ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್‌ ಗೇಮ್ಸ್‌ ಆರ್ಚರಿ; ಚಿನ್ನಕ್ಕೆ ಗುರಿಯಿಟ್ಟ ಭಾರತ

Asian Games: ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಭಾರತೀಯ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 234-233 ಅಂತರದಿಂದ ರೋಚಕವಾಗಿ ಸೋಲಿಸಿತ್ತು. ಪಾರ್ಕ್ ಜುಂಗ್‌ಯೂನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯೆಯೋನ್ಸಿಯೊ ಅವರನ್ನೊಳಗೊಂಡ ಕೊರಿಯಾದ ತಂಡವು ನಂತರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಸೋಲಿಸಿತು.

ಏಷ್ಯನ್‌ ಗೇಮ್ಸ್‌ ಆರ್ಚರಿ; ಚಿನ್ನಕ್ಕೆ ಗುರಿಯಿಟ್ಟ ಭಾರತ

Women’s Team Archery -

Abhilash BC
Abhilash BC Sep 30, 2026 9:05 AM

ನಗೋಯಾ, ಸೆ.30: ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ನಡೆದ ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ, ಚೀನಾ ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ಭಾರತವು ವಿಶ್ವ ದಾಖಲೆಯ ಸ್ಕೋರ್‌ಗೆ ಸಮನಾದ ಸಾಧನೆ ಮಾಡುವ ಮೂಲಕ ತನ್ನ ಚಿನ್ನದ ಪದಕವನ್ನು ಉಳಿಸಿಕೊಂಡಿತು.

ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪಾರ್ಥಿ ಮತ್ತು ಪ್ರಿಥಿಕಾ ಪ್ರದೀಪ್ ಅವರನ್ನೊಳಗೊಂಡ ಭಾರತೀಯ ತಂಡವು, ಒಕಾಜಾಕಿ ಚುವೊ ಸೊಗೊ ಪಾರ್ಕ್‌ನಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಚೀನಾವನ್ನು 238-234 ಅಂತರದಿಂದ ಸೋಲಿಸಿ ಅಗ್ರಸ್ಥಾನವನ್ನು ಅಲಂಕರಿಸಿತು.

ಈ ಗೆಲುವಿನೊಂದಿಗೆ ಭಾರತವು ಕೊರಿಯಾದ ವಿಶ್ವ ದಾಖಲೆಯ ಅಂಕವನ್ನು ಸರಿಗಟ್ಟಿತು. ವುನಿಯರ್, ಯು ವಾಂಗ್ ಮತ್ತು ಫಾಂಗ್ಯಾವೊ ವೈ ಅವರನ್ನೊಳಗೊಂಡ ಚೀನಾ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಇದಕ್ಕೂ ಮುನ್ನ, ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಭಾರತೀಯ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 234-233 ಅಂತರದಿಂದ ರೋಚಕವಾಗಿ ಸೋಲಿಸಿತ್ತು. ಪಾರ್ಕ್ ಜುಂಗ್‌ಯೂನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯೆಯೋನ್ಸಿಯೊ ಅವರನ್ನೊಳಗೊಂಡ ಕೊರಿಯಾದ ತಂಡವು ನಂತರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಸೋಲಿಸಿತು.

ಭಾರತವು ಈ ಹಿಂದೆ 2018ರಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು 2014ರಲ್ಲಿ ಕಂಚಿನ ಪದಕವನ್ನು ಗೆದ್ದಿತ್ತು. ಆಂಧ್ರಪ್ರದೇಶದ ವಿಜಯವಾಡದವರಾದ ಜ್ಯೋತಿ, ಭಾರತದ ಅತ್ಯಂತ ಯಶಸ್ವಿ ಕಾಂಪೌಂಡ್ ಆರ್ಚರ್ (ಬಿಲ್ಲುಗಾರ್ತಿ) ಆಗಿದ್ದಾರೆ. 30 ವರ್ಷ ವಯಸ್ಸಿನ ಇವರು, ಪ್ರಸ್ತುತ ಕ್ರೀಡಾಕೂಟಕ್ಕೆ ಮುನ್ನವೇ ಮೂರು ಚಿನ್ನದ ಪದಕಗಳೂ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದ್ದರು.

Asian Games 2026: ಹೈಜಂಪ್‌ನಲ್ಲಿ ಪೂಜಾ ಸಿಂಗ್‌ಗೆ ಕಂಚು; 24 ವರ್ಷಗಳ ಬಳಿಕ ಭಾರತಕ್ಕೆ ಪದಕ!

ತೆಲಂಗಾಣದ ಪೆದ್ದಪಳ್ಳಿಯ 21 ವರ್ಷದ ಆರ್ಚರ್ ಚಿಖಿತಾ, ಜೂనిಯರ್ ವಿಶ್ವ ಚಾಂಪಿಯನ್‌ಶಿಪ್‌ನ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮಹಿಳೆಯರ ವೈಯಕ್ತಿಕ ವಿಭಾಗದ ಮೊಟ್ಟಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.

17 ವರ್ಷದ ಪ್ರಿತಿಕಾ ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ಜನಿಸಿದರೂ, ಮಹಾರಾಷ್ಟ್ರದ ಪುಣೆಯಲ್ಲಿ ಬೆಳೆದವರು. ಇವರು 2024ರ ಏಷ್ಯನ್ ಕ್ಯಾಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ಕಳೆದ ವರ್ಷದ ವಿಶ್ವ ಕ್ಯಾಡೆಟ್ ಚಾಂಪಿಯನ್‌ಶಿಪ್ ಹಾಗೂ ಹಿರಿಯರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ (ಅಂತಿಮ ಪಂದ್ಯದಲ್ಲಿ ಜ್ಯೋತಿ ವಿರುದ್ಧ ಸೋತರು) ಬೆಳ್ಳಿ ಪದಕಗಳನ್ನು ಮತ್ತು ಈ ವರ್ಷ ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವಕಪ್‌ನ 4ನೇ ಹಂತದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.