ಅಭಿಷೇಕ್ ಶರ್ಮ ಸ್ಫೋಟಕ ಅರ್ಧ ಶತಕ; ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
IND vs NZ 1st T20I: ಅಭಿಷೇಕ್ ಶರ್ಮ ಅವರ ಸ್ಫೋಟಕ ಅರ್ಧ ಶತಕ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ನ್ಯೂಜಿಲ್ಯಾಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ರನ್ ಗಳ ಗೆಲುವು ಸಾಧಿಸಿದೆ.
ಅಭಿಷೇಕ್ ಶರ್ಮ ಮತ್ತು ಸೂರ್ಯ ಕುಮಾರ್ ಯಾದವ್ -
ನಾಗ್ಪುರ, ಜ. 21: ಅಭಿಷೇಕ್ ಶರ್ಮ ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ನ್ಯೂಜಿಲ್ಯಾಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ (IND vs NZ 1st T20I) ಭಾರತ 48 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ ಭಾರತ, ಅಭಿಷೇಕ್ ಶರ್ಮ, ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 238 ರನ್ ರಾಶಿ ಹಾಕಿತು. ಈ ಬೃಹತ್ ಮೊತ್ತದ ಬೆನ್ನತ್ತಿದ ನ್ಯೂಜಿಲ್ಯಾಂಡ್ ನಿಗದಿತ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೆ ಶಕ್ತವಾಯಿತು.
ದೊಡ್ಡ ಮೊತ್ತವನ್ನು ಬೆನ್ನಟಿದ ನ್ಯೂಜಿಲ್ಯಾಂಡ್‌ಗೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಮೊದಲ ಓವರ್‌ನಲ್ಲೇ ದೊಡ್ಡ ಆಘಾತವಿಕ್ಕಿದರು. ಎರಡನೇ ಎಸೆತದಲ್ಲಿ ಔಟ್‌ಸ್ವಿಂಗ್ ಎಸೆತದ ಮೂಲಕ ಡೊವೋನ್ ಕಾನ್ವೆ(0) ವಿಕೆಟ್ ಕಿತ್ತರು. ಕೀಪರ್ ಸಂಜು ಸ್ಯಾಮ್ಸನ್ ಅಸಾಮಾನ್ಯ ಡೈವಿಂಗ್ ಕ್ಯಾಚ್ ಹಿಡಿದರು. ಮುಂದಿನ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಅಪಾಯಕಾರಿ ರಚಿನ್ ರವೀಂದ್ರ(1)ಗೆ ಪೆವಿಲಿಯನ್ ದಾರಿ ತೋರಿಸಿದರು. ಒಂದು ರನ್‌ಗೆ 2 ವಿಕೆಟ್ ಕಳೆದುಕೊಂಡ ಕಿವೀಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಗ್ಲೆನ್ ಫಿಲಿಪ್ಸ್ ಮತ್ತು ಟಿಮ್ ರಾಬಿನ್ಸನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಇನ್ನೇನು ತಂಡ ಚೇತರಿಕೆ ಹಾದಿಗೆ ಮರಳಿತು ಎನ್ನುವಷ್ಟರಲ್ಲಿ ರಾಬಿನ್ಸನ್ (21) ವಿಕೆಟ್ ಕೂಡ ಪತನಗೊಂಡಿತು. ಗ್ಲೇನ್ ಫಿಲಿಪ್ಸ್ 40 ಎಸೆತದಲ್ಲಿ 78 ರನ್ ಗಳಿಸಿದರೂ ಅವರ ಹೋರಾಟ ವ್ಯರ್ಥವಾಯಿತು.
ಅಭಿಷೇಕ್ ಬೊಂಬಾಟ್ ಬ್ಯಾಟಿಂಗ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ಅಭಿಷೇಕ್ ಶರ್ಮ ಎಂದಿನಂತೆ ತಮ್ಮ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ಆರಂಭದಿಂದಲೇ ಕಿವೀಸ್ ಬೌಲರ್‌ಗಳ ಕಿವಿ ಹಿಂಡಿದ ಅವರು, ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. ಇವರಿಗೆ ನಾಯಕ ಸೂರ್ಯಕುಮಾರ್ ಕೆಲ ಕಾಲ ಉತ್ತಮ ಜತೆಯಾಟದ ನೆರವು ನೀಡಿದರು. ಉಭಯ ಆಟಗಾರರು ಸೇರಿಕೊಂಡು 3ನೇ 99 ರನ್ ಒಟ್ಟುಗೂಡಿಸಿದರು.
ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ 32 ರನ್‌ಗೆ ವಿಕೆಟ್ ಕಳೆದುಕೊಂಡರು. ಬಾರಿಸಿದ್ದು ಒಂದು ಸಿಕ್ಸರ್ ಮತ್ತು 4 ಬೌಂಡರಿ. ಸೂರ್ಯ ವಿಕೆಟ್ ಪತನಗೊಂಡರೂ ಮತ್ತೊಂದು ತುದಿಯಲ್ಲಿ ಅಭಿಷೇಕ್ ಅಬ್ಬರದ ಬ್ಯಾಟಿಂಗ್ ಸಾಗುತ್ತಲೇ ಇತ್ತು. ಅರ್ಧಶತಕ ಪೂರೈಸಿದ ಅವರು 84 ರನ್ ಗಳಿಸಿದ ವೇಳೆ ಸಿಕ್ಸರ್ ಪ್ರಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿ ಜೇಮಿಸನ್‌ಗೆ ಕ್ಯಾಚ್ ನೀಡಿ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. 34 ಎಸೆತಗಳ ಅವರ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು.
ಅಂತಿಮ ಹಂತದಲ್ಲಿ ಸಿಡಿದು ನಿಂತ ರಿಂಕು ಸಿಂಗ್ ಕೇವಲ 20 ಎಸೆತಗಳಿಂದ 3 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ ಅಜೇಯ 44 ರನ್ ಕಲೆಹಾಕಿದರು. ಡೇರಿಯಲ್ ಮಿಚೆಲ್ ಎಸೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಿಂಕು 21 ರನ್ ದೋಚಿದರು. ಅವರ ಈ ಬ್ಯಾಟಿಂಗ್ ಆರ್ಭಟದಿಂದ ತಂಡ 200ರ ಗಡಿ ದಾಟಿತು. ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 25 ರನ್ ಬಾರಿಸಿದರು.
ಟಿ20 ವಿಶ್ವಕಪ್ ಪಂದ್ಯ ಸ್ಥಳಾಂತರಿಸುವ ಬಾಂಗ್ಲಾ ಮನವಿ ತಿರಸ್ಕರಿಸಿದ ಐಸಿಸಿ
ಆದರೆ ಆರಂಭಿಕ ಸಂಜು ಸ್ಯಾಮ್ಸನ್(10) ವಿಫಲರಾದರು. 785 ದಿನಗಳ ಬಳಿಕ ಭಾರತ ಪರ ಆಡಿದ ಇಶಾನ್ ಇಶನ್ ತಾವೆದುರಿಸಿದ ಮೊದಲ ಎಸೆವನ್ನೇ ಬೌಂಡರಿಗಟ್ಟಿ ಭಾರೀ ನಿರೀಕ್ಷೆ ಹುಟ್ಟಿಸಿದದರು. ಆದರೆ ನಿರೀಕ್ಷೆ ಹೆಚ್ಚು ಹೊತ್ತು ಸಾಗಲಿಲ್ಲ. ಎರಡೇ ಬೌಂಡರಿಗೆ ಅವರ ಆಟ ಕೊನೆಗೊಂಡಿತು. ಅವರ ಗಳಿಕೆ 8 ರನ್. ಶಿವಂ ದುಬೆ(9) ಮತ್ತು ಅಕ್ಷರ್ ಪಟೇಲ್(5) ಕೂಡ ನಿರಾಸೆ ಮೂಡಿಸಿದರು. ಕಿವೀಸ್ ಪರ ಜಾಕೋಬ್ ಡಫಿ ಮತ್ತು ಕೈಲ್ ಜಾಮಿಸನ್ ತಲಾ 2 ವಿಕೆಟ್ ಕಿತ್ತರು.
Going, going, GONE! 🚀
— BCCI (@BCCI) January 21, 2026
🎥 Rinku Singh with a fabulous final flourish to power #TeamIndia to 2⃣3⃣8⃣/7 👏
Scorecard ▶️ https://t.co/ItzV352h5X#INDvNZ | @IDFCFIRSTBank | @rinkusingh235 pic.twitter.com/BGTv4m3NxD
100ನೇ ಪಂದ್ಯವಾಡಿದ ಸೂರ್ಯಕುಮಾರ್
ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ವೃತ್ತಿಜೀವನದ ಪ್ರಮುಖ ಮೈಲಿಗಲ್ಲು ಸಾಧಿಸಿದರು. 100 ಅಥವಾ ಅದಕ್ಕಿಂತ ಹೆಚ್ಚು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ನಾಲ್ಕನೇ ಭಾರತೀಯ ಆಟಗಾರರಾದರು. ಹಾರ್ದಿಕ್ ಪಾಂಡ್ಯ (125 ಟಿ20), ವಿರಾಟ್ ಕೊಹ್ಲಿ (125), ಮತ್ತು ರೋಹಿತ್ ಶರ್ಮಾ (159) ಮೊದಲಿಗರು.