IND vs AFG 1st ODI: ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತ, ತನ್ನ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ. ಅಫ್ಘಾನಿಸ್ತಾನ ಕಳೆದ 4 ಏಕದಿನ ಪಂದ್ಯಗಳಲ್ಲೂ ಗೆದ್ದಿದೆ. ಆದರೆ ತಂಡ ಕೊನೆ ಬಾರಿಗೆ 50 ಓವರ್ ಪಂದ್ಯವಾಡಿದ್ದು 2025ರ ಅಕ್ಟೋಬರ್‌ನಲ್ಲಿ. ಹೀಗಾಗಿ ಈ ಮಾದರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು.
-
ಧರ್ಮಶಾಲಾ, ಜೂ. 13: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಟಾಸ್ ವಿಳಂಬಗೊಂಡಿದೆ. ಇಲ್ಲಿನ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಭಾರೀ ಮಳೆ ಸುರಿಯುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಸೇರಿ ಕಳೆದ 5 ಏಕದಿನ ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಭಾರತಕ್ಕೆ ಈ ಸರಣಿ ಮಹತ್ವದಾಗಿದೆ.
ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತ, ತನ್ನ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ. ಅಫ್ಘಾನಿಸ್ತಾನ ಕಳೆದ 4 ಏಕದಿನ ಪಂದ್ಯಗಳಲ್ಲೂ ಗೆದ್ದಿದೆ. ಆದರೆ ತಂಡ ಕೊನೆ ಬಾರಿಗೆ 50 ಓವರ್ ಪಂದ್ಯವಾಡಿದ್ದು 2025ರ ಅಕ್ಟೋಬರ್‌ನಲ್ಲಿ. ಹೀಗಾಗಿ ಈ ಮಾದರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಆದರೂ, ಭಾರತಕ್ಕೆ ಆಘಾತ ನೀಡಬಲ್ಲ ಸಾಮರ್ಥ್ಯ ಆಫ್ಘನ್‌ಗಿದೆ.
ಇಂಡೋ-ಪಾಕ್ ಮಹಿಳಾ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಹರ್ಮನ್ ಪಡೆ
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣವು ಸಾಮಾನ್ಯವಾಗಿ ಬ್ಯಾಟಿಂಗ್ ಮಾಡಲು, ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಅನುಕೂಲಕರವಾದ ಟ್ರ್ಯಾಕ್ ಅನ್ನು ಒದಗಿಸುತ್ತದೆ. ಸಣ್ಣ ಬೌಂಡರಿ ಆಯಾಮಗಳು ಮತ್ತು ಅದ್ಭುತವಾದ ವೇಗದ ಔಟ್‌ಫೀಲ್ಡ್ ರನ್ ಗಳಿಸಲು ಪೂರಕವಾಗಿದೆ. ಆದಾಗ್ಯೂ, ಇಲ್ಲಿ ಬೌನ್ಸ್ ಹೇರಳವಾಗಿದೆ. ಇದು ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಟಾಸ್ ಗೆದ್ದ ಯಾವುದೇ ತಂಡವು ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 360-380 ಅಧಿಕ ಹೆಚ್ಚಿನ ಮೊತ್ತವನ್ನು ದಾಖಲಿಸಬೇಕು.
🚨 Update from Dharamshala 🚨
— BCCI (@BCCI) June 13, 2026
Toss for the 1️⃣st #INDvAFG ODI has been delayed due to rain.
Stay tuned for more updates ▶️ https://t.co/lCuohEZYAl#TeamIndia | @IDFCFIRSTBank pic.twitter.com/cMPZs6Kj8r
ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷ್‌ದೀಪ್ ಸಿಂಗ್, ಕುಲದೀಪ್ ಯಾದವ್.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಮೊಹಮ್ಮದ್ ಸಲೀಮ್, ಎ.ಎಂ. ಗಜನ್ಫರ್, ಜಿಯಾವುರ್ ರೆಹಮಾನ್.