ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾ ಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ; ಅತ್ಯಧಿಕ 8 ಸಲ ಚಾಂಪಿಯನ್‌ ಆದ ಹೆಗ್ಗಳಿಕೆ

ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾಕಪ್‌ ಗೆದ್ದ ಹಿರಿಮೆ ಭಾರತದ್ದು.

ಏಷ್ಯಾ ಕಪ್‌: ಭಾರತ ಅತ್ಯಂತ ಯಶಸ್ವಿ ತಂಡ

-

Abhilash BC Abhilash BC Sep 7, 2025 5:44 PM

ದುಬೈ: ಏಷ್ಯಾಕಪ್​ ಟಿ20(Asia Cup 2025) ಟೂರ್ನಿಗೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಅರಬ್‌ ನಾಡಲ್ಲಿ ಸೆಪ್ಟೆಂಬರ್​ 9ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ತಾನ-ಹಾಂಕಾಂಗ್ ಸೆಣಸಾಟ ನಡೆಸಲಿದೆ. ಎಲ್ಲ ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಇದು ಏಷ್ಯಾಕಪ್‌ ಕ್ರಿಕೆಟ್‌ ಕೂಟದ 17 ಆವೃತ್ತಿ.

ಈ ಬಾರಿ ಒಟ್ಟು 8 ತಂಡಗಳು ಸೆಣಸಲಿವೆ. ಇವನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗಿದ್ದು, ರೌಂಡ್​ ರಾಬಿನ್​ ಮಾದರಿ ಲೀಗ್​ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್​ ಪಂದ್ಯ ನಡೆಯಲಿದೆ.

ಮೊದಲು ಚಾಂಪಿಯನ್‌ ಆದದ್ದೇ ಭಾರತ

ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾಕಪ್‌ ಗೆದ್ದ ಹಿರಿಮೆ ಭಾರತದ್ದು. ಸುನೀಲ್‌ ಗವಾಸ್ಕರ್‌ ಏಷ್ಯಾ ಕಪ್‌ ಎತ್ತಿದ ಮೊಲ ನಾಯಕ. ಚೊಚ್ಚಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದು ಕೇವಲ ಮೂರು ತಂಡ. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ. ಆಡಿದ್ದು ಮೂರೇ ಪಂದ್ಯ. ಇಲ್ಲಿ ಫೈನಲ್‌ ಇರಲಿಲ್ಲ. ಮೂರು ಪಂದ್ಯಗಳ ಪೈಕಿ ಎರಡು ಪಂದ್ಯ ಗೆದ್ದ ಭಾರತ ಚಾಂಪಿಯನ್‌ ಎನಿಸಿಕೊಂಡಿತು.

ಭಾರತ ಹೊರತುಪಡಿಸಿದರೆ ಏಷ್ಯಾ ಕಪ್‌ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅತ್ಯಧಿಕ 13 ಬಾರಿ ಫೈನಲ್‌ಗೆ ಲಗ್ಗೆ ಇರಿಸಿ 6 ಪ್ರಶಸ್ತಿ ಗೆದ್ದಿದೆ. ಆದರೆ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನಕ್ಕೆ ಒಲಿದದ್ದು ಕೇವಲ 2 ಕಪ್‌ ಮಾತ್ರ. ಅದು ಒಟ್ಟು 5 ಸಲ ಫೈನಲ್‌ ತಲುಪಿದೆ.

ಬಾಂಗ್ಲಾ ಅತ್ಯಧಿಕ ಆತಿಥ್ಯ

ಒಟ್ಟು ಮೂರು ಬಾರಿ ಫೈನಲ್‌ ಪ್ರವೇಶಿಸಿದರೂ ಇದುವರೆಗೂ ಕಪ್‌ ಗೆಲ್ಲದ ಬಾಂಗ್ಲಾದೇಶ, ಅತ್ಯಧಿಕ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯ ವಹಿಸಿದ ದಾಖಲೆಯನ್ನು ಹೊಂದಿದೆ. ಅದು ಅತ್ಯಧಿಕ 5 ಸಲ ಕೂಟವನ್ನು ನಡೆಸಿದೆ.

ಮೂರು ಹಂತಗಳ ಪಂದ್ಯಾವಳಿ

2004ರಲ್ಲಿ ಪಂದ್ಯಾವಳಿಯ ಮಾದರಿಯನ್ನು ಬದಲಾಯಿಸಲಾಯಿತು. ಇದು 3 ಹಂತಗಳಲ್ಲಿ ನಡೆಯಿತು. ಗ್ರೂಓ ವಿಭಾಗ, ಸೂಪರ್‌-4 ವಿಭಾಗ ಹಾಗೂ ಫೈನಲ್‌. ಈ ಬಾರಿಯೂ ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದೆ.

ಭಾರತ ಹ್ಯಾಟ್ರಿಕ್‌ ಸಾಧನೆ

ಅತ್ಯಧಿಕ ಪ್ರಶಸ್ತಿ ಗೆದ್ದರುವ ಭಾರತ, ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಏಕೈಕ ತಂಡ ಎಂಬ ದಾಲೆಯನ್ನು ಹೊಂದಿದೆ. 1988, 1990-91 ಮತ್ತು 1995ರಲ್ಲಿ ಸತತ 3 ವರ್ಷ ಭಾರತ ಪ್ರಶಸ್ತಿಯನ್ನೆತ್ತಿತ್ತು. ಮೂರು ಫೈನಲ್‌ನಲ್ಲಿ ಶ್ರೀಲಂಕಾವೇ ಎದುರಾಳಿಯಾಗಿತ್ತು.

ಟಿ20 ಮಾದರಿ

ಆರಂಭದಿಂದಲೂ ಏಕದಿನ ಮಾದರಿಲ್ಲಿ ನಡೆಯುತ್ತ ಬಂದಿದ್ದ ಏಷ್ಯಾ ಕಪ್‌ ಮಾದರಿಯನ್ನು 2016ರಲ್ಲಿ ಬದಲಾಯಿಸಲಾಯಿತು. ಇದು ಟಿ20ರೂಪ ಪಡೆಯಿತು. ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈ ಬಾರಿ ಟೂರ್ನಿ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ನಡೆಯಲಿದೆ.

ದಾಖಲೆ ವೀರರು...

ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಲಂಕಾದ ಸನತ್‌ ಜಯಸೂರ್ಯ(1,220) ಹೆಸರಿನಲ್ಲಿದೆ. ಅತಿ ಹೆಚ್ಚು ವಿಕೆಟ್‌ ಉರುಳಿಸಿದವರು ಲಸಿತ್ ಮಾಲಿಂಗ(33). ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ಹಿರಿಮೆ ವಿರಾಟ್‌ ಕೊಹ್ಲಿ ಅವರದು(183). ಅತ್ಯುತ್ತಮ ಬೌಲಿಂಗ್‌ ಫಿಗರ್‌ ಅಜಂತ ಮೆಂಡಿಸ್‌ ಅವರದಾಗಿದೆ(13ಕ್ಕೆ ವಿಕೆಟ್‌).

ಇದನ್ನೂ ಓದಿ Hockey Asia Cup 2025: ಚೀನಾ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ ತಂಡ!