ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women’s ODI World Cup: 2029 ರ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 10 ತಂಡಗಳ ಸ್ಪರ್ಧೆ

Women’s ODI World Cup 2029: ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಗೆ ಆಶ್ಲೇ ಡಿ ಸಿಲ್ವಾ, ಮಾಜಿ ಭಾರತೀಯ ಆಟಗಾರ್ತಿ ಮಿಥಾಲಿ ರಾಜ್, ಭಾರತದ ಮುಖ್ಯ ಕೋಚ್ ಅಮೋಲ್ ಮುಜುಂದಾರ್, ಬೆನ್ ಸಾಯರ್, ಷಾರ್ಲೆಟ್ ಎಡ್ವರ್ಡ್ಸ್ ಮತ್ತು ಸಲಾ ಸ್ಟೆಲ್ಲಾ ಸಿಯಾಲೆ-ವಾಯಾ ಸೇರಿದಂತೆ ಹಲವು ಹೊಸ ನೇಮಕಾತಿಗಳನ್ನು ಐಸಿಸಿ ಅನುಮೋದಿಸಿದೆ.

2029 ರ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 10 ತಂಡಗಳ ಸ್ಪರ್ಧೆ

ಮಹಿಳಾ ಏಕದಿನ ವಿಶ್ವಕಪ್‌ ಟ್ರೋಫಿ -

Abhilash BC
Abhilash BC Nov 8, 2025 11:04 AM

ದುಬೈ: 2029 ರಲ್ಲಿ ನಡೆಯಲಿರುವ ಮುಂದಿನ ಆವೃತ್ತಿಯಿಂದ ಮಹಿಳಾ ಏಕದಿನ ವಿಶ್ವಕಪ್‌(Women’s ODI World Cup)ನಲ್ಲಿ ತಂಡಗಳ ಸಂಖ್ಯೆಯನ್ನು 10ಕ್ಕೆ ವಿಸ್ತರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಈ ಬಗ್ಗೆ ಐಸಿಸಿ(ICC) ಸಭೆಯಲ್ಲಿ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ. ನವೆಂಬರ್ 2 ರ ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ತನ್ನ ಮೊದಲ ಜಾಗತಿಕ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತದಲ್ಲಿ ನಡೆದ ಮಹಿಳಾ ವಿಶ್ವಕಪ್‌ನ ಯಶಸ್ಸು ಕಂಡು, ಮಹಿಳಾ ಕ್ರಿಕೆಟ್ ಅನ್ನು ಮುನ್ನಡೆಸುವ ತನ್ನ ಬದ್ಧತೆಯನ್ನು ಐಸಿಸಿ ಪುನರುಚ್ಚರಿಸಿತು.

ಕ್ರೀಡಾಂಗಣಗಳಲ್ಲಿ ನಡೆದ ಪಂದ್ಯಗಳನ್ನು ಸುಮಾರು ಮೂರು ಲಕ್ಷ ಅಭಿಮಾನಿಗಳು ವೀಕ್ಷಿಸಿದರು. ಇದು ಯಾವುದೇ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾಖಲೆಯಾಗಿದೆ. ಈ ಕಾರ್ಯಕ್ರಮವು ಜಾಗತಿಕ ವೀಕ್ಷಕರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿತು. ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ಐಸಿಸಿ, ಮುಂದಿನ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಈ ವರ್ಷ ಎಂಟು ತಂಡಗಳಿಂದ 10 ತಂಡಗಳಿಗೆ ವಿಸ್ತರಿಸಲು ನಿರ್ಧರಿಸಿದೆ. 28 ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ, ಪುರುಷ ಮತ್ತು ಮಹಿಳಾ T20 ಕ್ರಿಕೆಟ್ ಈವೆಂಟ್‌ಗಳು ತಲಾ ಆರು ತಂಡಗಳನ್ನು ಒಳಗೊಂಡಿರುತ್ತವೆ. ಒಟ್ಟು 28 ಪಂದ್ಯಗಳನ್ನು ಆಡಲಾಗುವುದು.

2029 ರಲ್ಲಿ ಇನ್ನೂ ಎರಡು ತಂಡಗಳು ಭಾಗವಹಿಸಲಿದ್ದು, ಐಸಿಸಿ ಅರ್ಹತಾ ಸನ್ನಿವೇಶವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. 2025 ರ ಆವೃತ್ತಿಗೆ, ಭಾರತ ಆತಿಥೇಯ ರಾಷ್ಟ್ರವಾಗಿ ಅರ್ಹತೆ ಪಡೆದಿತ್ತು.

ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಗೆ ಆಶ್ಲೇ ಡಿ ಸಿಲ್ವಾ, ಮಾಜಿ ಭಾರತೀಯ ಆಟಗಾರ್ತಿ ಮಿಥಾಲಿ ರಾಜ್, ಭಾರತದ ಮುಖ್ಯ ಕೋಚ್ ಅಮೋಲ್ ಮುಜುಂದಾರ್, ಬೆನ್ ಸಾಯರ್, ಷಾರ್ಲೆಟ್ ಎಡ್ವರ್ಡ್ಸ್ ಮತ್ತು ಸಲಾ ಸ್ಟೆಲ್ಲಾ ಸಿಯಾಲೆ-ವಾಯಾ ಸೇರಿದಂತೆ ಹಲವು ಹೊಸ ನೇಮಕಾತಿಗಳನ್ನು ಐಸಿಸಿ ಅನುಮೋದಿಸಿದೆ.

ಇದನ್ನೂ ಓದಿ Rcb Sale: ಆರ್‌ಸಿಬಿ ಖರೀದಿ ರೇಸ್‌ನಲ್ಲಿ ನಿಖಿಲ್‌ ಕಾಮತ್‌, ರಂಜನ್‌ ಪೈ!

ಭಾರತದ 5 ನಗರಗಳಲ್ಲಿ ಟಿ20 ವಿಶ್ವಕಪ್

2026ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಗಳು ಭಾರತದ ಐದು ನಗರಗಳಲ್ಲಿ ನಡೆಯಲಿದೆ. ಆದರೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೆಸರಿಲ್ಲ. ಟೂರ್ನಿ ಮುಂದಿನ ವರ್ಷ ಫೆ.7ಕ್ಕೆ ಆರಂಭಗೊಂಡು, ಮಾ.8ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವಾರ ವೇಳಾಪಟ್ಟಿ ಪ್ರಕಟಗೊಳ್ಳಬಹುದು.

ಭಾರತದ 5 ನಗರಗಳಾದ ಅಹಮದಾಬಾದ್‌, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಜೊತೆಗೆ ಕೊಲಂಬೊ ಸೇರಿ ಶ್ರೀಲಂಕಾದ 3 ನಗರಗಳಲ್ಲೂ ಪಂದ್ಯ ಆಯೋಜನೆಗೊಳ್ಳಲಿವೆ. 2023ರ ಏಕದಿನ ವಿಶ್ವಕಪ್‌ ಫೈನಲ್‌ಗೆ ಆತಿಥ್ಯ ವಹಿಸಿದ್ದ ಅಹಮದಾಬಾದ್‌ ಕ್ರೀಡಾಂಗಣದಲ್ಲೇ ಟಿ20 ವಿಶ್ವಕಪ್‌ ಫೈನಲ್‌ ಕೂಡಾ ನಡೆಯಲಿದೆ.

ಪಾಕಿಸ್ತಾನ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿವೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಕೊಲಂಬೊದಲ್ಲಿ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಪಾಕ್‌ ತಂಡ ಫೈನಲ್‌ಗೇರಿದರೆ ಆ ಪಂದ್ಯಕ್ಕೆ ಅಹಮದಾಬಾದ್‌ ಬದಲು ಕೊಲಂಬೊ ಆತಿಥ್ಯ ವಹಿಸಲಿದೆ.