ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಐ ಎಮ್‌ ರಿಯಲೀ ಹ್ಯಾಪಿ'; ಸತತ ಗೆಲುವಿನ ಬಳಿಕ ಅಜಿಂಕ್ಯ ರಹಾನೆ ಪ್ರತಿಕ್ರಿಯೆ

IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರ, ಕೆಕೆಆರ್‌ ತಂಡವು ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮೇ 13 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

'ಐ ಎಮ್‌ ರಿಯಲೀ ಹ್ಯಾಪಿ'; ಸತತ ಗೆಲುವಿನ ಬಳಿಕ ರಹಾನೆ ಪ್ರತಿಕ್ರಿಯೆ

Ajinkya Rahane -

Abhilash BC
Abhilash BC May 9, 2026 9:46 AM

ನವದೆಹಲಿ, ಮೇ 9: ಆರಂಭಿಕ ಹಂತದಲ್ಲಿ ಸತತ 6 ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders) ತಂಡವು ಇದೀಗ ಸತತ ನಾಲ್ಕು ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ. ತಂಡದ ಪ್ರದರ್ಶನ ಕಂಡ ನಾಯಕ ಅಜಿಂಕ್ಯ ರಹಾನೆ(Ajinkya Rahane), ಐ ಎಮ್‌ ರಿಯಲೀ ಹ್ಯಾಪಿ(ನಾನು ಈಗ ಸಂತಸಗೊಂಡಿದ್ದೇನೆ) ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ತಂಡದ ಗೆಲುವಿನ ಬಳಿಕ ಮಾತನಾಡಿದ ರಹಾನೆ, ಮೊದಲನೆಯದಾಗಿ, ಫಿನ್ ಅಲೆನ್ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳುತ್ತೇನೆ. ಅವರು ಮೊದಲ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಕಷ್ಟಪಟ್ಟಿದ್ದರು, ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಡೆಲ್ಲಿ ವಿರುದ್ಧ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಆದರೆ ನಾನು ನಮ್ಮ ಬೌಲರ್‌ಗಳನ್ನು ಮತ್ತೊಮ್ಮೆ ಹೊಗಳಲು ಬಯಸುತ್ತೇನೆ. ಅವರ ಕಾರಣದಿಂದಾಗಿ ನಾವು ಉತ್ತಮವಾಗಿ ಆಡಿದ್ದೇವೆ. ಮತ್ತು ಅವರು ಅದನ್ನು ಸ್ಥಿರವಾಗಿ ಚೆನ್ನಾಗಿ ಮಾಡುತ್ತಿದ್ದಾರೆ. ತಂಡದ ಪ್ರದರ್ಶನದಿಂದ ನಾನು ಸಂತಸಗೊಂಡಿದ್ದೇನೆ ಎಂದರು.

"ವಿಶೇಷವಾಗಿ ಮಧ್ಯಮ ಓವರ್‌ಗಳು ಮತ್ತು ಡೆತ್ ಓವರ್‌ಗಳಲ್ಲಿ ನಮ್ಮ ಸ್ಪಿನ್ನರ್‌ಗಳಾದ ಸುನಿಲ್ ನರೈನ್, ವರುಣ್ ಮತ್ತು ಅನುಕುಲ್ ರಾಯ್ ಅದ್ಭುತ ಪ್ರದರ್ಶನ ತೋರತ್ತಿದ್ದಾರೆ. ಫೀಲ್ಡಿಂಗ್ ವಿಷಯದಲ್ಲಿಯೂ ಸುಧಾರಣೆ ಕಂಡಿದೆ. ಹೌದು, ನಾವು ನಿಜವಾಗಿಯೂ ಶ್ರಮಿಸುತ್ತಿದ್ದೇವೆ" ಎಂದು ರಹಾನೆ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.

IPL 2026: ಎಐ ನಿರ್ಮಿತ ನಕಲಿ ಐಪಿಎಲ್‌ ಟಿಕೆಟ್‌ ಮಾರಾಟ; ನಾಲ್ವರ ಬಂಧನ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರ, ಕೆಕೆಆರ್‌ ತಂಡವು ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮೇ 13 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

ಆಡಿರುವ 10 ಪಂದ್ಯಗಳಲ್ಲಿ, ಕೆಕೆಆರ್ ಈಗ ನಾಲ್ಕು ಪಂದ್ಯಗಳನ್ನು ಗೆದ್ದಿದೆ, ಐದು ಪಂದ್ಯಗಳನ್ನು ಸೋತಿದೆ ಮತ್ತು ಅವರ ಒಂದು ಪಂದ್ಯವು ಫಲಿತಾಂಶವನ್ನು ನೀಡಿಲ್ಲ. ಅವರು ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದು ಇನ್ನೂ ಪ್ಲೇಆಫ್‌ಗಾಗಿ ಸ್ಪರ್ಧೆಯಲ್ಲಿದ್ದಾರೆ.

ಸೀಸನ್ ಮುಗಿದಿದೆ: ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ವರ್ಷಕ್ಕೆ ಯೋಜನೆ ಆರಂಭಿಸಲಿದೆ ಎಂದ ಅಕ್ಷರ್ ಪಟೇಲ್

ಶುಕ್ರವಾರದ ಪಂದ್ಯದ ಬಗ್ಗೆ ಹೇಳುವುದಾದರೆ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. 143 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೂರು ಬಾರಿಯ ಚಾಂಪಿಯನ್ ತಂಡವು ಕೇವಲ 14.2 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಚೇಸಿಂಗ್‌ ವೇಳೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಫಿನ್‌ ಅಲೆನ್‌, 47 ಎಸೆತಗಳಲ್ಲಿ ಶತಕ ಬಾರಿಸಿದರು. ಅವರ ಈ ಬೀಸಾಟದ ಬ್ಯಾಟಿಂಗ್‌ನಲ್ಲಿ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್‌ಗಳು ಮತ್ತು 5 ಬೌಂಡರಿ.