ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 5th T20: ಟಾಸ್‌ ಸೋತ ಭಾರತ; ತಂಡದಲ್ಲಿ ಒಂದು ಬದಲಾವಣೆ

India vs Australia 5th T20 Live Streaming: ಬ್ರಿಸ್ಬೇನ್‌ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಜತೆಗೆ ಉತ್ತಮ ಬೌನ್ಸ್‌ ಸಹ ಹೊಂದಿದೆ. ಅದರಲ್ಲೂ ಹೊಸ ಚೆಂಡಿನಲ್ಲಿ ಸ್ವಿಂಗ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಎಡಗೈ ವೇಗಿ ಅರ್ಶ್‌ದೀಪ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಕೂಡ ಸದ್ಯ ಮಳೆಯ ಲಕ್ಷಣ ಕಂಡುಬಂದಿಲ್ಲ. ಆದರೆ ಮೋಡ ಕವಿ ವಾತಾವರಣವಿದೆ. ದ್ವಿತೀಯ ಇನಿಂಗ್ಸ್‌ ವೇಳೆ ಮಳೆ ಅಡ್ಡಿಪಡಿಸಿದರೂ ಅಚ್ಚರಿಯಿಲ್ಲ. ಮಳೆಯಿಂ ಪಂದ್ಯ ರದ್ದಾದರೆ ಸರಣಿ ಭಾರತದ ಕೈ ವಶವಾಗಲಿದೆ.

ಮಸ್ಟ್‌ ವಿನ್‌ ಗೇಮ್‌ನಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆಸೀಸ್

ಟಾಸ್‌ ವೇಳೆ ಮಿಚೆಲ್‌ ಮಾರ್ಷ್‌ ಮತ್ತು ಸೂರ್ಯಕುಮಾರ್‌ -

Abhilash BC
Abhilash BC Nov 8, 2025 1:24 PM

ಬ್ರಿಸ್ಬೇನ್‌: ಪ್ರವಾಸಿ ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟಿ20(IND vs AUS 5th T20) ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್‌ ಮಾರ್ಷ್‌ ಬೌಲಿಂಗ್‌ ಆಯ್ದುಕೊಂಡರು. ಸರಣಿ ಸೋಲಿನಿಂದ ಪಾರಾಗಬೇಕಿದ್ದರೆ ಆಸೀಸ್‌ಗೆ ಇದು ಮಸ್ಟ್‌ ವಿನ್‌ ಗೇಮ್‌. ಆಸ್ಟ್ರೇಲಿಯಾ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ನಾಲ್ಕನೇ ಪಂದ್ಯದ ತಂಡವನ್ನೇ ಆಡಲಿಳಿಸಿತು. ಭಾರತ ತಂಡ ಒಂದು ಬದಲಾವಣೆ ಮಾಡಿತು. ತಿಲಕ್‌ ವರ್ಮಾಗೆ ವಿಶ್ರಾಂತಿ ನೀಡಿ ರಿಂಕು ಸಿಂಗ್‌ಗೆ ಅವಕಾಶ ನೀಡಲಾಯಿತು.

ಸರಣಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿರುವ ನಾಯಕ ಸೂರ್ಯಕುಮಾರ್‌ ಮತ್ತು ಉಪನಾಯಕ ಶುಭಮನ್‌ ಗಿಲ್ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಿರ್ವಹಣೆ ತೋರಬೇಕಿದೆ. ಸಂಜು ಬದಲು ಆಡುತ್ತಿರುವ ವಿಕೆಟ್‌ ಕೀಪರ್ ಜಿತೇಶ್‌ ಶರ್ಮಾ ಅವರಿಂದಲೂ ಪರಿಣಾಮಕಾರಿ ಪ್ರದರ್ಶನ ಮೂಡಿಬರಬೇಕಿದೆ.

ಬ್ರಿಸ್ಬೇನ್‌ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಜತೆಗೆ ಉತ್ತಮ ಬೌನ್ಸ್‌ ಸಹ ಹೊಂದಿದೆ. ಅದರಲ್ಲೂ ಹೊಸ ಚೆಂಡಿನಲ್ಲಿ ಸ್ವಿಂಗ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಎಡಗೈ ವೇಗಿ ಅರ್ಶ್‌ದೀಪ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಕೂಡ ಸದ್ಯ ಮಳೆಯ ಲಕ್ಷಣ ಕಂಡುಬಂದಿಲ್ಲ. ಆದರೆ ಮೋಡ ಕವಿ ವಾತಾವರಣವಿದೆ. ದ್ವಿತೀಯ ಇನಿಂಗ್ಸ್‌ ವೇಳೆ ಮಳೆ ಅಡ್ಡಿಪಡಿಸಿದರೂ ಅಚ್ಚರಿಯಿಲ್ಲ. ಮಳೆಯಿಂದ ಪಂದ್ಯ ರದ್ದಾದರೆ ಸರಣಿ ಭಾರತದ ಕೈ ವಶವಾಗಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ ಟಿ20ಯಲ್ಲಿ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 20 ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ 11 ಗೆಲುವು ಮಾತ್ರ ಕಂಡಿದೆ. ಒಂದು ಪಂದ್ಯ ರದ್ದಾಗಿದೆ.

ಸರಣಿಯಲ್ಲಿ ಭಾರತ ಈಗಾಗಲೇ 2–1 ಅಂತರದಲ್ಲಿ ಸುರಕ್ಷಿತ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 17 ವರ್ಷಗಳಿಂದ ಒಮ್ಮೆಯೂ ಸರಣಿ ಸೋಲದ ದಾಖಲೆ ಕಾಪಾಡಿಕೊಂಡು ಬಂದಿದೆ. ಸೂರ್ಯಕುಮಾರ್ ಯಾದವ್ ಪಡೆ ಈಗ ಸರಣಿ ಗೆಲುವಿನ ಅವಕಾಶ ಹೊಂದಿದೆ.

ಆಸ್ಟ್ರೇಲಿಯಾಕ್ಕೆ ಜೋಶ್ ಹ್ಯಾಜಲ್‌ವುಡ್‌ ಅವರ ಅನುಪಸ್ಥಿತಿ ತಂಡದ ಬೌಲಿಂಗ್ ದಾಳಿಯನ್ನು ದುರ್ಬಲಗೊಳಿಸಿದೆ. ಹೀಗಾಗಿ ನಥಾನ್ ಎಲ್ಲಿಸ್‌ ಮತ್ತು ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅವರ ಮೇಲೆ ಹೊಣೆ ಹೆಚ್ಚಿದೆ. ಟ್ರಾವಿಸ್‌ ಹೆಡ್‌ ಗೈರು ಕೂಡ ಕಾಂಗರೂ ಪಡೆಯನ್ನು ಕಾಡುತ್ತಿದೆ.

ಇದನ್ನೂ ಓದಿ IND vs AUS 5th T20I: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಉಭಯ ಆಡುವ ಬಳಗ

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿ.ಕೀ.), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್(ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್(ವಿಕೆಟ್ ಕೀಪರ್), ಟಿಮ್ ಡೇವಿಡ್, ಜೋಶ್ ಫಿಲಿಪ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ.