚ್ಚುವರಿ ಸಮಯ: ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 60 ರಿಂದ 90 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ.