ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ-ನ್ಯೂಜಿಲೆಂಡ್‌ ಸರಣಿಯ ವೇಳಾಪಟ್ಟಿ, ಪಂದ್ಯದ ನೇರ ಪ್ರಸಾರದ ಮಾಹಿತಿ

India vs New Zealand series: ನ್ಯೂಜಿಲೆಂಡ್ ಪ್ರವಾಸದ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಸೋನಿ ಟೆನ್ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಸೋನಿ ಎಲ್‌ಐವಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ನೇರ ಪ್ರಸಾರವನ್ನು ಒದಗಿಸುತ್ತದೆ.

ಭಾರತ-ನ್ಯೂಜಿಲೆಂಡ್‌ ಸರಣಿಯ ಪಂದ್ಯದ ನೇರ ಪ್ರಸಾರದ ಮಾಹಿತಿ

India vs New Zealand series -

Abhilash BC
Abhilash BC Oct 18, 2026 2:58 PM

ಆಕ್ಲೆಂಡ್‌, ಅ.18: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದ್ದು ಇದೀಗ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಟಗಾರರು ಐದು ಪಂದ್ಯಗಳ ಟಿ20 ಸರಣಿಗಾಗಿ ನ್ಯೂಜಿಲೆಂಡ್‌ಗೆ ಪ್ರಯಾಣಿಸಿದ್ದಾರೆ. ಟಿ20 ಸರಣಿಯ ನಂತರ ಐದು ಏಕದಿನ ಪಂದ್ಯಗಳು (ODI) ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿವೆ. ಇದೇ ವೇಳೆ, ಹಿರಿಯ ತಂಡದ ಟೆಸ್ಟ್ ಸರಣಿಗೂ ಮುನ್ನ, 'ಇಂಡಿಯಾ ಎ' ತಂಡವು 'ನ್ಯೂಜಿಲೆಂಡ್ ಎ' ವಿರುದ್ಧ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ಅ.22 ರಂದು ನಡೆಯಲಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಸರಣಿಗಳನ್ನು ಆಡಲಿರುವ ಭಾರತ ತಂಡವು,ಒಟ್ಟು 30ಕ್ಕೂ ಹೆಚ್ಚು ಆಟಗಾರರನ್ನು ಒಳಗೊಂಡ ಬೃಹತ್ ಪಡೆಯನ್ನು ಪ್ರಕಟಿಸಿದೆ.

ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಹೊಸ ಬ್ಯಾಟಿಂಗ್ ದಾಖಲೆಗಳತ್ತ ಶಫಾಲಿ ವರ್ಮಾ, ಸ್ಮೃತಿ ಮಂಧನಾ ಚಿತ್ತ

ಪ್ರಸಾರ ಮಾಹಿತಿ

ನ್ಯೂಜಿಲೆಂಡ್ ಪ್ರವಾಸದ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಸೋನಿ ಟೆನ್ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಸೋನಿ ಎಲ್‌ಐವಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ನೇರ ಪ್ರಸಾರವನ್ನು ಒದಗಿಸುತ್ತದೆ. ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಿನ ಮೂರು ಅನಧಿಕೃತ ಟೆಸ್ಟ್‌ಗಳನ್ನು ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಸೋನಿ ಎಲ್‌ಐವಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ವೇಳಾಪಟ್ಟಿ

ಟಿ20 ಸರಣಿ

1ನೇ ಟಿ20: ಅಕ್ಟೋಬರ್ 22, ಕ್ರೈಸ್ಟ್‌ಚರ್ಚ್

2ನೇ ಟಿ20: ಅಕ್ಟೋಬರ್ 24, ಕ್ರೈಸ್ಟ್‌ಚರ್ಚ್

3ನೇ ಟಿ20: ಅಕ್ಟೋಬರ್ 27, ವೆಲ್ಲಿಂಗ್ಟನ್

4ನೇ ಟಿ20: ಅಕ್ಟೋಬರ್ 30, ಆಕ್ಲೆಂಡ್

5ನೇ ಟಿ20: ನವೆಂಬರ್ 1, ಹ್ಯಾಮಿಲ್ಟನ್

‘ಎ’ ಸರಣಿ

ಮೊದಲ ಪಂದ್ಯ: ಅಕ್ಟೋಬರ್ 24-27, ಲಿಂಕನ್

ಎರಡನೇ ಪಂದ್ಯ: ಅಕ್ಟೋಬರ್ 31-ನವೆಂಬರ್ 3, ಕ್ರೈಸ್ಟ್‌ಚರ್ಚ್

ಮೂರನೇ ಪಂದ್ಯ: ನವೆಂಬರ್ 7-10, ಲಿಂಕನ್

ಏಕದಿನ ಸರಣಿ

1ನೇ ಏಕದಿನ ಪಂದ್ಯ: ನವೆಂಬರ್ 4, ಆಕ್ಲೆಂಡ್

2ನೇ ಏಕದಿನ ಪಂದ್ಯ: ನವೆಂಬರ್ 7, ವೆಲ್ಲಿಂಗ್ಟನ್

3ನೇ ಏಕದಿನ ಪಂದ್ಯ: ನವೆಂಬರ್ 10, ಹ್ಯಾಮಿಲ್ಟನ್

4ನೇ ಏಕದಿನ ಪಂದ್ಯ: ನವೆಂಬರ್ 13, ಮೌಂಟ್ ಮೌಂಗನುಯಿ

5ನೇ ಏಕದಿನ ಪಂದ್ಯ: ನವೆಂಬರ್ 15, ಮೌಂಟ್ ಮೌಂಗನುಯಿ

ಟೆಸ್ಟ್‌ ಸರಣಿ

1ನೇ ಟೆಸ್ಟ್: ನವೆಂಬರ್ 19-23, ವೆಲ್ಲಿಂಗ್ಟನ್

2ನೇ ಟೆಸ್ಟ್: ನವೆಂಬರ್ 27-ಡಿಸೆಂಬರ್ 1, ಕ್ರೈಸ್ಟ್‌ಚರ್ಚ್

ದೊಡ್ಡ ಗಣೇಶ್‌ಗೆ ಭಾರತ ಕಿರಿಯರ ತಂಡದ ಆಯ್ಕೆಗಾರನ ಪಟ್ಟ?

ಭಾರತ ತಂಡ

ಮೊದಲ ಮೂರು ಏಕದಿನ ಪಂದ್ಯಗಳಿಗೆ

ಶುಭಮನ್‌ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಂಬೋಜ್, ಗುರ್‌ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಶ್‌ದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ (ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟು), ಕುಲ್‌ದೀಪ್ ಯಾದವ್.

ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್.

ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳಿಗೆ

ಶ್ರೇಯಸ್ ಅಯ್ಯರ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್ ಮತ್ತು ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ನಮನ್ ಧೀರ್, ಅಕ್ವಿಬ್ ನಬಿ, ಗುರ್‌ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಶ್‌ದೀಪ್ ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್‌ಕೀಪರ್), ಮೊಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲ್‌ದೀಪ್ ಯಾದವ್.

ಟೆಸ್ಟ್‌ ತಂಡ

ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್‌ಕೀಪರ್, ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟು), ಧ್ರುವ್ ಜುರೇಲ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಅನ್ಶುಲ್ ಕಂಬೋಜ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ ಕೃಷ್ಣ, ಆಕಾಶ್ ದೀಪ್, ಸಾಯಿ ಸುಧರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಸಿರಾಜ್.