ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಳೆ ದ್ವಿತೀಯ ಏಕದಿನ; ರಾಜ್‌ಕೋಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?

IND vs NZ 2nd ODI: ನಿರಂಜನ್ ಶಾ ಕ್ರೀಡಾಂಗಣದಲ್ಲಿ ಇದುವರೆಗೆ ನಾಲ್ಕು ಏಕದಿನ ಪಂದ್ಯಗಳು ನಡೆದಿವೆ. ಗಮನಾರ್ಹವಾಗಿ, ಭಾರತವು ಈ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಅದು 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ತಂಡ ನೀಡಿದ ಹೋರಾಟವನ್ನು ಗಮನಿಸಿದರೆ, ಈ ಮುಖಾಮುಖಿಯು ತೀವ್ರ ಪೈಪೋಟಿಯಿಂದ ಕೂಡಿರಬಹುದು.

ಭಾರತ vs ನ್ಯೂಜಿಲೆಂಡ್‌ ದ್ವಿತೀಯ ಏಕದಿನ ಪಂದ್ಯದ ಪಿಚ್‌, ಹವಾಮಾನ ವರದಿ

Michael Bracewell and Shubman Gill -

Abhilash BC
Abhilash BC Jan 13, 2026 2:26 PM

ರಾಜ್‌ಕೋಟ್‌, ಜ.13: ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ 2nd ODI) ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಭಾರತ ತಂಡ ಸಜ್ಜಾಗಿದೆ. ಬುಧವಾರ ನಡೆಯುವ ಪಂದ್ಯದಲ್ಲಿ ಇತ್ತಂಡಗಳು ಸೆಣಸಾಟ ನಡೆಸಲಿದೆ. ಪಂದ್ಯಕ್ಕೆ ರಾಜ್‌ಕೋಟ್‌ ನಿರಂಜನ್ ಶಾ ಕ್ರೀಡಾಂಗಣ ಅಣಿಯಾಗಿದೆ. ಈ ಪಂದ್ಯದ ಹವಾಮಾನ ವರದಿ ಮತ್ತು ಪಿಚ್ ರಿಪೋರ್ಟ್‌ ಕುರಿತ ಮಾಹಿತಿ ಇಲ್ಲಿದೆ.

ಮಳೆ ಭೀತಿ ಇಲ್ಲ

ರಾಜ್‌ಕೋಟ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 14°C ಇರಬಹುದೆಂದು ಊಹಿಸಲಾಗಿದೆ.

ಪಿಚ್‌ ರಿಪೋರ್ಟ್‌

ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಿದೆ. ಹೀಗಾಗಿ ಪಂದ್ಯ ಹೈ ಸ್ಕೋರಿಂಗ್ ಆಗುವ ನಿರೀಕ್ಷೆ ಇದೆ. ಹಿಂದಿನ ಏಕದಿನ ಪಂದ್ಯಗಳಲ್ಲಿ 352, 340 ಮತ್ತು 325 ನಂತಹ ಹೆಚ್ಚಿನ ಮೊದಲ ಇನ್ನಿಂಗ್ಸ್ ಸ್ಕೋರ್‌ಗಳನ್ನು ದಾಖಲಿಸಿದೆ. ಇಲ್ಲಿ ಇದುವರೆಗೆ ನಾಲ್ಕು ಏಕದಿನ ಪಂದ್ಯಗಳು ನಡೆದಿವೆ. ಗಮನಾರ್ಹವಾಗಿ, ಭಾರತವು ಈ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಅದು 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ತಂಡ ನೀಡಿದ ಹೋರಾಟವನ್ನು ಗಮನಿಸಿದರೆ, ಈ ಮುಖಾಮುಖಿಯು ತೀವ್ರ ಪೈಪೋಟಿಯಿಂದ ಕೂಡಿರಬಹುದು.

ಕೊಹ್ಲಿ, ಧವನ್ ಪ್ರಮುಖ ದಾಖಲೆ ಹಿಂದಿಕ್ಕುವ ಸನಿಹದಲ್ಲಿ ಶ್ರೇಯಸ್ ಅಯ್ಯರ್

ಮುಖಾಮುಖಿ: 121

ಭಾರತ: 63

ನ್ಯೂಜಿಲೆಂಡ್​: 50

ಟೈ: 1, ರದ್ದು: 7

ಭಾರತದಲ್ಲಿ: 41

ಭಾರತ: 32

ನ್ಯೂಜಿಲೆಂಡ್​: 8

ರದ್ದು: 1

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂ), ರವೀಂದ್ರ ಜಡೇಜಾ, ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ನ್ಯೂಜಿಲ್ಯಾಂಡ್‌: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆ), ಮೈಕೆಲ್ ಬ್ರೇಸ್‌ವೆಲ್(ಸಿ), ಜಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್.