IND vs ENG Test: ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದ 'ಯಂಗ್ ಟೀಮ್ ಇಂಡಿಯಾ'
ನಾಯಕ ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲ್‌ದೀಪ್ ಯಾದವ್ ಹಾಗೂ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ದ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದರು.


ಲಂಡನ್: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್(IND vs ENG Test) ಸರಣಿಗೆ ಶುಭಮನ್ ಗಿಲ್(Shubman Gill) ನಾಯಕತ್ವದ ಭಾರತ ತಂಡವು ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಇತ್ತಂಡಗಳ ನಡುವಣ ಸರಣಿ ಜೂನ್ 20ರಿಂದ ಆರಂಭವಾಗಲಿದೆ. ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲ್‌ದೀಪ್ ಯಾದವ್ ಹಾಗೂ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ದ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಅವರ ಮಾರ್ಗದರ್ಶನದಲ್ಲಿ ಅಭ್ಯಾಸ(team India first practice session) ನಡೆಸಿದರು. ಅಭ್ಯಾಸದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಕೆ.ಎಲ್. ರಾಹುಲ್, ಕರುಣ್ ನಾಯರ್ ಸೇರಿದಂತೆ ಕೆಲವು ಆಟಗಾರರು ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಈಗಾಗಲೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡನೇ ಅನಧೀಕೃತ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ.
𝗣𝗿𝗲𝗽 𝗕𝗲𝗴𝗶𝗻𝘀 ✅
— BCCI (@BCCI) June 8, 2025
First sight of #TeamIndia getting into the groove in England 😎#ENGvIND pic.twitter.com/TZdhAil9wV
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ಅವರ ನಿವೃತ್ತಿಯಿಂದ ತಂಡದಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತಿದೆ. ಯುವ ಆಟಗಾರರು ಆಂಗ್ಲರನ್ನು ಮೆಟ್ಟಿ ನಿಂತದಲ್ಲಿ ಭಾರತೀಯ ಟೆಸ್ಟ್ ಭವಿಷ್ಯ ಯುವ ಆಟಗಾರರ ಕೈಯಲ್ಲಿ ಸುಭದ್ರವಾಗಿದೆ ಎನ್ನಬಹುದು. ಭಾರತ 2007ರ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಧೋನಿ, ವಿರಾಟ್ ಮತ್ತು ರೋಹಿತ್‌ಗೆ ಸಾಧ್ಯವಾಗದನ್ನು ಶುಭಮನ್ ಗಿಲ್ ಮೊದಲ ಪ್ರಯತ್ನದಲ್ಲೇ ಸಾಧಿಸಿ ತೋರಿಸಬಹುದೇ ಎಂದು ಕಾದು ನೋಡಬೇಕಿದೆ.
ಭಾರತ ಟೆಸ್ಟ್ ತಂಡ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ(ಕೆಲವು ಪಂದ್ಯಕ್ಕೆ ಮಾತ್ರ), ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.
ಇದನ್ನೂ ಓದಿ IND vs ENG Test: ಭಾರತದ ನೂತನ ಕಂಡೀಷನಿಂಗ್ ಕೋಚ್ ಆಗಿ ಆಡ್ರಿಯನ್ ಲೆ ರೌಕ್ಸ್ ನೇಮಕ
ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್; ಜೂನ್ 20, ಹೆಡಿಂಗ್ಲೆ
ದ್ವಿತೀಯ ಟೆಸ್ಟ್: ಜುಲೈ 2, ಎಡ್ಜ್‌ಬಾಸ್ಟನ್
ಮೂರನೇ ಟೆಸ್ಟ್: ಜುಲೈ 10, ಲಾರ್ಡ್ಸ್
ನಾಲ್ಕನೇ ಟೆಸ್ಟ್: ಜುಲೈ 23, ಓಲ್ಡ್ ಟ್ರಾಫರ್ಡ್
ಐದನೇ ಟೆಸ್ಟ್: ಜುಲೈ 31, ಕೆನ್ನಿಂಗ್ಟನ್ ಓವಲ್