ಮುಲ್ಲನ್‌ಪುರ ಟೆಸ್ಟ್: ಇನಿಂಗ್ಸ್ ಹಾಗೂ 300 ರನ್ ಅಂತರದ ಗೆಲುವು ಸಾಧಿಸಿದ ಭಾರತ
IND vs AFG One-off Test: ಮೊದಲ ಇನಿಂಗ್ಸ್‌ನಲ್ಲಿ ನೈಜ ಸಾಮರ್ಥ್ಯ ತೋರುವಲ್ಲಿ ಎಡವಿದ್ದ ವಾಷಿಂಗ್ಟನ್ ಸುಂದರ್ ಮತ್ತು ಅನುಭವಿ ಕುಲ್‌ದೀಪ್ ಯಾದವ್ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಘಟಿತ ಬೌಲಿಂಗ್ ದಾಳಿ ನಡೆಸಿದರು. ಸುತಾರ್ ಮತ್ತು ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತರು. ಸುತಾರ್ ಒಟ್ಟಾರೆ 7 ವಿಕೆಟ್ ಕಿತ್ತರು.
India vs Afghanistan -
ಮುಲ್ಲನ್‌ಪುರ, ಜೂ.8: ಸ್ಪಿನ್ನರ್‌ಗಳ ಅಮೋಘ ಪ್ರದರ್ಶನದ ನರೆವಿನಿಂದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು 300 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಭಾರತದ ಅತಿ ದೊಡ್ಡ ಟೆಸ್ಟ್ ಗೆಲುವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್ ಮತ್ತು 272 ಅಂತರದ ಗೆಲುವು ಸಾಧಿಸಿತ್ತು. ಯುವ ಸ್ಪಿನ್ನರ್ ಮಾನವ್ ಸುತಾರ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಿತ್ತರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಕುಲ್‌ದೀಪ್ ಯಾದವ್(3) ಮತ್ತು ವಾಷಿಂಗ್ಟನ್ ಸುಂದರ್(4) ವಿಕೆಟ್ ಕಿತ್ತು ಆಫ್ಘಾನ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 564 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಭಾನುವಾರ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತು. ಸೋಮವಾರ ಮೂರನೇ ದಿನದಾಟ ಆರಂಭಿಸಿದ ಆಫ್ಘಾನ್‌ಗೆ ಸ್ಪಿನ್ನರ್ ಮಾನವ್ ಸುತಾರ್ ಇನ್ನಿಲ್ಲದಂತೆ ಕಾಡಿದರು. ಅಂತಿಮವಾಗಿ ತಂಡ 152 ರನ್‌ಗೆ ಆಲೌಟ್ ಆಯಿತು. 412ರನ್ ಮುನ್ನಡೆ ಪಡೆದ ಭಾರತ ಫಾಲೋ ಆನ್ ಹೇರಿತು. ದ್ವಿತೀಯ ಇನಿಂಗ್ಸ್‌ನಲ್ಲಿಆಫ್ಘಾನ್ ಬ್ಯಾಟಿಂಗ್ ಇನ್ನಷ್ಟು ಕಳಪೆ ಮಟ್ಟದಿಂದ ಕೂಡಿತ್ತು. 112 ರನ್‌ಗೆ ಆಲೌಟ್ ಆಯಿತು.
ದ್ವಿತೀಯ ಇನಿಂಗ್ಸ್ ವೇಳೆ ಸಣ್ಣ ಬ್ಯಾಟಿಂಗ್ ಹೋರಾಟ ನಡೆಸಿದ ಆರಂಭಕಾರ ಸೇದಿಕುಲ್ಲಾ ಅಟಲ್ 42 ರನ್ ಬಾರಿಸಿದರು. ಇವರನ್ನು ಹೊರತುಪಡಿಸಿ ರಹಮಾನುಲ್ಲಾ ಗುರ್ಬಾಜ್ 24 ರನ್ ಗಳಿಸಿದರು. ಒಟ್ಟಾರೆಯಾಗಿ ಮೂರು ಮಂದಿ ತಂಡದ ಪರ ಎರಡಂಕಿ ದಾಟಿದರು.
ಮಾನವ್ ಸ್ಪಿನ್ ಜಾದೂ; ಆಫ್ಘಾನ್‌ಗೆ ಫಾಲೋ-ಆನ್ ಹೇರಿದ ಭಾರತ
ಭಾನುವಾರ ಮೂರು ವಿಕೆಟ್ ಕಿತ್ತಿದ್ದ ಅವರು 3ನೇ ದಿನದಾಟದಲ್ಲಿಯೂ ಮತ್ತೆ 3 ವಿಕೆಟ್ ಕಿತ್ತರು. 43 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಹ್ಮತ್ ಶಾ ಅರ್ಧಶತಕ ಪೂರ್ತಿಗೊಳಿಸಿದರು. 135 ಎಸೆತ ಎದುರಿಸಿದ ಅವರು 60 ರನ್ ಬಾರಿಸಿದರು. ತಂಡದ ಪರ ಅವರದ್ದೇ ಅತ್ಯಧಿಕ ಗಳಿಕೆ.
Clinical from start to finish 👏
— BCCI (@BCCI) June 8, 2026
An unforgettable Test match in New Chandigarh ends with #TeamIndia securing their biggest ever win by an innings and 300 runs 🤍
Scorecard ▶️ https://t.co/Au50EfVM30#INDvAFG | @IDFCFIRSTBank pic.twitter.com/RfmeJWSyh2
ಮೊದಲ ಇನಿಂಗ್ಸ್‌ನಲ್ಲಿ ನೈಜ ಸಾಮರ್ಥ್ಯ ತೋರುವಲ್ಲಿ ಎಡವಿದ್ದ ವಾಷಿಂಗ್ಟನ್ ಸುಂದರ್ ಮತ್ತು ಅನುಭವಿ ಕುಲ್‌ದೀಪ್ ಯಾದವ್ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಘಟಿತ ಬೌಲಿಂಗ್ ದಾಳಿ ನಡೆಸಿದರು. ಸುತಾರ್ ಮತ್ತು ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತರು. ಸುತಾರ್ ಒಟ್ಟಾರೆ 7 ವಿಕೆಟ್ ಕಿತ್ತರು.
ಮಾನವ್ ಸುತಾರ್ 6 ವಿಕೆಟ್ ಕೀಳುವ ಮೂಲಕ ಭಾರತದ ಪರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಎರಡನೇ ಭಾರತೀಯ ಆಟಗಾರ ಎನಿಸಿದರು. 1988ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರ್ವಾನಿ 8/61 ವಿಕೆಟ್ ಕಿತ್ತದ್ದು ದಾಖಲೆ. ಸುತಾರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದ 10ನೇ ಭಾರತೀಯ ಬೌಲರ್ ಮತ್ತು ಏಳನೇ ಸ್ಪಿನ್ನರ್ ಎನಿಸಿಕೊಂಡರು.